ನವದೆಹಲಿ: ನಟ ಮತ್ತು ಮಕ್ಕಳ್ ನೀದಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ರಜನಿಕಾಂತ್ ಗೆ ಮೈತ್ರಿ ಆಹ್ವಾನವಿತ್ತಿದ್ದಾರೆ.
ಒಂದು ವೇಳೆ ಇಬ್ಬರು ತಂಡವಾದರೆ ರಾಜಕೀಯವಾಗಿ ಅದು ಹಿಟ್ ಆಗಲಿದೆ ಎನ್ನುವ ಅಭಿಪ್ರಾಯವನ್ನು ಕಮಲ್ ಹಾಸನ್ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಶೋ ಸಂದರ್ಭದಲ್ಲಿ ಅವರು 'ನಾನು ನಾವಾದಾರೆ' ಅದು ರಾಜಕೀಯವಾಗಿ ಹಿಟ್ ಆಗಲಿದೆ ಎನ್ನುವ ಮಾತನ್ನು ಅವರು ಪ್ರಸ್ತಾಪಿಸಿದ್ದರು. ಆದರೆ ಅದನ್ನು ಚಾನಲ್ ಕತ್ತರಿಸಿತ್ತು.
ಇದಾದ ನಂತರ ಎಂಎನ್‌ಎಂ ವಕ್ತಾರ ಮುರಳಿ ಅಪ್ಪಾಸ್ ಅವರು ಅಳಿಸಿದ ಕ್ಲಿಪ್‌ನೊಂದಿಗೆ ಪಠ್ಯವನ್ನು ಪೋಸ್ಟ್ ಮಾಡಿದ್ದಾರೆ, ಪ್ರದರ್ಶನದಲ್ಲಿ ಅದನ್ನು ಏಕೆ ಅಳಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು, ಅಲ್ಲಿ ಕಮಲ್ ಆಂಕರ್ ಆಗಿ ಭಾಗವಹಿಸಿದ್ದ ವೇಳೆ ಚಲನಚಿತ್ರ ನಿರ್ಮಾಪಕ ಚೆರನ್ ಅವರು ಚುನಾವಣಾ ಮೈತ್ರಿ ಕುರಿತು ಕೇಳಿದ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದ್ದರು. ಈ ಪೋಸ್ಟ್ ಸಾಮಾಜಿಕ ವಲಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು.
ಆದರೆ ಈಗ ಕಮಲ್ ಹಾಸನ್ ಇಟ್ಟಿರುವ ಈ ಚುನಾವಣಾ ಮೈತ್ರಿ ಪ್ರಸ್ತಾವವನ್ನು ಅವರು ರಜನಿಕಾಂತ್ ಸ್ವೀಕರಿಸುತ್ತಾರೋ ಇಲ್ಲವೋ ಎನ್ನುವದನ್ನು ನಾವು ಕಾಯ್ದು ನೋಡಬೇಕಾಗಿದೆ.