ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಎರಡು ಹಂತದ ಮತದಾನ, ಎಲ್ಲಿ ಯಾವಾಗ?

2019 ರ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಕೇಂದ್ರ ಚುನಾವಣಾ ಆಯೋಗ, ಏಳು ಹಂತಗಳಲ್ಲಿ ಚುನಾವಣೆ ನಡೆಸಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್​ ಅರೋರಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.   

Last Updated : Mar 11, 2019, 08:18 AM IST
ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಎರಡು ಹಂತದ ಮತದಾನ, ಎಲ್ಲಿ ಯಾವಾಗ? title=
File Image

ಬೆಂಗಳೂರು: 2019 ರ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಕೇಂದ್ರ ಚುನಾವಣಾ ಆಯೋಗ, ಏಳು ಹಂತಗಳಲ್ಲಿ ಚುನಾವಣೆ ನಡೆಸಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್​ ಅರೋರಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬಹುನಿರೀಕ್ಷಿತ ಚುನಾವಣೆಯ ಫಲಿತಾಂಶ ಮೇ 23ರಂದು ಹೊರ ಬೀಳಲಿದೆ.

ರಾಜ್ಯದ 28 ಲೋಕಸಭಾ ಸ್ಥಾನಗಳ ಚುನಾವಣೆಗೆ ಎರಡನೇ ಹಂತದಲ್ಲಿ (ರಾಜ್ಯದಲ್ಲಿ ಮೊದಲ ಹಂತ) ಏಪ್ರಿಲ್ 18ರಂದು ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳು ಹಾಗೂ ಮೂರನೇ ಹಂತದಲ್ಲಿ (ರಾಜ್ಯದಲ್ಲಿ ಎರಡನೇ ಹಂತ) 23ರಂದು ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

ಏಪ್ರಿಲ್ 18 ಹಾಗೂ 23ರಂದು ಎರಡು ಹಂತಗಳಲ್ಲಿ ನಡೆಯಲಿರುವ ಮತದಾನಕ್ಕೆ ಒಟ್ಟು 58,186 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ತಿಳಿಸಿದ್ದಾರೆ. ರಾಜ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಗಳ ವಿವರ ನೀಡಿದ ಅವರು, ಈ ಬಾರಿ ರಾಜ್ಯದಲ್ಲಿ ಸುಮಾರು 5.03 ಕೋಟಿ ಮತದಾರರು ಹಕ್ಕುಗಳನ್ನು ಚಲಾಯಿಸಲಿದ್ದಾರೆ ಎಂದು ಹೇಳಿದರು. 

ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಅಂಗವಿಕಲರಿಗೆ ಮತದಾನದ ದಿನದಂದು ಮತಗಟ್ಟೆಗೆ ಬರಲು ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು. 2019ರ ಜನವರಿ 16ರಂದು ರಾಜ್ಯದಲ್ಲಿ ಘೋಷಿಸಲಾದ ಪರಿಷ್ಕೃತ ಮತದಾರರ ಪಟ್ಟಿಯಂತೆ 5.03 ಕೋಟಿ ಮತದಾರರಿದ್ದಾರೆ. ರಾಜ್ಯ ಚುನಾವಣಾಧಿಕಾರಿಗಳ ಕಚೇರಿಯ ವೆಬ್​ಸೈಟ್​ನಲ್ಲಿ ಇನ್ನು ಮುಂದೆ ಮತ ದಾರರ ನೋಂದಣಿಯನ್ನು ಸ್ಥಗಿತಗೊಳಿಸಿದ್ದು, ರಾಷ್ಟ್ರೀಯ ಪೋರ್ಟಲ್​ನಲ್ಲಿ ಮಾತ್ರ ಮಾ. 1ರಿಂದ ಮತದಾರರ ನೋಂದಣಿಗೆ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಚುನಾವಣೆ ಯಾವಾಗ ಎಲ್ಲಿ ನಡೆಯಲಿದೆ ಮತ್ತು ಎಷ್ಟು ಹಂತಗಳಲ್ಲಿ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಏಪ್ರಿಲ್ 18ರಂದು (ರಾಜ್ಯದಲ್ಲಿ ಮೊದಲ ಹಂತ) ಎಲ್ಲೆಲ್ಲಿ ಚುನಾವಣೆ ನಡೆಯಲಿದೆ? 

  1. ಉಡುಪಿ-ಚಿಕ್ಕಮಗಳೂರು 
  2. ಹಾಸನ 
  3. ದಕ್ಷಿಣ ಕನ್ನಡ 
  4. ಚಿತ್ರದುರ್ಗ 
  5. ತುಮಕೂರು 
  6. ಮಂಡ್ಯ 
  7. ಮೈಸೂರು 
  8. ಚಾಮರಾಜನಗರ 
  9. ಬೆಂಗಳೂರು ಗ್ರಾಮಾಂತರ 
  10. ಬೆಂಗಳೂರು ಉತ್ತರ 
  11. ಬೆಂಗಳೂರು ಕೇಂದ್ರ 
  12. ಬೆಂಗಳೂರು ದಕ್ಷಿಣ 
  13. ಚಿಕ್ಕಬಳ್ಳಾಪುರ 
  14. ಕೋಲಾರ

ಏಪ್ರಿಲ್ 23ರಂದು(ರಾಜ್ಯದಲ್ಲಿ ಎರಡನೇ ಹಂತ) ಎಲ್ಲೆಲ್ಲಿ ಚುನಾವಣೆ ನಡೆಯಲಿದೆ?

  1. ಚಿಕ್ಕೋಡಿ 
  2. ಬೆಳಗಾವಿ 
  3. ಬಾಗಲಕೋಟೆ 
  4. ವಿಜಯಪುರ 
  5. ಕಲಬುರ್ಗಿ
  6. ರಾಯಚೂರು 
  7. ಬೀದರ್ 
  8. ಕೊಪ್ಪಳ 
  9. ಬಳ್ಳಾರಿ 
  10. ಹಾವೇರಿ
  11. ಧಾರವಾಡ 
  12. ಉತ್ತರ ಕನ್ನಡ 
  13. ದಾವಣಗೆರೆ 
  14. ಶಿವಮೊಗ್ಗ
     

Trending News