ಗುಂಟೂರು : ಒಂಭತ್ತು ವರ್ಷದ ಅಪ್ರಾಪ್ತ ಬಾಲಕಿಯನ್ನು 60 ವರ್ಷ ವ್ಯಕ್ತಿಯೋರ್ವ ಅತ್ಯಾಚಾರವೆಸಗಿರುವ ಘಟನೆ ಆಂದ್ರ ಪ್ರದೇಶದ ಗುಂಟೂರಿನಲ್ಲಿ ನಡೆದಿದೆ.
ಈ ಘಟನೆಯು ಬುಧುವಾರ ಸಂಭವಿಸಿದ್ದು,ಇದನ್ನು ಖಂಡಿಸಿ ಗುರುವಾರದಂದು ಗುರಜಲದ ಸ್ಥಳೀಯ ನಿವಾಸಿಗಳು ಖಂಡಿಸಿ ಭಹ್ಮ ನಾಯ್ಡು ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು. ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆ 60 ವರ್ಷದ ವ್ಯಕ್ತಿಯು ಆ ಅಪ್ರಾಪ್ತ ಬಾಲಕಿಯ ನೆರೆಯ ಹೊರೆಯನೆಂದು ಹೇಳಲಾಗಿದೆ. ಈಗಾಗಲೇ ಈ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಗುಂಟೂರು ಅಪ್ಪ ನಾಯ್ಡು ತಿಳಿಸಿದ್ದಾರೆ.
ಆರೋಪಿಯು ಘಟನೆಯ ನಂತರ ತಪ್ಪಿಸಿಕೊಂಡು ಹೋಗಿದ್ದು, ಅವನನ್ನು ಹುಡುಕಲು ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದರು. ಅತ್ಯಾಚಾರದಿಂದ ಬಾಲಕಿಯ ದೇಹದ ಮೇಲೆ ಗಾಯದ ಗುರುತುಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.