ಕೋಲ್ಕತ್ತಾ: ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಸರ್ಕಾರದ ಪ್ರಯತ್ನಗಳ ಹೊರತಾಗಿಯೂ, ಈರುಳ್ಳಿ ಬೆಲೆ ಕಡಿಮೆಯಾಗುತ್ತಿಲ್ಲ, ಬದಲಿಗೆ ಅದು ನಿರಂತರವಾಗಿ ಹೆಚ್ಚುತ್ತಿದೆ. ಸಾಮಾನ್ಯ ಜನರಿಗೆ ಈರುಳ್ಳಿ(Onion) ಹೆಸರು ಹೇಳಿದರೇ ಕಣ್ಣಲ್ಲಿ ನೀರು ಬರುವಂತಾಗಿದೆ. ಏತನ್ಮಧ್ಯೆ ಕೋಲ್ಕತ್ತಾದಲ್ಲಿ ಈರುಳ್ಳಿ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಭಾರೀ ಏರಿಕೆ ಕಂಡಿದ್ದು, ಇಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಈರುಳ್ಳಿ 160 ರೂಪಾಯಿಗೆ ಮಾರಾಟವಾಗುತ್ತಿದೆ. ದೇಶದ ಇತರ ರಾಜ್ಯಗಳ ಬಗ್ಗೆ ಮಾತನಾಡುವುದಾದರೆ, ದೆಹಲಿ-ಎನ್‌ಸಿಆರ್, ಮಹಾರಾಷ್ಟ್ರ,ಒಡಿಶಾ ಮತ್ತು ಆಂಧ್ರಪ್ರದೇಶ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಪ್ರತಿ ಕೆ.ಜಿ.ಗೆ 120 ರಿಂದ 140 ರೂಪಾಯಿ ಮಾರಾಟವಾಗುತ್ತಿದೆ.
ನಾನು ಹೆಚ್ಚು ಈರುಳ್ಳಿ ತಿನ್ನುವುದಿಲ್ಲ ಎಂದು ವಿತ್ತ ಸಚಿವರು ಹೇಳಿದ್ದೇಕೆ?
ಮಾಹಿತಿಯ ಪ್ರಕಾರ, ಕೋಲ್ಕತ್ತಾದಲ್ಲಿ ಬುಧವಾರ (ಡಿಸೆಂಬರ್ 4) ಸಂಜೆ ಈರುಳ್ಳಿ ಬೆಲೆ ಕೆ.ಜಿ.ಗೆ 140 ರೂ. ಇದ್ದದ್ದು, ಗುರುವಾರ ಬೆಳಗ್ಗೆ 20 ರೂ. ಹೆಚ್ಚಾಗಿ160 ರೂ.ಗೆ ಏರಿದೆ. ಅದೇ ಸಮಯದಲ್ಲಿ, ಸಗಟು ಮಾರುಕಟ್ಟೆಯಲ್ಲಿ ಒಂದು ಚೀಲ ಈರುಳ್ಳಿಯ ಬೆಲೆ 4800 ರೂ. ಮಂಗಳವಾರ ರಾತ್ರಿ, 21 ಲಾರಿ ಈರುಳ್ಳಿ ಬಂಗಾಳದಿಂದ ಆಂಧ್ರಪ್ರದೇಶಕ್ಕೆ ಬಂದಿಳಿದಿದೆ. ಆದರೆ ಬುಧವಾರ ರಾತ್ರಿ ಕೇವಲ 11 ಲಾರಿಗಳು ಮಾತ್ರ ಬಂದಿವೆ, ಇದರಿಂದಾಗಿ ರಾತ್ರಿಯಿಡೀ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈರುಳ್ಳಿ ಬೆಲೆ (ಪ್ರತಿ ಕೆಜಿಗೆ)
- ಕೋಲ್ಕತ್ತಾ - 160 ರೂಪಾಯಿ
- ಮಾಲ್ಡಾ - 120-130 ರೂಪಾಯಿ
- ಬುರ್ದ್ವಾನ್ - 150 ರೂಪಾಯಿ
- ಅಲಿಪುರ್ದೌರ್ - 120 ರೂಪಾಯಿ
- ದುರ್ಗಾಪುರ - 120-125 ರೂ.
- ಹುಬ್ಲಿ - 140 ರೂ.
- ನಾಡಿಯಾ - 120 ರೂಪಾಯಿ
ಮಾಹಿತಿಯ ಪ್ರಕಾರ, ಉತ್ತರ ಕೋಲ್ಕತ್ತಾದ 5 ಮಾರುಕಟ್ಟೆಗಳಲ್ಲಿ ಈರುಳ್ಳಿ ಮಾರಾಟ ಮಾಡದಿರಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ, ಖರೀದಿದಾರರು ಈರುಳ್ಳಿ ಖರೀದಿಸುವುದನ್ನು ಸಹ ತಪ್ಪಿಸುತ್ತಿದ್ದಾರೆ.