Corona New Instructions - ಕೊರೊನಾ (Covid-19) ಕಾರಣ ಕೇಂದ್ರ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚಿಸಲಾಗಿತ್ತು. ಆದರೆ, ಬರುವ ಸೋಮವಾರದಿಂದ ಎಲ್ಲಾ ಸರ್ಕಾರಿ ನೌಕರರಿಗೆ ಕಚೇರಿಗೆ ಬಂದು ಹಾಜರಾಗಲು ಸೂಚಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ (Jitendra Singh) ಹೇಳಿದ್ದಾರೆ.
ಸಿಬ್ಬಂದಿ ನೇಮಕಾತಿ ಮಾಡುವ ಯುಪಿಎಸ್ಸಿಯಲ್ಲಿಯೇ 485 ಹುದ್ದೆಗಳು ಖಾಲಿ ಬಿದ್ದಿವೆ. ಇದರಲ್ಲಿ A ಗುಂಪಿನ 45, B ಗುಂಪಿನ 240 ಮತ್ತು C ಗುಂಪಿನ 200 ಹುದ್ದೆಗಳು ಸೇರಿವೆ ಎಂದು ಅವರು ತಿಳಿಸಿದ್ದಾರೆ.
Modi Govt Relief - ಸಂಗಾತಿಯ ಪಿಂಚಣಿಗೆ (Spouse Pension) ಜಂಟಿ ಬ್ಯಾಂಕ್ ಖಾತೆ (Joint Account) ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ (Jitendra Singh), ಸೇವಾನಿವೃತ್ತ ಮತ್ತು ಪಿಂಚಣಿ ನೌಕರರು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರ ಜೀವನವನ್ನು ಸುಲಭಗೊಳಿಸಲು ನರೇಂದ್ರ ಮೋದಿ ಸರ್ಕಾರ (PM Narendra Modi Government) ಯಾವಾಗಲೂ ಕೆಲಸ ಮಾಡಿದೆ. ಈ ವರ್ಗದ ಜನರ ಅನುಭವ ಮತ್ತು ಸುದೀರ್ಘ ಸೇವಾ ಜೀವನ ಪರಿಗಣಿಸಿದರೆ ಅವರು ದೇಶಕ್ಕೆ ಅಮೂಲ್ಯರು ಎಂದು ಸಿಂಗ್ ಬಣ್ಣಿಸಿದ್ದಾರೆ.
7th Pay Commission - ಸಮಯದ ಬೇಡಿಕೆ ಮತ್ತು 7 ನೇ ವೇತನ ಆಯೋಗದ ಶಿಫಾರಸುಗಳನ್ನು ((7th Pay Commission)) ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಪಿಂಚಣಿ ನಿಯಮಗಳಲ್ಲಿ (Pension Rule)ದೊಡ್ಡ ಬದಲಾವಣೆಯನ್ನು ಮಾಡಿದೆ. ಹೊಸ ನಿಯಮಗಳ ಪ್ರಕಾರ, ಈಗ ಗರಿಷ್ಠ ಪಿಂಚಣಿಯನ್ನು 1.25 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. ಇದು ಮೊದಲು 45 ಸಾವಿರ ರೂಪಾಯಿಗಳಷ್ಟಿತ್ತು.
Family Pension Latest Update - ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DOPPW), ಪೋಷಕರ ನಿಧನದ ನಂತರ ಒಂದು ಮಗು ತನ್ನ ಪೋಷಕರು ಕುಟುಂಬ ಪಿಂಚಣಿಯ ಎರಡು ಕಂತುಗಳನ್ನು ಹಿಂಪಡೆಯಲು ಅರ್ಹರಾಗಿರುವ ಮೊತ್ತದ ಬಗ್ಗೆ ಸ್ಪಷ್ಟೀಕರಣ ನೀಡಿದೆ.
ಇದುವರೆಗೆ 23 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿಗಾಗಿ ಸಂದರ್ಶನವನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶನಿವಾರ ಹೇಳಿದ್ದಾರೆ.
'ಮಿಷನ್ ಕರ್ಮಯೋಗಿ' ಭಾರತೀಯ ನಾಗರಿಕ ಸೇವಕರನ್ನು ಹೆಚ್ಚು ಸೃಜನಶೀಲ, ಕಾಲ್ಪನಿಕ, ಸಕ್ರಿಯ, ವೃತ್ತಿಪರ, ಪ್ರಗತಿಪರ, ಶಕ್ತಿಯುತ, ಸಮರ್ಥ, ಪಾರದರ್ಶಕ ಮತ್ತು ತಂತ್ರಜ್ಞಾನ-ಶಕ್ತರನ್ನಾಗಿ ಮಾಡುವ ಮೂಲಕ ಭವಿಷ್ಯಕ್ಕಾಗಿ ಅವರನ್ನು ಸಿದ್ಧಪಡಿಸುವ ಗುರಿ ಹೊಂದಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಯುಪಿಎಸ್ಸಿ ಮತ್ತು ಎಸ್ಎಸ್ಸಿ ನಿಗದಿತ ಪರೀಕ್ಷೆಗಳ ವಿಚಾರವಾಗಿ ಲಾಕ್ ಡೌನ್ ನ ಅಂತಿಮ ದಿನವಾಗಿರುವ ಮೇ 3 ರ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಭಾನುವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಈಗ ಸರ್ಕಾರದ ಮುಂದಿನ ಹಂತವೆಂದರೆ ಪಿಒಕೆ ಅನ್ನು ಭಾರತದ ಅಡಿಯಲ್ಲಿ ತರುವುದು ಎಂಬ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಹೇಳಿಕೆಗೆ ಜನರಲ್ ಬಿಪಿನ್ ರಾವತ್ ಪ್ರತಿಕ್ರಿಯಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ನಂತರ, ಈಗ ಜನರು ಭಾರತದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಏಕೀಕರಣಕ್ಕಾಗಿ ಪ್ರಾರ್ಥಿಸಬೇಕು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.