ನವದೆಹಲಿ: ಭಾರತೀಯ ವೈದ್ಯಕೀಯ ಸಂಘಕ್ಕೆ(ಐಎಂಎ) ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವ ಹಾಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯ ಚಿಕಿತ್ಸೆ ವಿಧೇಯಕ ವಿರೋಧಿಸಿ ಮಂಗಳವಾರ ಐಎಂಎ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ.
ಕೇಂದ್ರದ ರಾಷ್ಟ್ರೀಯ ವೈದ್ಯ ಚಿಕಿತ್ಸೆ ವಿಧೇಯಕ ವಿರೋಧಿಸಿ ನಾಳೆ ದೇಶಾದ್ಯಂತ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಖಾಸಗಿ ಆಸ್ಪತ್ರೆಯ ಒಪಿಡಿ(ಹೊರ ರೋಗಿಗಳ ವಿಭಾಗ) ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಐಎಂಎ ಅಧ್ಯಕ್ಷ ಡಾ.ರವಿಂದ್ರ ತಿಳಿಸಿದ್ದಾರೆ.
ವೈದ್ಯರಲ್ಲದವರಿಗೂ ವೈದ್ಯ ಚಿಕಿತ್ಸೆಗೆ ಅವಕಾಶ ಕೊಡುವ ಕೇಂದ್ರ ಸರ್ಕಾರದ ವೈದ್ಯ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವುದಾಗಿ ಐಎಂಎ ಹೇಳಿದ್ದು, ತುರ್ತು ಸೇವೆ ಹೊರತುಪಡಿಸಿ, ಒಪಿಡಿ ಸಂಪೂರ್ಣವಾಗಿ(ಒಪಿಡಿ ಸೇವೆ ಸ್ಥಗಿತದ ಬಗ್ಗೆ ಸ್ಪಷ್ಟ ಮಾಹಿತಿ ಈವರೆಗೂ ಇಲ್ಲ) ಬಂದ್ ಮಾಡಿ ಮುಷ್ಕರ ನಡೆಸುವುದಾಗಿ ತಿಳಿಸಿದೆ.