ಶ್ರೀಗಂಗಾನಗರ: ಬಿಜೆಪಿಯ `ಮೈ ಭಿ ಚೌಕಿದಾರ್ 'ಅಭಿಯಾನವನ್ನು ವ್ಯಂಗ್ಯವಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶಕ್ಕಾಗಿ` ಚೌಕಿದಾರ್' (ಕಾವಲುಗಾರ) ಎಂದು ಜನರಿಗೆ ಹೇಳಲಿಲ್ಲ .ಆದರೆ ಅನಿಲ್ ಅಂಬಾನಿ ಮತ್ತು ನಿರಾವ್ ಮೋದಿಯಂತಹ ಉದ್ಯಮಿಗಳಿಗೆ ಮಾತ್ರ ಕಾವಲುಗಾರರಾಗಿದ್ದಾರೆ ಎಂದು ಹೇಳಿದ್ದಾರೆ.
ಶ್ರೀಗಂಗಾ ನಗರ್ ದಲ್ಲಿನ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ "ನಾನು ಕಾವಲುಗಾರನಾಗಿದ್ದೇನೆ ಎಂದು ಅವರುಹೇಳುತ್ತಾರೆ, ಯಾರ ಚೌಕಿದಾರ್ ಅವರು ಎಂದು ಅವರು ಹೇಳಲಿಲ್ಲ? ರೈತನೊಬ್ಬನ ಮನೆಯಲ್ಲಿ ಚೌಕಿದಾರ್ ನನ್ನು ನೋಡಿದ್ದೀರಾ? ನಿರುದ್ಯೋಗ ಯುವಕರ ಮನೆಯಲ್ಲಿ ಚೌಕಿದಾರನನ್ನು ನೋಡಿದ್ದೀರಾ? " ಎಂದು ಅವರು ಇಲ್ಲಿ ಸಾರ್ವಜನಿಕ ಸಭೆಯಲ್ಲಿ ನೆರದಿದ್ದ ಜನರನ್ನು ಪ್ರಶ್ನಿಸಿದರು.
ಅನಿಲ್ ಅಂಬಾನಿ ಅವರ ಮನೆಯಲ್ಲಿ ಚೌಕಿದಾರ್ ನೋಡಿದ್ದೀರಾ? ಅವರ ಮನೆಯಲ್ಲಿ ಚೌಕಿದಾರುಗಳ ಸಾಲೇ ಇದೆ, ಆದ್ದರಿಂದ ನರೇಂದ್ರ ಮೋದಿ ಅವರು ನಿಮ್ಮ ಚೌಕಿದಾರ್ ಎಂದು ಹೇಳುತ್ತಿಲ್ಲ ಬದಲಾಗಿ ಅನಿಲ್ ಅಂಬಾನಿ ಮತ್ತು ನಿರಾವ್ ಮೋದಿ ಮುಂತಾದ ಜನರಿಗೆ ಚೌಕಿದಾರ್ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ರೈತರ ಸಾಲ ಮನ್ನಾ ಮಾಡುವ ಬದಲು ಅನಿಲ್ ಅಂಬಾನಿ ಅವರಿಗೆ 30 ಸಾವಿರ ಕೋಟಿ ರೂ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.ಪ್ರತಿಯೊಬ್ಬ ನಾಗರಿಕನ ಖಾತೆಗೆ 15 ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ದೇಶದ ಯುವಜನರಿಗೆ ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಹೇಳಿದ್ದರು. ಆದರೆ ಅದರ ಬದಲಿಗೆ ನರೇಂದ್ರ ಮೋದಿ 15 ಕೈಗಾರಿಕೋದ್ಯಮಿಗಳ 3 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.