ಮುಂಬೈ: ದೇಶದಲ್ಲಿ ಇನ್ಮುಂದೆ ಪ್ರಧಾನಿ ಮೋದಿಯವರ ಔಷಧಿ ಕೆಲಸ ಮಾಡುವುದಿಲ್ಲವೆಂದು ತೆಲಂಗಾಣದ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಕಾಂಗ್ರೆಸ್ನ 139ನೇ ಸಂಸ್ಥಾಪನಾ ದಿನದ ಅಂಗವಾಗಿ ನಾಗ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮುಂದಿನ 100 ದಿನಗಳು ಪಕ್ಷ ಮತ್ತು ದೇಶಕ್ಕೆ ನಿರ್ಣಾಯಕ. ಲೋಕಸಭೆ ಚುನಾವಣೆ 2024ರ ಮೊದಲಾರ್ಧದಲ್ಲಿ ನಡೆಯಲಿದೆ. ಪಕ್ಕಕ್ಕಾಗಿ ಕೆಲಸ ಮಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಶ್ರಮಿಸಬೇಕಾಗಿದೆ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಇದನ್ನೂ ಓದಿ: ಪಾರ್ಲೆ-ಜಿ ಬಿಸ್ಕೆಟ್ ಮೇಲಿದ್ದ ಬೇಬಿ ಫೋಟೋ ನಾಪತ್ತೆ..! ಯಾರು ಈ ಯುವಕ..?
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಲು ರಜೆ ತೆಗೆದುಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವುದನ್ನು ನಿಮ್ಮ ಕುಟುಂಬ ಸದಸ್ಯರಿಗೆ ತಿಳಿಸಿ ಎಂದು ರೆಡ್ಡಿ ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ತೆಲಂಗಾಣ ಸಿಎಂ, "ಪ್ರತಿಯೊಂದು ಔಷಧಿಗೂ ಎಕ್ಸ್ಪೈರಿ ಡೇಟ್ ಇರುತ್ತದೆ. ಅದೇ ರೀತಿ ನರೇಂದ್ರ ಮೋದಿಯವರ ಔಷಧಿ ಇನ್ನು ಮುಂದೆ ದೇಶದಲ್ಲಿ ಕೆಲಸ ಮಾಡುವುದಿಲ್ಲ" ಎಂದು ಟೀಕಿಸಿದರು.
ಆಡಳಿತಾರೂಢ ಭಾರತೀಯ ಜನತಾ ಪಕ್ಷವು "ಡಬಲ್ ಇಂಜಿನ್ ಸರ್ಕಾರ" ಎಂದು ಕರೆಯುವುದು ವಾಸ್ತವವಾಗಿ ‘ಅದಾನಿ-ಪ್ರದಾನಿ’ ಎಂಬುದಾಗಿದೆ. ಒಂದು ದಿನ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ಬಗ್ಗೆ ಮಾತನಾಡಿದರು. ನಂತರ ಅದಾನಿ ಇಂಜಿನ್ ಸಮಸ್ಯೆ ಕಾಣಿಸಿಕೊಂಡಿತು ಮತ್ತು ವರ್ಕ್ಶಾಪ್ಗೆ ಕರೆದೊಯ್ಯಬೇಕಾಯಿತು. ಇದೇ ರೀತಿ ಪ್ರದಾನಿ ಮೋದಿಯವರ ಭವಿಷ್ಯವೂ ಆಗಲಿದೆ’ ಎಂದು ಕುಟುಕಿದರು.
ಇದನ್ನೂ ಓದಿ: ಹೊಸ ವರ್ಷ 2024ರಲ್ಲಿ ಭಾರತದ ವಿದೇಶಾಂಗ ನೀತಿ: ಸವಾಲುಗಳ ನಿರ್ವಹಣೆ ಮತ್ತು ಅವಕಾಶಗಳ ಅನ್ವೇಷಣೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.