ನವದೆಹಲಿ: ಕಳೆದ ವರ್ಷದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ಒಬ್ಬ ವ್ಯಕ್ತಿಯನ್ನು ಮತ್ತು ಆತನ ಮಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬರ್ ತನ್ನ ವಾಹನವನ್ನು ಅರೆಸೈನಿಕ ಬಸ್ಗೆ ನುಗ್ಗಿ 40 ಸಿಆರ್ಪಿಎಫ್ ಸಿಬ್ಬಂದಿ ಸಾವಿಗೆ ಕಾರಣವಾಗಿತ್ತು.
ಈಗ ಬಂಧಿತರನ್ನು ಪೀರ್ ತಾರಿಕ್ ಮತ್ತು ಅವರ ಮಗಳು ಇನ್ಶಾ ಎಂದು ಗುರುತಿಸಲಾಗಿದೆ. ಫೆಬ್ರವರಿ 14, 2019 ರ ದಾಳಿಯ ಹಿಂದಿನ ಪಿತೂರಿಯ ತನಿಖೆಗಾಗಿ ಎನ್ಐಎ ಈ ಪ್ರಕರಣವನ್ನು ವಹಿಸಿಕೊಂಡಿದೆ, ಇದರಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಆದಿಲ್ ಅಹ್ಮದ್ ದಾರ್ ತನ್ನ ಕಾರನ್ನು ಸಿಆರ್ಪಿಎಫ್ ಬೆಂಗಾವಲಿಗೆ ನುಗ್ಗಿ 40 ಮಂದಿ ಸಾವಿಗೆ ಕಾರಣರಾಗಿದ್ದರು.
ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಬಿಡುಗಡೆ ಮಾಡಿದ ದಾರ್ನ ಕೊನೆಯ ವಿಡಿಯೋವನ್ನು ದಕ್ಷಿಣ ಕಾಶ್ಮೀರದ ಪುಲ್ವಾಮಾದ ಅವರ ನಿವಾಸದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ.