ನವದೆಹಲಿ: ಗಗನ್ ಯಾನ್ ಮಿಶನ್ ಗೆ ಸಂಬಂಧಿಸಿದಂತೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಸಿದ್ಧತೆಯಲ್ಲಿ ತೊಡಗಿದೆ. 2021ರ ಕೊನೆಯಲ್ಲಿ ಅಥವಾ 2022ರ ಆರಂಭದಲ್ಲಿ ಈ ಮಿಶನ್ ಅನ್ನು ಸಫಲಗೊಳಿಸಲು ಇಸ್ರೋ ಯಾವುದೇ ಕೊರತೆ ಎದುರಿಸದಿರಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಈ ಮಿಶನ್ ಗೆ ಸಂಬಂಧಿಸಿದಂತೆ ಆಯಿಜಿಸಲಾಗಿದ್ದ ಮೂರು ದಿನಗಳ ಸೆಮಿನಾರ್ ಒಂದರಲ್ಲಿ ಮಾತನಾಡಿರುವ ಇಸ್ರೋ ಅಧ್ಯಕ್ಷ ಕೆ. ಸಿವನ್, ಮಾನವ ಸಹಿತವಾಗಿರುವ ಈ ಮಿಷನ್ ಗೆ ಸಂಬಂಧಿಸಿದಂತೆ ಎಲ್ಲ ಮಾನದಂಡಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇಸ್ರೋದ ಮಹತ್ವಾಕಾಂಕ್ಷಿ ಮಿಶನ್ ಆಗಿರುವ ಇದರಲ್ಲಿ ಈಗಾಗಲೇ ರಿ-ಎಂಟ್ರಿ ಸಿಸ್ಟಮ್, ರಿಕವರಿ ಸಿಸ್ಟಮ್, ಕ್ರೂ-ಎಸ್ಕೇಪ್ ಸಿಸ್ಟಮ್ ಗಳನ್ನು ಸಿದ್ಧಪಡಿಸಲಾಗಿದ್ದು, ಇದೀಗ ನಾವು ಲೈಫ್ ಸಪೋರ್ಟ್ ಸಿಸ್ಟಮ್ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ಸಿವನ್ ಹೇಳಿದ್ದಾರೆ.
ಭಾರತದ ವತಿಯಿಂದ ಆಯ್ಕೆಯಾದ ಏರ್ಫೋರ್ಸ್ ನ ಸೈನಿಕರ ತರಬೇತಿ ಇದೆ ತಿಂಗಳಿನಲ್ಲಿ ರಷ್ಯಾದಲ್ಲಿ ಆರಂಭಗೊಳ್ಳಲಿದೆ. ಆದರೆ, ವಿಶ್ವಾದ್ಯಂತ ಇರುವ ಎಲ್ಲ ಬಾಹ್ಯಾಕಾಶ ಸಂಸ್ಥೆಗಳ ನೆರವೂ ಸಹ ಇದರಲ್ಲಿ ಪಡೆಯಲಾಗುತ್ತಿದೆ ಎಂದು ಶಿವನ ಹೇಳಿದ್ದಾರೆ. ಅಂತರಿಕ್ಷದಲ್ಲಿ ಮಾನವನನ್ನು ಕಳುಹಿಸುವುದಕ್ಕೂ ಮುನ್ನ ಎರಡು ಬಾರಿ ರೋಬೋಟ್ ( ಮಾನವ ರೀತಿ ಕಾಣಿಸುವ ಹ್ಯೂಮನೈಡ್ ಮಾಡೆಲ್ ) ಅನ್ನು ಕಳುಹಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ಸಿದ್ಧತೆ ನಡೆಸಿದೆ. ಈ ರೋಬೋಟ್ ಗೆ 'ವ್ಯೋಮಮಿತ್ರ' ಎಂದು ಹೆಸರಿಡಲಾಗಿದೆ. ಮಾನವ ಸಹಿತ ಮಿಶನ್ ವೇಳೆ ನಡೆಯಲಿರುವ ಸಂಭವನೀಯ ಆತಂಕಗಳನ್ನು ಅರಿತು ಅವುಗಳನ್ನು ನಿವಾರಿಸುವುದು ಇಸ್ರೋನ ಉದ್ದೇಶವಾಗಿದೆ.
ಗಗನ್ ಯಾನ್ ಅನ್ನು ಕೊಂಡೊಯ್ಯಲು ಹ್ಯೂಮನೈಡ್ ರೇಟೆಡ್ ಎಂಕೆ 3 ಮಾಡ್ಯೂಲ್ ನ ಪ್ರಯೋಗ ನಡೆಸಲಾಗುತ್ತಿದೆ, ಇದು GSLV ಹಾಗೂ GSLV-2 ಕ್ಕಿಂತ ಕೊಂಚ ಭಿನ್ನವಾಗಿದೆ. ಕಾರಣ ಆಗಸದಲ್ಲಿ ಗಗನಯಾತ್ರಿಗಳ ಸುರಕ್ಷತೆ ಇದರ ಹಿಂದಿನ ಉದ್ದೇಶವಾಗಿದೆ. ಈ ಯಾನದಲ್ಲಿ ಕ್ರೂ ಎಸ್ಕೇಪ್ ಸಿಸ್ಟಮ್ ಅಳವಡಿಸಲಾಗುತ್ತಿದ್ದು, ಇದರಿಂದ ವಿಪರೀತ ಪರಿಸ್ಥಿತಿಯಲ್ಲಿ ಯಾತ್ರಿಗಳು ಸುಲಭವಾಗಿ ಪಾರಾಗಬಹುದು. ಈ ಯಾನದ ಆಂತರಿಕ ಭಾಗದಲ್ಲಿ ಇಂಟಲಿಜೆಂಟ್ ಹೆಲ್ತ್ ಸಿಸ್ಟಮ್ ಕೂಡ ಇರಲಿದ್ದು, ಇದರಿಂದ ಕಾಲ ಕಾಲಕ್ಕೆ ಗಗನಯಾತ್ರಿಗಳ ಆರೋಗ್ಯದ ಕಾಳಜಿ ವಹಿಸಲಾಗುವುದು. ಜೊತೆಗೆ ಯಾವುದೇ ರೀತಿಯ ತಾಂತ್ರಿಕ ಅಡಚಣೆಯನ್ನು ಸಮಯಕ್ಕೂ ಮುನ್ನವೇ ಗುರುತಿಸಲು ಸಿಸ್ಟಮ್ ಕೂಡ ಅಳವಡಿಸಲಾಗುತ್ತಿದೆ.
ಹೇಗಿರಲಿದೆ ಹ್ಯೂಮನೈಡ್ ಮಾಡೆಲ್?
ಹ್ಯೂಮನೈಡ್ ಮಾಡೆಲ್ ಅಂದರೆ ಮಾನವನ ರೀತಿಯೇ ಕಾಣಿಸುವ ಒಂದು ರೋಬೋಟ್ ಆಗಿರಲಿದೆ. ಅದನ್ನು ಮೊದಲು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಈ ಹ್ಯೂಮನೈಡ್ ಮಾಡೆಲ್ ಗೆ 'ವ್ಯೋಮಮಿತ್ರ' ಎಂದು ಹೆಸರಿಡಲಾಗಿದೆ. ಈ ರೋಬೋಟ್ ನ ದೇಹದ ಅರ್ಧ ಭಾಗ ಮಾತ್ರ ಕಳುಹಿಸಲಾಗುತ್ತಿದ್ದು, ಇದು ಕಾಲು ರಹಿತ ರೋಬೋಟ್ ಆಗಿರಲಿದೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆಯ ಕೊರತೆಯ ಕಾರಣ ನಡೆದಾಡಲು ಸಾಧ್ಯವಿಲ್ಲ ಆದರಿಂದ ಇದಕ್ಕೆ ಕಾಲುಗಳನ್ನು ಅಳವಡಿಸಲಾಗಿಲ್ಲ. ಗಗನಯಾತ್ರಿಗಳು ನಿರ್ವಹಿಸುವ ಎಲ್ಲ ರೀತಿಯ ಕಾರ್ಯಗಳನ್ನು ಮಾಡಲು 'ವ್ಯೋಮಮಿತ್ರ'ನ್ನು ರೂಪಿಸಲಾಗಿದೆ.