MiG 21 Aircraft Crash - ಭಾರತೀಯ ವಾಯುಪಡೆಗೆ ಸೇರಿದ ಮಿಗ್ - 21 ವಿಮಾನ ರಾಜಸ್ಥಾನದ ಬಾರ್ಮರ್ ನಲ್ಲಿ ಪತನಗೊಂಡಿದೆ. ಅಪಘಾತದ ನಂತರ ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರಬಂದ ಎಂದು ಸೇನಾ ವಕ್ತಾರ (Army Spokes Person)ಅಮಿತಾಬ್ ಶರ್ಮಾ (Amitabh Sharma)ಹೇಳಿದ್ದಾರೆ.
A MiG-21 Bison fighter aircraft of the Indian Air Force crashed today in Barmer, Rajasthan during a training sortie; Pilot safe. Details awaited pic.twitter.com/xLICd29ViA
— ANI (@ANI) August 25, 2021
ಇದನ್ನೂ ಓದಿ-ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದಲ್ಲಿಯೇ ಕಾಂಗ್ರೆಸ್ ಚುನಾವಣೆ ಎದುರಿಸಲಿದೆ- ಹರೀಶ್ ರಾವತ್
ವಕ್ತಾರರ ಪ್ರಕಾರ, ವಿಮಾನವು ತರಬೇತಿ ಹಾರಾಟದಲ್ಲಿತ್ತು. ಬಾರ್ಮರ್ (Barmar) ಪೊಲೀಸ್ ವರಿಷ್ಠಾಧಿಕಾರಿ ಆನಂದ ಶರ್ಮಾ (Anand Sharma) ಪ್ರಕಾರ, ವಿಮಾನವು ಭೂರ್ತಿಯಾ ಹಳ್ಳಿಯ ಬಳಿ ಪತನಗೊಂಡಿದೆ ಎಂದಿದ್ದಾರೆ. ವಿಮಾನ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ Jeep Compact Electric SUV, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ
ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ವಾಯುಸೇನೆ (Indian Airforce) " "ಇಂದು ಸಂಜೆ 5.30 ರ ಸುಮಾರಿಗೆ ಪಶ್ಚಿಮ ವಲಯದಲ್ಲಿ ತರಬೇತಿಗಾಗಿ ಹಾರುತ್ತಿದ್ದ ಮಿಗ್ -21 ಬೈಸನ್ ವಿಮಾನವು ಟೇಕ್-ಆಫ್ ಆದ ನಂತರ ತಾಂತ್ರಿಕ ದೋಷಎದುರಿಸಿದೆ. ಆದರೆ ಪತನವಾಗುವುದಕ್ಕೂ ಮುನ್ನ ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದಾರೆ. ಈ ವಿಮಾನ ಅಪಘಾತಕ್ಕೆ ಕಾರಣಗಳನ್ನು ಕಂಡುಹಿಡಿಯಲು ಕೋರ್ಟ್ ಆಫ್ ಎನ್ಕ್ವಾಯಿರಿ ಆದೇಶಿಸಲಾಗಿದೆ ಎಂದಿದೆ.
ಇದನ್ನೂ ಓದಿ-Coronavirus ವಿರುದ್ಧದ ಹೋರಾಟದಲ್ಲಿ ಮಹತ್ತರ ಹೆಜ್ಜೆ ; ಅಕ್ಟೋಬರ್ ಮೊದಲ ವಾರದಿಂದ ಮಕ್ಕಳಿಗೂ ಲಸಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ