Largest Railway Junction: ಇದು ಭಾರತದ ಅತಿದೊಡ್ಡ ರೈಲ್ವೆ ಜಂಕ್ಷನ್! ದೇಶದ ಮೂಲೆ ಮೂಲೆಗೂ ಇಲ್ಲಿಂದ ಸಿಗುತ್ತೆ ರೈಲು ಸೇವೆ…

Largest Railway Junction in India: ಈ ರೈಲು ನಿಲ್ದಾಣ ಎಂದೂ ಸಹ ಖಾಲಿಯಾಗಿಲ್ಲ. ಇಲ್ಲಿ ದಿನದ 24 ಗಂಟೆಯೂ ರೈಲು ಸಂಚಾರವಿದೆ. ಭಾರತದ ಯಾವುದೇ ಮೂಲೆಗೆ ಹೋಗಲು ಸಹ ನೀವು ಈ ಜಂಕ್ಷನ್‌ ನಿಂದ ರೈಲು ಹಿಡಿಯಬಹುದು. ಈ ಜಂಕ್ಷನ್ ಎಲ್ಲಿದೆ ಮತ್ತು ಅದರ ವಿಶೇಷತೆಗಳೇನು ಎಂದು ತಿಳಿಯೋಣ.

Written by - Bhavishya Shetty | Last Updated : Jun 4, 2023, 07:49 AM IST
    • ಭಾರತೀಯ ರೈಲ್ವೇ ವಿಶ್ವದ 5 ದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದೆ
    • ಇಂದು ನಾವು ನಿಮಗೆ ಭಾರತದ ಅತಿದೊಡ್ಡ ರೈಲ್ವೆ ಜಂಕ್ಷನ್ ಬಗ್ಗೆ ಹೇಳಲಿದ್ದೇವೆ.
    • ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಮಥುರಾ ರೈಲ್ವೆ ಜಂಕ್ಷನ್ ನಿರ್ಮಿಸಲಾಗಿದೆ.
Largest Railway Junction: ಇದು ಭಾರತದ ಅತಿದೊಡ್ಡ ರೈಲ್ವೆ ಜಂಕ್ಷನ್! ದೇಶದ ಮೂಲೆ ಮೂಲೆಗೂ ಇಲ್ಲಿಂದ ಸಿಗುತ್ತೆ ರೈಲು ಸೇವೆ… title=
Mathura Railway Junction

Largest Railway Junction in India: ಭಾರತೀಯ ರೈಲ್ವೇ ವಿಶ್ವದ 5 ದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದೆ. ಇದಷ್ಟೇ ಅಲ್ಲದೆ, ತನ್ನೊಳಗೆ ಇಂತಹ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಸಂಪೂರ್ಣವಾಗಿ ಭಾರತೀಯ ರೈಲ್ವೆ ಬಗ್ಗೆ ತಿಳಿದುಕೊಂಡರೆ, ಖಂಡಿತವಾಗಿಯೂ ನೀವು ಹೆಮ್ಮೆಪಡುತ್ತೀರಿ. ಇಂದು ನಾವು ನಿಮಗೆ ಭಾರತದ ಅತಿದೊಡ್ಡ ರೈಲ್ವೆ ಜಂಕ್ಷನ್ ಬಗ್ಗೆ ಹೇಳಲಿದ್ದೇವೆ.

ಇದನ್ನೂ ಓದಿ: ನಿಮ್ಮ ಲವರ್‌ ಹತ್ರ ಈ ಗುಣಗಳಿದ್ರೆ ಮದುವೆ ಆಗಿ ಬಿಡಿ..! ತಡ ಮಾಡಬೇಡಿ..

ರೈಲು ನಿಲ್ದಾಣ ಎಂದೂ ಸಹ ಖಾಲಿಯಾಗಿಲ್ಲ. ಇಲ್ಲಿ ದಿನದ 24 ಗಂಟೆಯೂ ರೈಲು ಸಂಚಾರವಿದೆ. ಭಾರತದ ಯಾವುದೇ ಮೂಲೆಗೆ ಹೋಗಲು ಸಹ ನೀವು ಈ ಜಂಕ್ಷನ್‌ ನಿಂದ ರೈಲು ಹಿಡಿಯಬಹುದು. ಈ ಜಂಕ್ಷನ್ ಎಲ್ಲಿದೆ ಮತ್ತು ಅದರ ವಿಶೇಷತೆಗಳೇನು ಎಂದು ತಿಳಿಯೋಣ.

ಇದು ದೇಶದ ಅತಿ ದೊಡ್ಡ ರೈಲ್ವೆ ಜಂಕ್ಷನ್ ಆಗಿದ್ದು, ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಮಥುರಾ ರೈಲ್ವೆ ಜಂಕ್ಷನ್ ನಿರ್ಮಿಸಲಾಗಿದೆ. ಈ ಜಂಕ್ಷನ್ ಉತ್ತರ ಮಧ್ಯ ರೈಲ್ವೆ ಅಡಿಯಲ್ಲಿ ಬರುತ್ತದೆ. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಗೆ 7 ವಿವಿಧ ಮಾರ್ಗಗಳ ರೈಲುಗಳು ಈ ಜಂಕ್ಷನ್ ಮೂಲಕ ಹಾದು ಹೋಗುತ್ತವೆ. ಈ ನಿಲ್ದಾಣದಲ್ಲಿ ಒಟ್ಟು 10 ಪ್ಲಾಟ್‌ಫಾರ್ಮ್‌ ಗಳಿದ್ದು, ಇವುಗಳ ಮೇಲೆ ಸದಾ ರೈಲುಗಳ ಸಂಚಾರವಿರುತ್ತದೆ.

ನೀವು ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ಈ ಜಂಕ್ಷನ್‌ ಗೆ (ಮಥುರಾ ರೈಲ್ವೆ ಜಂಕ್ಷನ್) ಬರಬಹುದು. ನಿತ್ಯ ನೂರಾರು ರೈಲುಗಳು ಇಲ್ಲಿಂದ ಸಾಗುವುದನ್ನು ನೋಡಬಹುದು. ದೇಶದ ಯಾವುದೇ ಮೂಲೆಗೆ ಹೋಗಲು ನೀವು ಇಲ್ಲಿಂದ ರೈಲು ಹಿಡಿಯಬಹುದು. 1875 ರಲ್ಲಿ ಮೊದಲ ಬಾರಿಗೆ ಈ ಜಂಕ್ಷನ್‌ ನಲ್ಲಿ ರೈಲು ಓಡಿಸಲಾಯಿತು. ಇದರ ನಂತರ, 1889 ರಲ್ಲಿ, ಮಥುರಾ-ವೃಂದಾವನ ನಡುವೆ 11 ಕಿಮೀ ಉದ್ದದ ಮೀಟರ್ ಗೇಜ್ ಮಾರ್ಗವನ್ನು ಪ್ರಾರಂಭಿಸಲಾಯಿತು.

ಇದನ್ನೂ ಓದಿ:Team Indiaದ ಈ ಇಬ್ಬರು ಆಟಗಾರರಿಗೆ ಭಯಪಡುತ್ತಿದೆಯಂತೆ ಆಸ್ಟ್ರೇಲಿಯಾ! ರಹಸ್ಯ ಬಿಚ್ಚಿಟ್ಟ ಪಾಂಟಿಂಗ್

ರೈಲ್ವೇ ಮೂಲಗಳ ಪ್ರಕಾರ, ಈ ಜಂಕ್ಷನ್ (ಮಥುರಾ ರೈಲ್ವೇ ಜಂಕ್ಷನ್) ದೇಶದ 100 ರೈಲು ನಿಲ್ದಾಣಗಳಲ್ಲಿ ಅತಿ ಹೆಚ್ಚು ಬುಕ್ಕಿಂಗ್‌ ಗಳನ್ನು ಹೊಂದಿದೆ. ಈ ಸಾಧನೆಯ ಹೊರತಾಗಿಯೂ, ಜಂಕ್ಷನ್‌ ನಲ್ಲಿ ಸ್ವಚ್ಛತೆಯ ಕೊರತೆಯು ರೈಲ್ವೆಗೆ ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ) 2018 ರ ವರದಿಯ ಪ್ರಕಾರ, ಸಮೀಕ್ಷೆ ಮಾಡಿದ 75 ಪ್ರಮುಖ ನಿಲ್ದಾಣಗಳಲ್ಲಿ ಈ ನಿಲ್ದಾಣವನ್ನು ಕನಿಷ್ಠ ಸ್ವಚ್ಛ ಎಂದು ಘೋಷಿಸಲಾಗಿದೆ. ಅಂದಿನಿಂದ ನಿರಂತರವಾಗಿ ಅಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News