ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ ದೆಹಲಿಯಲ್ಲಿ ಕ್ವಾರೆಂಟೈನ್ ಪ್ರೊಟೊಕಾಲ್ ಬದಲಾವಣೆ

ಬೈಜಾಲ್ ತಮ್ಮ ಆದೇಶದಲ್ಲಿ ಹೋಂ ಕ್ವಾರೆಂಟೈನ್ ಅಡಿಯಲ್ಲಿ ಪ್ರತಿ ರೋಗಿಯು ಐದು ದಿನಗಳವರೆಗೆ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಉಳಿಯುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.  

Last Updated : Jun 20, 2020, 08:25 AM IST
ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ ದೆಹಲಿಯಲ್ಲಿ ಕ್ವಾರೆಂಟೈನ್ ಪ್ರೊಟೊಕಾಲ್ ಬದಲಾವಣೆ title=

ನವದೆಹಲಿ: ಕೊರೊನಾವೈರಸ್‌ನ ಪ್ರತಿ ರೋಗಿ ಐದು ದಿನಗಳ ಕಾಲ ಸಾಂಸ್ಥಿಕ  ಕ್ವಾರೆಂಟೈನ್ ಕೇಂದ್ರದಲ್ಲಿ ಉಳಿಯುವುದು ಅಗತ್ಯ ಎಂದು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಶುಕ್ರವಾರ ಆದೇಶಿಸಿದ್ದಾರೆ. ಸಾಂಸ್ಥಿಕ  ಕ್ಯಾರೆಂಟೈನ್ ಐದು ದಿನಗಳ ನಂತರ, ಕೋವಿಡ್ -19 (Covid-19) ರೋಗಲಕ್ಷಣಗಳಿಲ್ಲದ ರೋಗಿಗಳನ್ನು ಕ್ಯಾರೆಂಟೈನ್ ಗಾಗಿ ಮನೆಗೆ ಕಳುಹಿಸಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಬೈಜಾಲ್ ತಮ್ಮ ಆದೇಶದಲ್ಲಿ ಹೋಂ ಕ್ವಾರೆಂಟೈನ್ (Home Quarantine) ಅಡಿಯಲ್ಲಿ ಪ್ರತಿ ರೋಗಿಯು ಐದು ದಿನಗಳವರೆಗೆ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಉಳಿಯುವುದು ಕಡ್ಡಾಯವಾಗಿರುತ್ತದೆ. ಇದರ ನಂತರ ರೋಗಲಕ್ಷಣಗಳಿಲ್ಲದ ರೋಗಿಗಳನ್ನು ಕ್ವಾರೆಂಟೈನ್ (Quarantine) ಗಾಗಿ ಮನೆಗೆ ಕಳುಹಿಸಲಾಗುತ್ತದೆ. ಅಗತ್ಯವಿದ್ದರೆ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಅಂದರೆ ದೆಹಲಿಯಲ್ಲಿ ಪ್ರತಿ ಕರೋನವೈರಸ್ (Coronavirus) ಸೋಂಕಿತ ವ್ಯಕ್ತಿಯು ಐದು ದಿನಗಳ ಕ್ವಾರೆಂಟೈನ್ ಅನ್ನು ಸಾಂಸ್ಥಿಕ ಕೇಂದ್ರದಲ್ಲಿ ಕಳೆಯಬೇಕಾಗುತ್ತದೆ. ಆಗ ಮಾತ್ರ ಅವನಿಗೆ ಹೋಂ ಕ್ವಾರೆಂಟೈನ್ ಗೆ ಕಳುಹಿಸಲು ಅವಕಾಶವಿರುತ್ತದೆ. ಅನಿಲ್ ಬೈಜಾಲ್ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿ ಈ ಆದೇಶವನ್ನು ತೆಗೆದುಕೊಂಡಿದ್ದಾರೆ. ಪ್ರತಿ ಕರೋನಾ ಸೋಂಕಿತ ವ್ಯಕ್ತಿಯು ಈಗ ಐದು ದಿನಗಳ ಕಾಲ ದೆಹಲಿಯ ಕ್ವಾರೆಂಟೈನ್ ಕೇಂದ್ರದಲ್ಲಿ ಇರಬೇಕಾಗುತ್ತದೆ.

ಮತ್ತೊಂದು ಪರಿಹಾರ ಪ್ಯಾಕೇಜ್ ನೀಡಲು ಸರ್ಕಾರದ ಸಿದ್ಧತೆ

ಹೋಂ ಕ್ವಾರೆಂಟೈನ್ ನಲ್ಲಿರುವ ರೋಗಿಗಳ ಮೇಲ್ವಿಚಾರಣೆ ಹೊರತಾಗಿಯೂ ದೆಹಲಿಯಲ್ಲಿ ಕರೋನಾ ವೇಗವಾಗಿ ಹರಡುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಭೌತಿಕ ಪರಿಶೀಲನೆಯ ಅಗತ್ಯವಿದೆ. ಇದಲ್ಲದೆ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜಿಲ್ಲಾ ಕಣ್ಗಾವಲು ಅಧಿಕಾರಿಗಳ ತಂಡವು ಹೋಂ  ಕ್ವಾರೆಂಟೈನ್ ನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ದೈಹಿಕ ಪರಿಶೀಲನೆ ನಡೆಸಲಿದೆ ಎಂದು ತನ್ನ ಆದೇಶದಲ್ಲಿ ಅನಿಲ್ ಬೈಜಾಲ್ ತಿಳಿಸಿದ್ದಾರೆ.

ಈ ನಿರ್ಧಾರದಿಂದ ಈಗಾಗಲೇ ಒತ್ತಡವನ್ನು ಎದುರಿಸುತ್ತಿರುವ ಆರೋಗ್ಯ ಮೂಲಸೌಕರ್ಯಗಳ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ದೆಹಲಿ ಸರ್ಕಾರವು ಹೋಂ  ಕ್ವಾರೆಂಟೈನ್ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್ ನಿರ್ಧಾರವು 'ಅನಿಯಂತ್ರಿತ' ಮತ್ತು ಇದು ದೆಹಲಿಗೆ ಹಾನಿ ಮಾಡುತ್ತದೆ. ಇದು ರಾಷ್ಟ್ರ ರಾಜಧಾನಿಗೆ ಹಾನಿ ಮಾಡುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಕರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಹೋಂ ಕ್ವಾರೆಂಟೈನ್ ಕಾರ್ಯಕ್ರಮವು ಅತ್ಯಂತ ಯಶಸ್ವಿ ಅಭಿಯಾನವಾಗಿದೆ ಎಂದು ದೆಹಲಿ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. 

Vitamins ಔಷಧಿ ತೆಗೆದುಕೊಳ್ಳುವ ಮೊದಲು ಜಾಗರೂಕರಾಗಿರಿ!

ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ ಈಗಾಗಲೇ ವೈದ್ಯರು ಮತ್ತು ದಾದಿಯರ ಕೊರತೆಯಿದೆ. ಸಿಬ್ಬಂದಿಗಳ ಸಮಸ್ಯೆ ಇದೆ, ರೋಗಲಕ್ಷಣಗಳನ್ನು ಹೊಂದಿರುವ ಸಾವಿರಾರು ಜನರನ್ನು ಸೋಂಕು ಇಲ್ಲದೆ ಇರಿಸಲು, ದೊಡ್ಡ ಪ್ರಮಾಣದಲ್ಲಿ ಪ್ರತ್ಯೇಕ ವಸತಿ ಕೇಂದ್ರದ ಅಗತ್ಯವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸರ್ಕಾರದ ಪ್ರಕಾರ ದೆಹಲಿಯ ಮನೆಯಲ್ಲಿ ಸುಮಾರು 8,500 ಕೋವಿಡ್ -19 ರೋಗಿಗಳು ಪ್ರತ್ಯೇಕ ನಿವಾಸಗಳಲ್ಲಿ ಇದ್ದಾರೆ. ಇವರೆಲ್ಲರೂ ರೋಗಿಗಳಾಗಿದ್ದು ಇವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ದೆಹಲಿಯಲ್ಲಿ ಗುರುವಾರ ಕರೋನಾ ವೈರಸ್ ಸೋಂಕಿತ ರೋಗಿಗಳ ಸಂಖ್ಯೆ 49, 979ಕ್ಕೆ ಏರಿಕೆಯಾಗಿದ್ದು 1969 ಜನರು ಸಾವನ್ನಪ್ಪಿದ್ದಾರೆ.
 

Trending News