ನವದೆಹಲಿ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಕೆರಿಬಿಯನ್ ದೇಶವಾದ ಡೊಮಿನಿಕಾದಲ್ಲಿ ಪತ್ತೆಯಾಗಿದ್ದಾರೆ. ಚೋಕ್ಸಿ ಅವರು 14000 ಕೋಟಿ ರೂ ಪಿಎನ್ಬಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ 2018 ರಲ್ಲಿ ಆಂಟಿಗುವಾಕ್ಕೆ ಪಲಾಯನ ಮಾಡಿದ್ದರು, ಅಲ್ಲಿಂದ ಕಳೆದ ಕೆಲವು ದಿನಗಳಲ್ಲಿ ಅವರು ಕಾಣೆಯಾಗಿದ್ದರು.
ಇದನ್ನೂ ಓದಿ: ಭಾರತದಲ್ಲಿ Nirav Modiಯನ್ನು ಯಾವ ಜೈಲು, ಎಷ್ಟನೆ ನಂಬರ್ ಬರಾಕ್ ನಲ್ಲಿಡಲಾಗುವುದು?
ಡೊಮಿನಿಕನ್ ಅಧಿಕಾರಿಗಳು ದೇಶದಲ್ಲಿ ಅವರ ಉಪಸ್ಥಿತಿಯನ್ನು ದೃಢಪಡಿಸಿದ್ದಾರೆ ಮತ್ತು ಈಗ ಅವರು ಬಂಧನದಲ್ಲಿದ್ದಾರೆ ಎನ್ನಲಾಗಿದೆ. ಚೋಕ್ಸಿಯ ವಕೀಲ ವಿಜಯ್ ಅಗರ್ವಾಲ್ ಅವರು WION ಯೊಂದಿಗೆ ಮಾತನಾಡುತ್ತಾ, "ಅಂತಿಮವಾಗಿ ಮೆಹುಲ್ ಚೋಕ್ಸಿ(Mehul Choksi) ಇರುವ ಸ್ಥಳವು ತಿಳಿದುಬಂದಿದೆ ಎಂದು ಕುಟುಂಬವು ಸಂತೋಷವಾಗಿದೆ ಮತ್ತು ನಿರಾಳವಾಗಿದೆ. ಮತ್ತು ಅವರೊಂದಿಗೆ ಮಾತನಾಡುವ ಪ್ರಯತ್ನಗಳು ನಡೆಯುತ್ತಿವೆ, ಇದರಿಂದಾಗಿ ಅವರನ್ನು ಡೊಮಿನಿಕಾಗೆ ಹೇಗೆ ಕರೆದೊಯ್ಯಲಾಯಿತು ಎಂಬ ಸ್ಪಷ್ಟ ಚಿತ್ರ ತಿಳಿಯಬಹುದು" ಎಂದು ಹೇಳಿದ್ದಾರೆ ಎನ್ನಲಾಗಿದೆ.
Apr 16, 2021, 06:34 PM IST
ಇದನ್ನೂ ಓದಿ: Nirav Modi Extradition To India: ನಿರವ್ ಮೋದಿ ಭಾರತ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದ UK ಗೃಹ ಸಚಿವೆ
ಡೊಮಿನಿಕಾ ಆಂಟಿಗುವಾ ಮತ್ತು ಬಾರ್ಬುಡಾದ ಹತ್ತಿರದಲ್ಲಿದೆ. ಅವರನ್ನು ಶೀಘ್ರದಲ್ಲೇ ಆಂಟಿಗುವಾಕ್ಕೆ ಕಳುಹಿಸುವ ನಿರೀಕ್ಷೆಯಿದೆ.ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನ ಮಂತ್ರಿ ಗ್ಯಾಸ್ಟನ್ ಬ್ರೌನ್ ಮಾತನಾಡಿ 'ನಾನು ಇದನ್ನು ಭಾರತ ಮತ್ತು ಪ್ರಪಂಚದದ ಜನರಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ, ಮೆಹುಲ್ ಚೋಕ್ಸಿಯನ್ನು ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಇಲ್ಲಿ ಸ್ವಾಗತಿಸುವುದಿಲ್ಲ"ಎಂದು ಹೇಳಿದ್ದಾರೆ.
ಅವರ ನಿಗೂಢಕಣ್ಮರೆಯ ನಂತರ, ಆಂಟಿಗುವಾದಲ್ಲಿನ ಸ್ಥಳೀಯ ಅಧಿಕಾರಿಗಳು ಕಾಣೆಯಾದ ವ್ಯಕ್ತಿಯ ವರದಿಯನ್ನು ಇಂಟರ್ಪೋಲ್ನೊಂದಿಗೆ ಹಂಚಿಕೊಂಡಿದ್ದರು. ಅವರ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಇದೆ, ಅಂದರೆ ಅವರು ಗಡಿ ದಾಟಿದರೆ, ಯಾವುದೇ ದೇಶದ ವಲಸೆ ಅಧಿಕಾರಿಗಳು ಅವರನ್ನು ಬಂಧಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.