ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭೂಮಿಯ ಮೇಲೆ ನಿಗಾ ಇಡುವ ರೇಡಾರ್ ಇಮೇಜಿಂಗ್ ಪರಿವೀಕ್ಷಕ ಉಪಗ್ರಹ RISAT-2B ಅನ್ನು ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಿಸ್ಯಾಟ್-2ಬಿಯನ್ನ ಹೊತ್ತ ಪಿಎಸ್‌ಎಲ್‌ವಿ-ಸಿ46 ಇಂದು ಬೆಳಗ್ಗೆ 5.30ರ ಸುಮಾರಿಗೆ ಬಾನಂಗಳಕ್ಕೆ ನೆಗೆಯಿತು. ಉಡಾವಣೆಯಾದ 15 ನಿಮಿಷಗಳಲ್ಲಿ ಉಪಗ್ರಹವು ಕಕ್ಷೆ ಸೇರಿದೆ.
#ISROMissions#PSLVC46 lifts-off from Sriharikota.
Here's a shot of the first stage separation.
Stay tuned !!! pic.twitter.com/qJ20Zfprmr
— ISRO (@isro) May 22, 2019
ಇದು ಭಾರತೀಯ ರಕ್ಷಣಾ ಪಡೆಗೆ ಸಂಬಂಧಿಸಿದ ಉಪಗ್ರಹವಾಗಿದ್ದು, ದೇಶದ ಗಡಿಯಲ್ಲಿ ಉಗ್ರರ ಕಾರ್ಯ ಚಟುವಟಿಕೆ ಮೇಲೆ ನಿಗಾ ಇರಿಸುವ ಉಪಗ್ರಹವಾಗಿದೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
🇮🇳 #ISROMissions 🇮🇳#PSLVC46 successfully injects #RISAT2B into Low Earth Orbit.
Here's the view of #RISAT2B separation captured by our onboard cameraOur updates will continue. pic.twitter.com/WUTBdNH2XJ
— ISRO (@isro) May 22, 2019
ರಿಸ್ಯಾಟ್-2ಬಿ ಉಪಗ್ರಹವು 615 ಕೆಜಿ ತೂಕವಿದೆ. ಇದು ಭೂಮಿಯಿಂದ 557 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಕಾರ್ಯಾಚರಣೆ ನಡೆಸಲಿದೆ. ಅರಣ್ಯ ಸಂರಕ್ಷಣೆ ಹಾಗೂ ನೈಸರ್ಗಿಕ ವಿಕೋಪ ನಿರ್ವಹಣೆಗೆ ಈ ಉಪಗ್ರಹ ಸಹಕಾರಿಯಾಗಲಿದೆ.