ನವದೆಹಲಿ: ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿರುವ ಮೋದಿ ಸರ್ಕಾರದ ತೀರ್ಮಾನದ ನಂತರ, ಜನರು ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದೊಂದಿಗೆ ಸಂಯೋಜನೆಗೊಳ್ಳಲು ಪ್ರಾರ್ಥಿಸಬೇಕು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದರು.
ದೇಶದಲ್ಲಿ ಪಿಒಕೆ ಏಕೀಕರಣ ಗೊಳ್ಳುವುದನ್ನು ನಾವು ನೋಡಬೇಕು ಮತ್ತು ಮುಜಫರಾಬಾದ್‌ಗೆ ಹೋಗುವ ಜನರು ಅಡೆತಡೆಯಿಲ್ಲದೆ ಓಡಾಡುವಂತಾಗಲಿ ಎಂದು ನಾವು ಪ್ರಾರ್ಥಿಸಬೇಕು ಎಂದು ಜಿತೇಂದ್ರ ಸಿಂಗ್ ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವುದು ನಮ್ಮ ಜೀವಿತಾವಧಿಯಲ್ಲಿ ನಡೆದಿರುವುದು ನಮ್ಮ ಅದೃಷ್ಟ ಎಂದು ಬಣ್ಣಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ನಮ್ಮ ಮೂರು ತಲೆಮಾರುಗಳ ತ್ಯಾಗದಿಂದಾಗಿ ಇದು ಸಾಧ್ಯವಾಯಿತು. ಈ ಐತಿಹಾಸಿಕ ಹೆಜ್ಜೆಯ ನಂತರ, ಪಿಒಕೆ ಅನ್ನು ಪಾಕಿಸ್ತಾನದ ಅಕ್ರಮ ಆಕ್ರಮಣದಿಂದ ಮುಕ್ತಗೊಳಿಸಿ ಅದನ್ನು ದೇಶದ ಅವಿಭಾಜ್ಯ ಅಂಗವನ್ನಾಗಿ ಮಾಡುವ ಸಕಾರಾತ್ಮಕ ಚಿಂತನೆಯೊಂದಿಗೆ ಮುಂದುವರಿಯೋಣ ಎಂದು ಕರೆ ನೀಡಿದರು.