ಸ್ಥಾಯಿ ಸಮಿತಿ ಅಂಗಳಕ್ಕೆ ಎನ್ಎಂಸಿ ಮಸೂದೆ

ಪ್ರಸ್ತುತ ಮೋದಿ ನೇತೃತ್ವದ ಸರ್ಕಾರವು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ  ಬದಲಾಗಿ ನೂತನ ರಾಷ್ಟ್ರೀಯ ವೈದಕೀಯ ಆಯೋಗವನ್ನು ಜಾರಿಗೆ ತರಲು ಸರ್ಕಾರ ಹೊರಟಿದೆ.

Last Updated : Jan 2, 2018, 05:37 PM IST
ಸ್ಥಾಯಿ ಸಮಿತಿ ಅಂಗಳಕ್ಕೆ ಎನ್ಎಂಸಿ ಮಸೂದೆ title=
ಸಂಗ್ರಹ ಚಿತ್ರ

ನವದೆಹಲಿ :ಪ್ರಸ್ತುತ ಮೋದಿ ನೇತೃತ್ವದ ಸರ್ಕಾರವು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ  ಬದಲಾಗಿ ನೂತನ ರಾಷ್ಟ್ರೀಯ ವೈದಕೀಯ ಆಯೋಗವನ್ನು ಜಾರಿಗೆ ತರಲು ಸರ್ಕಾರ ಹೊರಟಿದೆ.

ಆ ನಿಟ್ಟಿನಲ್ಲಿ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆ 2017 ಯನ್ನು ವೈದ್ಯರ ಜೊತೆ ಚರ್ಚಿಸದೆ ಜಾರಿಗೆ ತರುವ ಯತ್ನಕ್ಕೆ ಮುಂದಾಗಿತ್ತು. ಆದರೆ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ರಾಷ್ಟ್ರಾದ್ಯಂತ ಈ ನಡೆಯನ್ನು ಖಂಡಿಸಿ ಮಂಗಳವಾರದಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. 

ಕೊನೆಗೂ ಕೇಂದ್ರ ಸರ್ಕಾರವು ವೈದ್ಯರ ಪ್ರತಿಭಟನೆಗೆ ಮಣಿದು ಮಸೂದೆಯನ್ನು ಮಂಗಳವಾರ ಸಂಸತ್ತಿನ ಸ್ಥಾಯಿ ಸಮಿತಿಗೆ ಸಲ್ಲಿಸಲಾಯಿತು. ಪ್ರಸ್ತುತ ಮಸೂದೆಯು ಆಯುರ್ವೇದ, ಹೋಮಿಯೋಪತಿ, ಯುನಾನಿಯಂತಹ  ಪರ್ಯಾಯ ಮತ್ತು ಸಾಂಪ್ರದಾಯಿಕ ಔಷಧಿಗಳಲ್ಲಿ ಅಧ್ಯಯನ ಮಾಡಿದವರು ಬ್ರಿಡ್ಜ್ ಕೋರ್ಸ್ ಮುಗಿದ ನಂತರ ಮಾತ್ರ ಅಲೋಪತಿಯ ಅಭ್ಯಾಸ ಮಾಡಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಈ ಮಸೂಧೆಯ ವಿರುದ್ಧ ಪ್ರತಿಭಟನೆ ನಡೆಸಿದ ಸುಮಾರು 2.9 ಲಕ್ಷಕ್ಕೂ ಹೆಚ್ಚಿನ ವೈದ್ಯರು 12 ಗಂಟೆಗಳ ರಾಷ್ಟ್ರವ್ಯಾಪಿ ನಡೆಸಿದ್ದರು .

ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರು ಲೋಕಸಭೆಯಲ್ಲಿ ಮಸೂದೆಯನ್ನು ಸ್ಥಾಯಿ ಸಮಿತಿಯ ಮುಂದೆ ಪ್ರಸ್ತಾಪಿಸಿರುವ ಕುರಿತು ಮಾಹಿತಿ ನೀಡಿದ ಅವರು ಸಮಿತಿಗೆ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ತನ್ನ ಅಂತಿಮ ಶಿಫಾರಸನ್ನು ತಿಳಿಸಬೇಕೆಂದು ಕೇಳಿಕೊಂಡಿದ್ದಾರೆ.

ಮಸೂದೆಯು ಪ್ರಮುಖವಾಗಿ  ಸರ್ಕಾರಿ-ನಾಮನಿರ್ದೇಶಿತ ಅಧ್ಯಕ್ಷ ಮತ್ತು ಸದಸ್ಯರನ್ನು ಪ್ರಸ್ತಾಪಿಸಿದೆ, ಇವರು ಕ್ಯಾಬಿನೆಟ್ ಕಾರ್ಯದರ್ಶಿ ಅಡಿಯಲ್ಲಿನ ಸಮಿತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಈ ಪ್ರಸ್ತಾವನೆಯನ್ನು ವೈದ್ಯಕೀಯ ಸಮುದಾಯವು ವಿರೋಧಿಸಿದೆ.  ಮಂಗಳವಾರದಂದು ಅಧಿವೇಶನದ  ಶೂನ್ಯವೇಳೆಯಲ್ಲಿ ಈ ವಿಷಯವನ್ನು ಸಂಸತ್ತಿನ ಎರಡು ಸದನಗಳಲ್ಲಿ ಪ್ರಸ್ತಾಪಿಸಲಾಗಿತ್ತು.

Trending News