ನವದೆಹಲಿ: ಈರುಳ್ಳಿ(Onion) ಮತ್ತೊಮ್ಮೆ ಸಾರ್ವಜನಿಕರ ಕಣ್ಣಲ್ಲಿ ನೀರು ತರಿಸಿದೆ. ಏರುತ್ತಿರುವ ಈರುಳ್ಳಿ ಬೆಲೆಯಿಂದಾಗಿ ಕಂಗಾಲಿರುವ ಜನರು ತಮ್ಮ ಆಹಾರದಲ್ಲಿ ಈರುಳ್ಳಿ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ವಾಸ್ತವವಾಗಿ, ಈರುಳ್ಳಿ ಬೆಲೆ ಮತ್ತೊಮ್ಮೆ ದೇಶದಲ್ಲಿ 80 ರೂಪಾಯಿಗಳನ್ನು ದಾಟಿದೆ. ಈರುಳ್ಳಿ ಬೆಲೆಗಳು ಮತ್ತೆ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಆಕಾಶವನ್ನು ಮುಟ್ಟುತ್ತಿವೆ. ಪರಿಸ್ಥಿತಿ ಏನೆಂದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಜನರು ಪ್ರತಿ ಕೆಜಿ ಈರುಳ್ಳಿಗೆ 100 ರೂಪಾಯಿ ಕೊಟ್ಟು ಖರೀದಿಸಬೇಕಿದೆ.
ಗಗನಕ್ಕೇರಿದ ಈರುಳ್ಳಿ ಬೆಲೆ:
ಕಳೆದ ಒಂದು ವಾರದಲ್ಲಿ ಈರುಳ್ಳಿ ಬೆಲೆ ಶೇ. 40 ರಷ್ಟು ಏರಿಕೆಯಾಗಿದೆ. ವಿವಿಧ ನಗರಗಳಲ್ಲಿ ಈರುಳ್ಳಿ ಬೆಲೆ 80 ರೂ. ತಲುಪಿದೆ.
- ದೆಹಲಿಯ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ 80 ರೂ.ಗಳಿಗೆ ಮಾರಾಟವಾಗುತ್ತಿದೆ.
- ಚಂಡೀಗಢದಲ್ಲಿ ಕೂಡ ಪ್ರತಿ ಕೆಜಿ ಈರುಳ್ಳಿ 80 ರೂಪಾಯಿ
- ಮುಂಬೈನಲ್ಲಿ ಈರುಳ್ಳಿ 70 ರೂ.ಗೆ ಮಾರಾಟವಾಗುತ್ತಿದೆ.
- ಕೋಲ್ಕತ್ತಾದಲ್ಲೂ ಈರುಳ್ಳಿ ಬೆಲೆ 70 ರೂ. ತಲುಪಿದೆ.
- ಚೆನ್ನೈನಲ್ಲಿ ಈರುಳ್ಳಿ 50 ರೂಪಾಯಿ
ಹಸಿರು ತರಕಾರಿಗಳು ಮತ್ತು ಟೊಮೆಟೊಗಳ ಬೆಲೆಗಳು ಆಗಲೇ ಆಕಾಶ ಮುಟ್ಟಿವೆ. ಇದರಿಂದಾಗಿ ಈಗಾಗಲೇ ಕಂಗಾಲಾಗಿರುವ ಜನತೆಗೆ ಇದೀಗ ಈರುಳ್ಳಿ ಬೆಲೆ ಹೆಚ್ಚಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸರ್ಕಾರದ ಹೇಳಿಕೆ!
ಮುಂದಿನ ಕೆಲವು ದಿನಗಳಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಈರುಳ್ಳಿ ಕಡಿಮೆ ಪೂರೈಕೆಯಾಗುವುದರಿಂದ ಮುಂದಿನ ಒಂದು ತಿಂಗಳವರೆಗೆ ಈರುಳ್ಳಿ ಬೆಲೆ ಇಳಿಯುವುದಿಲ್ಲ ಎಂದು ಅಂಗಡಿಯವರು ನಂಬಿದ್ದಾರೆ. ಹೊಸ ಬೆಳೆ ಬಂದ ನಂತರವೇ ಜನರಿಗೆ ಇದರಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತಿದೆ. ಚಿಲ್ಲರೆ ವ್ಯಾಪಾರಿಗಳು ದೊಡ್ಡ ವ್ಯಾಪಾರಿಗಳು ಈರುಳ್ಳಿ ಸಂಗ್ರಹಿಸುತ್ತಿದ್ದಾರೆ. ಇದರಿಂದಾಗಿಯೇ ಈರುಳ್ಳಿ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತಿದೆ ಎಂದು ಆರೋಪಿಸಲಾಗಿದೆ. ಅಂತಹ ವ್ಯಾಪಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.
ಈರುಳ್ಳಿ ಬೆಲೆ ಏರಿಕೆಯ ಬಗ್ಗೆ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಆಹಾರ ಮತ್ತು ಸರಬರಾಜು ಸಚಿವಾಲಯದಲ್ಲಿ ಮಂಗಳವಾರ ಈ ಬಗ್ಗೆ ಸಭೆ ನಡೆಸಿದೆ. ಇದರಲ್ಲಿ ಈರುಳ್ಳಿ ಪೂರೈಕೆಯನ್ನು ಹೆಚ್ಚಿಸಲು ಮತ್ತು ಹೊರಗಿನಿಂದ ಬರುವ ಈರುಳ್ಳಿಯನ್ನು ಆದಷ್ಟು ಬೇಗ ತರಲು ತೀರ್ಮಾನ ಕೈಗೊಳ್ಳಲಾಗಿದೆ. ಈರುಳ್ಳಿ ಸಂಗ್ರಹಣೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು. ಆದರೆ ಈರುಳ್ಳಿ ಬೆಲೆ ಯಾವಾಗ ಕಡಿಮೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.