ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರದಂದು ಮೋದಿ ಸರಕಾರವನ್ನು ತರಾಟೆಗೆ ತಗೆದುಕೊಂಡರು. ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ಗೆ 17 ಪೈಸೆ ಮತ್ತು ಡೀಸೆಲ್ 21 ಪೈಸೆ ಹೆಚ್ಚಿಸಿರುವ ನಿರ್ಧಾರಕ್ಕೆ ಕಿಡಿಕಾರಿರುವ ರಾಹುಲ್ ಮೋದಿ ಅರ್ಥ ಶಾಸ್ತ್ರದ ಮೂಲ ತತ್ವ ಸಾಧ್ಯವಾದಷ್ಟು ಜನರನ್ನು ಮೂರ್ಖರನ್ನಾಗಿಸುವುದು ಎಂದು ಟ್ವೀಟ್ ಮಾಡಿದ್ದಾರೆ.
Karnataka finishes voting, FUEL prices rise to a 4 yr. high!
The Key Principle of Modinomics: fool as many people as you can, as often as you can. #PeTrolledhttps://t.co/TdRP20rfAb
— Rahul Gandhi (@RahulGandhi) May 14, 2018
"ಕರ್ನಾಟಕ ಮತದಾನ ಮುಕ್ತಾಯಗೊಂಡಿದೆ, ಇಂಧನ ಬೆಲೆಗಳು ನಾಲ್ಕು ವರ್ಷಗಳಲ್ಲಿ ಅಧಿಕ ಮಟ್ಟಕ್ಕೆ ಏರಿವೆ. ಮೋದಿ ಅರ್ಥಶಾಸ್ತ್ರದ ಪ್ರಮುಖ ತತ್ವವೇನೆಂದರೆ ಎಷ್ಟು ಸಾಧ್ಯವೋ ಅಷ್ಟು ಜನರನ್ನು ನೀವು ಮೂರ್ಖರನ್ನಾಗಿ ಮಾಡುವುದು ಎಂದು ತಿಳಿಸಿದ್ದಾರೆ.
ಸೋಮವಾರದಂದು ಸಾರ್ವಜನಿಕ ತೈಲ ಕಂಪೆನಿಗಳು ಅಂತರರಾಷ್ಟ್ರೀಯ ದರದ ಅನುಗುಣವಾಗಿ ತೈಲದ ಬೆಳೆಗಳಲ್ಲಿ ಹೆಚ್ಚಳಗೊಳಿಸಿದೆ. ಈಗ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 74.63 ರೂದಿಂದ 74.80 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರ 65.93 ರೂ.ನಿಂದ 66.14 ರೂ.ಗೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.