ನವದೆಹಲಿ : ಕರೋನಾ ಮೂರನೇ ಅಲೆ (Corona third wave) ಭೀತಿ ಎದುರಾಗಿದೆ. ಇದೀಗ ದೇಶದಲ್ಲಿ ಕರೋನ ಲಸಿಕೆ ಅಭಿಯಾನ ಚುರುಕುಗೊಂಡಿದೆ. ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡರೆ ಮಾತ್ರ, ಸರ್ಕಾರಿ ಮಳಿಗೆಗಳಿಂದ ಮದ್ಯವನ್ನು ಖರೀದಿಸಲು ಸಾಧ್ಯವಾಗುತ್ತದೆ. ತಮಿಳುನಾಡಿನ ನೀಲಗಿರಿ (Tamilnadu Nilgiri) ಜಿಲ್ಲೆಯಲ್ಲಿ ಅಧಿಕಾರಿಗಳು ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಪ್ರೇರೇಪಿಸುವ ಅಭಿಯಾನದ ಭಾಗವಾಗಿದೆ ಈ ನಿಯಮ ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆಯ ಸರ್ಟಿಫಿಕೇಟ್ ತೋರಿಸಿದರೆ ಮಾತ್ರ ಮದ್ಯ :
ನೀಲಗಿರಿಯ ನಿವಾಸಿಗಳು ಸರ್ಕಾರಿ ಮಳಿಗೆಗಳಿಂದ ಮದ್ಯವನ್ನು ಖರೀದಿಸಬೇಕಾದರೆ, ಮೊದಲು ಎರಡೂ ಡೋಸ್ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು (Vaccination certificate) ತೋರಿಸಬೇಕು. ಜಿಲ್ಲೆಯ ಸುಮಾರು 97 ಪ್ರತಿಶತದಷ್ಟು ಜನರಿಗೆ ಮೊದಲ ಅಥವಾ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ತಿಳಿಸಿದ್ದಾರೆ.
ಇದನ್ನೂ ಓದಿ : WhatsApp ಯಾವ ಕ್ಷಣದಲ್ಲಾದರೂ ಪರಿಚಯಿಸಬಹುದು ಈ ವೈಶಿಷ್ಟ್ಯ, ನಿಮಗೆಷ್ಟು ಲಾಭದಾಯಕ ತಿಳಿಯಿರಿ
ಲಸಿಕೆಯ ಬಗ್ಗೆ ಜನರ ಮನಸ್ಸಿನಲ್ಲಿರುವ ಸಂದೇಹ :
ಲಸಿಕೆಯ ಬಗ್ಗೆ ಎಲ್ಲಾ ರೀತಿಯ ವದಂತಿಗಳು ಮತ್ತು ತಪ್ಪು ಮಾಹಿತಿಗಳು ಜನರ ಮಧ್ಯೆ ಹರಡಿದೆ. ಲಸಿಕೆಯ ಬಗ್ಗೆ ಜನರಲ್ಲಿರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಇಲ್ಲಿನ ಅಧಿಕಾರಿಗಳು ಲಸಿಕೆಯ (Vaccine) ಬಗ್ಗೆ ಜಾಗೃತಿ ಅಭಿಯಾನವನ್ನು ಆರಂಭಿಸಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದೆ. ಎಷ್ಟೇ ಮನವಿ ಮಾಡಿದರೂ ಜನರು ಇನ್ನೂ ಲಸಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ಕೋವಿಡ್ ಪೋರ್ಟಲ್ (COVID Portal) ಅನ್ನು ಅಪ್ ಡೆಟ್ ಮಾಡಲಾಗುತ್ತಿದೆ. ಕೆಲವರು ತಾವು ಆಲ್ಕೊಹಾಲ್ ಸೇವಿಸುತ್ತಿದ್ದು, ಲಸಿಕೆ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ಹೇಳಿರುವ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಲಸಿಕೆ ಹಾಕುವ ಸಲುವಾಗಿ, ಯಾರು ಮದ್ಯ ಖರೀದಿಸಲು ಬಯಸುತ್ತಾರೋ ಅವರು ಮೊದಲು ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣಪತ್ರವನ್ನು ತೋರಿಸಬೇಕು ಎಂದು ಹೇಳಲಾಗಿದೆ. TASMAC ಮಳಿಗೆಗಳಲ್ಲಿ ಮದ್ಯವನ್ನು ಖರೀದಿಸಲು, ಲಸಿಕೆ ಪ್ರಮಾಣಪತ್ರದೊಂದಿಗೆ ಆಧಾರ್ ಕಾರ್ಡ್ ಸಲ್ಲಿಸುವುದು ಕೂಡಾ ಅಗತ್ಯವಾಗಿದೆ.
ಇದನ್ನೂ ಓದಿ : Redmi 10 Prime, Redmi TWS Earbuds ಇಂದು ಭಾರತದಲ್ಲಿ ಬಿಡುಗಡೆ, ಇಲ್ಲಿದೆ ಫುಲ್ ಡೀಟೇಲ್ಸ್
ತಮಿಳುನಾಡಿನ ನೀಲಗಿರಿ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಲಾಕ್‌ಡೌನ್‌ನಿಂದಾಗಿ ಇಲ್ಲಿನ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಕೂಡಾ ಕೆಟ್ಟ ಪರಿಣಾಮ ಬೀರಿದೆ. ಆದರೆ, ಇದೀಗ ನಿಧಾನವಾಗಿ ಪ್ರವಾಸೋದ್ಯಮವನ್ನು ಮತ್ತೆ ಆರಂಭಿಸಲಾಗಿದೆ. ಈ ವಾರದಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.