ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಗಡಿಯಲ್ಲಿರುವ ನಮ್ಮ ಸೈನಿಕರ ಜೊತೆ ದೀಪಾವಳಿ ಆಚರಣೆ ಮಾಡಲು ಗಡಿಯತ್ತ ಹೊರಟಿದ್ದಾರೆ. ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಅವರು ಗಡಿ ಭಾಗಕ್ಕೆ ತೆರಳುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿಯು ಅವರು ಗಡಿ ಭಾಗಕ್ಕೆ ಹೋಗಿ ದೀಪಾವಳಿ ಆಚರಣೆ ಮಾಡಲಿದ್ದಾರೆ.
ರಾಜಸ್ಥಾನದ ಜೈಸಲ್ಮಾರ್ ಗಡಿ ಭಾಗಕ್ಕೆ ಪ್ರಧಾನಿ ಮೋದಿ(PM Modi) ಮುಂಜಾನೆ 9:30ಕ್ಕೆ ತೆರಳಿದ್ದಾರೆ. ಸೇನೆ, ವಾಯು ಪಡೆ ಮತ್ತು ಗಡಿ ಭದ್ರತಾ ಪಡೆಯ 600 ಸಿಬ್ಬಂದಿ ಇಂದಿನ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಮೋದಿಯೊಂದಿಗೆ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂಎಂ ನರವಾನೆ, ಬಿಎಸ್ಎಫ್ ಮಹಾ ನಿರ್ದೇಶಕ ರಾಕೇಶ್ ಅಸ್ತಾನಾ ಕೂಡ ಭಾಗಿ ಆಗುವ ಸಾಧ್ಯತೆ ಇದೆ.
Children’s Day 2020: ಮಕ್ಕಳ ದಿನಾಚರಣೆಯ ಇತಿಹಾಸ, ಮಹತ್ವ
ಅದಲ್ಲದೆ, ಪ್ರಧಾನಿ ಮೋದಿ ಅವರು ರಾಷ್ಟ್ರದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು "ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಹಬ್ಬವು ಎಲ್ಲರ ಬಾಳಿನಲ್ಲಿ ಮತ್ತಷ್ಟು ಬೆಳಕು ಹಾಗೂ ಸಂತೋಷವನ್ನು ನೀಡಲಿ. ದೇವರು ಎಲ್ಲರಿಗೂ ಸಮೃದ್ಧಿ ಹಾಗೂ ಆರೋಗ್ಯವನ್ನು ನೀಡಲಿ" ಅಂತ ಆಶಿಸುತ್ತೇನೆಂದು ಎಂದು ಮೋದಿ ಅವರು ಟ್ವೀಟ್ ನಲ್ಲಿ ಬರೆದಿದ್ದರೆ.
https://twitter.com/narendramodi/status/1327415543616348165?s=20
ನಿನ್ನೆ ಕೂಡ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ, ಧೈರ್ಯದಿಂದ ದೇಶದ ಗಡಿ ಕಾಯುತ್ತಿರುವ ನಮ್ಮ ವೀರ ಯೋಧರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರ ಕುಟುಂಬಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಅವರ ಹೆಸರಿನಲ್ಲಿ ದೀಪವನ್ನು ಬೆಳಗಿ ಎಂದು ಮೋದಿ ಜನರಿಗೆ ಕರೆ ನೀಡಿದ್ದರು.
https://twitter.com/narendramodi/status/1327225291668852736?s=20