How to earn money from Reels : ಪ್ರತಿದಿನವೂ ನೀವು ರೀಲ್ಗಳನ್ನು ಮಾಡಿ Instagramನಲ್ಲಿ ಅಪ್ಲೋಡ್ ಮಾಡ್ತೀರಾ..? ನಿಮ್ಗೆ ಗೊತ್ತೆ..! ನೀವು ಟೈಮ್ಪಾಸ್ಗೆ ಅಂತ ಮಾಡುವ ರೀಲ್ಸ್ಗಳಿಂದಲೂ ಸಹ ಹಣ ಸಂಪಾದನೆ ಮಾಡಬಹುದು.. ಹೇಗೆ ಅಂತೀರಾ..? ಇಲ್ಲಿದೆ ನೋಡಿ ಮಾಹಿತಿ..
ಹೌದು.. ನಮೋ ಭಾರತ್ ಕಿರುಚಿತ್ರ ನಿರ್ಮಾಣ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ನೀವು ರೂ. 1.5 ಲಕ್ಷ ನಗದು ಬಹುಮಾನ ಗೆಲ್ಲಬಹುದು. ಎನ್ಸಿಆರ್ಟಿಸಿಯಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಶೇಷ ಅಂದ್ರೆ, ರೈಲುಗಳು ಮತ್ತು ರೈಲು ನಿಲ್ದಾಣಗಳಲ್ಲಿ ಕಿರು ವೀಡಿಯೊಗಳನ್ನು ರಚಿಸಲು ರೈಲ್ವೆ ಈಗ ನಿಮಗೆ ಅವಕಾಶವನ್ನು ನೀಡುತ್ತದೆ. ಇದರಿಂದ ನೀವು 1,50000 ರೂ. ಸಹ ಗೆಲ್ಲಬಹುದು.
ಇದನ್ನೂ ಓದಿ:ಡಿವೋರ್ಸ್ ಬಳಿಕ ಎಆರ್ ರೆಹಮಾನ್ ಪತ್ನಿಗೆ ಕೊಡ್ತಿರುವ ಜೀವನಾಂಶ ಎಷ್ಟು ಗೊತ್ತಾ!?
ನಮೋ ಭಾರತ್ ಕಿರುಚಿತ್ರ ನಿರ್ಮಾಣ ಸ್ಪರ್ಧೆ : ನಮೋ ಭಾರತ್ ಕಿರುಚಿತ್ರ ನಿರ್ಮಾಣ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ನೀವು ಈ ಹಣವನು ಗೆಲ್ಲಬಹುದು. ಸ್ಪರ್ಧೆಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆ (NCRTC) ಘೋಷಿಸಿದೆ. ವೀಡಿಯೊ ಕಥೆಯನ್ನು ನೀವೇ ಆಯ್ಕೆ ಮಾಡಬಹುದು. ಆದರೆ ಕೆಲವು ಷರತ್ತುಗಳಿವೆ, ವೀಡಿಯೊದಲ್ಲಿ ನೀವು ಆರ್ಆರ್ಟಿಎಸ್ ನಿಲ್ದಾಣ, ನಮೋ ಭಾರತ್ ರೈಲು ಮಾತ್ರ ತೋರಿಸಬೇಕು.
ನಿಯಮಗಳು ಮತ್ತು ಷರತ್ತುಗಳು: ರೀಲ್ಸ್ಗಳನ್ನು ಚಿತ್ರೀಕರಿಸಲು ನಿಲ್ದಾಣ ಮತ್ತು ನಮೋ ಭಾರತ್ ರೈಲನ್ನು ಬಳಸಲು ಕಂಟೆಂಟ್ ಕ್ರಿಯೇಟರ್ಗಳು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಕಿರುಚಿತ್ರಗಳನ್ನು ಮಾಡಬಹುದು. ನಿಮ್ಮ ಫಿಲ್ಮ್ ಗಾತ್ರ ಮತ್ತು ಗುಣಮಟ್ಟ MP4 ಅಥವಾ MOV ಫಾರ್ಮ್ಯಾಟ್ನಲ್ಲಿ 1080 ಮೆಗಾಪಿಕ್ಸೆಲ್ಗಳಾಗಿರಬೇಕು.
ಇದನ್ನೂ ಓದಿ:IPL 2025: ಈ ಬಾರಿ RCB ಪರ ಕೆ.ಎಲ್ ರಾಹುಲ್ ಆಡೋದು ಪಕ್ಕಾ !?
ನಿಮ್ಮ ರೀಲ್ ಅರ್ಥವಾಗುವಂತೆ ಇರಬೇಕು. ನಿಮ್ಮ ಕಿರುಚಿತ್ರ ವಿಭಿನ್ನವಾಗಿದ್ದರೆ ಅದರ ಗುಣಮಟ್ಟದಲ್ಲಿ ಯಾವುದೇ ರಾಜಿ ಇರಬಾರದು.. ಎಲ್ಲರಿಗೂ ಇಷ್ಟವಾದರೆ ನಿಮ್ಮ ವೀಡಿಯೊವನ್ನು ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಮೊದಲ 3 ವಿಜೇತರು ನಗದು ಬಹುಮಾನ ಪಡೆಯುತ್ತಾರೆ. ಪ್ರಥಮ ಸ್ಥಾನ ವಿಜೇತರಿಗೆ ರೂ.1,50,000, ದ್ವಿತೀಯ ಸ್ಥಾನ ವಿಜೇತರಿಗೆ ರೂ.1,00,000 ಮತ್ತು ತೃತೀಯ ಸ್ಥಾನ ವಿಜೇತರಿಗೆ ರೂ.50,000 ಬಹುಮಾನ ನೀಡಲಾಗುವುದು. ನೀವು ಈ ವೀಡಿಯೊವನ್ನು ಡಿಸೆಂಬರ್ 20 ರೊಳಗೆ ಸಲ್ಲಿಸಬೇಕು.
ನೀವು ಇಮೇಲ್ ಮೂಲಕ ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಇದಕ್ಕಾಗಿ, “ನಮೋ ಭಾರತ್ ಕಿರುಚಿತ್ರ ತಯಾರಿಕೆ ಸ್ಪರ್ಧೆಯ ಅಪ್ಲಿಕೇಶನ್” ನೊಂದಿಗೆ pr@ncrtc.in ಗೆ ಇಮೇಲ್ ಕಳುಹಿಸಿ. ಈ ಎಲ್ಲಾ ವಿವರಗಳನ್ನು ಮೇಲ್ನಲ್ಲಿ ಭರ್ತಿ ಮಾಡಿ ನಂತರ.. ನಿಮ್ಮ ಪೂರ್ಣ ಹೆಸರು, ಸ್ಕ್ರಿಪ್ಟ್ 100 ಪದಗಳಲ್ಲಿ ಮತ್ತು ವೀಡಿಯೊ ಎಷ್ಟು ಉದ್ದವಾಗಿದೆ ಎಂಬ ಮಾಹಿತಿಯನ್ನು ನೀಡಿ ಮೇಲ್ ಮಾಡಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ