ನವದೆಹಲಿ : ಪಾಕಿಸ್ತಾನ (Pakistan) ಭಾರತದ ಬಗ್ಗೆ ದ್ವೇಷ ಹರಿಸುವುದನ್ನು ಮುಂದುವರೆಸುತ್ತಲೇ ಬಂದಿದೆ. ಆದರೆ ಕಷ್ಟದ ಸಮಯದಲ್ಲಿ ಭಾರತ ಅಲ್ಲಿನ ನಾಗರಿಕರಿಗೆ ಸಹಾಯ ಮಾಡಲು ಯಾವತ್ತೂ ಹಿಂಜರಿದಿಲ್ಲ. ಉಕ್ರೇನ್ ನಲ್ಲಿ (Ukraine) ಸಿಲುಕಿಹಾಕಿಕೊಂಡಿದ್ದ ಪಾಕಿಸ್ತಾನಿ ಹುಡುಗಿಯನ್ನು ಸುರಕ್ಷಿತವಾಗಿ ಕರೆ ತರಲು ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ (Indian Embassy in Kyiv)ಸಹಾಯ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಪಾಕಿಸ್ತಾನಿ ಹುಡುಗಿಯೇ ವಿಡಿಯೋ ಶೇರ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾಳೆ.
ವೀಡಿಯೊ ಮೂಲಕ ಧನ್ಯವಾದ ತಿಳಿಸಿದ ಯುವತಿ :
'ನನ್ನ ಹೆಸರು ಅಸ್ಮಾ ಶಫೀಕ್ (Asma Shafique) ಮತ್ತು ನಾನು ಪಾಕಿಸ್ತಾನದವಳು. ನನಗೆ ಇಲ್ಲಿಂದ ಹೊರಬರಲು ಸಹಾಯ ಮಾಡಿದ ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪಾಕ್ ಯುವತಿ ವಿಡಿಯೋದಲ್ಲಿ ಹೇಳಿದ್ದಾರೆ. ಮಾಹಿತಿಯ ಪ್ರಕಾರ, ಭಾರತೀಯ ಅಧಿಕಾರಿಗಳು ಅಸ್ಮಾ ಅವರನ್ನು ಯುದ್ಧ ಪೀಡಿತ ಪ್ರದೇಶದಿಂದ ಸುರಕ್ಷಿತವಾಗಿ ಹೊರತೆಗೆದು ಪಶ್ಚಿಮ ಉಕ್ರೇನ್‌ಗೆ (Ukraine) ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.
#WATCH | Pakistan's Asma Shafique thanks the Indian embassy in Kyiv and Prime Minister Modi for evacuating her.
Shas been rescued by Indian authorities and is enroute to Western #Ukraine for further evacuation out of the country. She will be reunited with her family soon:Sources pic.twitter.com/9hiBWGKvNp
— ANI (@ANI) March 9, 2022
ಸಹಾಯ ಹಸ್ತ ಚಾಚಿದ ಭಾರತೀಯ ವಿದ್ಯಾರ್ಥಿ :
ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ರಕ್ಷಿಸಲು ಭಾರತ ಸರ್ಕಾರವು ಆಪರೇಷನ್ ಗಂಗಾ (Operation Ganga) ಅಭಿಯಾನವನ್ನು ನಡೆಸುತ್ತಿದೆ. ಇದರ ಅಡಿಯಲ್ಲಿ ಇದುವರೆಗೆ ಹೆಚ್ಚಿನ ಸಂಖ್ಯೆಯ ಜನರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ. ಈ ಹಿಂದೆ ಭಾರತೀಯ ವಿದ್ಯಾರ್ಥಿ ಅಂಕಿತ್ ಯಾದವ್ ಕೂಡಾ ಪಾಕಿಸ್ತಾನಿ ಹುಡುಗಿಗೆ ಸಹಾಯ ಮಾಡಿದ್ದರು. ಸುದ್ದಿ ಸಂಸ್ಥೆ ANI ವರದಿಯ ಪ್ರಕಾರ, ರಷ್ಯಾದ ದಾಳಿಯ ನಡುವೆ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ಅಂಕಿತ್ ತನ್ನನ್ನು ರಕ್ಷಿಸಿಕೊಂಡಿದ್ದು ಮಾತ್ರವಲ್ಲ ಕೈವ್‌ನಲ್ಲಿ ಓದುತ್ತಿರುವ ಪಾಕಿಸ್ತಾನಿ ಹುಡುಗಿಗೆ ರೊಮೇನಿಯಾ ಗಡಿಯನ್ನು ತಲುಪಲು ಸಹಾಯ ಮಾಡಿದ್ದರು.
ಇದನ್ನೂ ಓದಿ : ಜನ ಸಾಮಾನ್ಯರಿಗೆ ಆರ್‌ಬಿಐನಿಂದ ಹೊಸ ಸೌಲಭ್ಯ...ಏನಿದೆ ಇದರಲ್ಲಿ ಅಂತಹ ವಿಶೇಷತೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.