PM Narendra Modi Mann Ki Baat: ಭಾರತದ ಮೇಲೆ ಕೆಟ್ಟ ದೃಷ್ಟಿ ಬೀರಿದವರಿಗೆ ತಕ್ಕ ಉತ್ತರ ಸಿಗುತ್ತಿದೆ

ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಮೂಲಕ ದೇಶದ ನಾಗರಿನಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

Last Updated : Jun 28, 2020, 12:16 PM IST
PM Narendra Modi Mann Ki Baat: ಭಾರತದ ಮೇಲೆ ಕೆಟ್ಟ ದೃಷ್ಟಿ ಬೀರಿದವರಿಗೆ ತಕ್ಕ ಉತ್ತರ ಸಿಗುತ್ತಿದೆ title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಮೂಲಕ ದೇಶದ ನಾಗರಿನಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ದೇಶದಲ್ಲಿ ಕರೋನಾ ವೈರಸ್ ಪ್ರಕೋಪದ ನಡುವೆ ಪಿಎಂ ಮೋದಿ ಅವರ ನಾಲ್ಕನೇ ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿರುವ ಮನ್ ಕಿ ಬಾತ್ ಇದಾಗಲಿದೆ. ಈ ಸಮಯದಲ್ಲಿ, ಕರೋನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಭಾರತ ತನ್ನ ನೆರೆರಾಷ್ಟ್ರಗಳಿಂದ ಸವಾಲುಗಳನ್ನು ಸಹ ಎದುರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತದ ಮೇಲೆ ಕೆಟ್ಟ ದೃಷ್ಟಿ ಬೀರುವವರಿಗೆ ತಕ್ಕ ಉತ್ತರ ಸಿಗುತ್ತಿದೆ ಎಂದಿದ್ದಾರೆ. ಇದೇ ವೇಳೆ ಸಾಮಾಜಿಕ ದೂರ ಅನುಸರಿಸಿ ಫೇಸ್ ಮಾಸ್ಕ್ ಧರಿಸುವಂತೆ ಪ್ರಧಾನಿ ಮತ್ತೊಮ್ಮೆ ಜನರಿಗೆ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಮನ್ ಕಿ ಬಾತ್ ನ ಕೆಲ ಹೈಲೈಟ್ಸ್ ಗಳು ಇಲ್ಲಿವೆ
- ನಮ್ಮ ಎಲ್ಲ ಪ್ರಯತ್ನಗಳು ನಮ್ಮ ದೇಶದ ಗಡಿಗಳನ್ನು ರಕ್ಷಿಸಲು, ದೇಶವನ್ನು ಹೆಚ್ಚು ಸಮರ್ಥರನ್ನಾಗಿ ಮಾಡಲು, ದೇಶವನ್ನು ಸ್ವಾವಲಂಬಿಗಳನ್ನಾಗಿ ಮಾಡಲು ದೇಶದ ಶಕ್ತಿಯನ್ನು ಹೆಚ್ಚಿಸುವತ್ತ ಇರಬೇಕು. ಇದೇ ನಾವು ನಮ್ಮ ಹುತಾತ್ಮರಿಗೆ ನೀಡುವ ನಿಜವಾದ ಗೌರವವಾಗಿದೆ: ಪಿಎಂ ಮೋದಿ ಹೇಳಿದ್ದಾರೆ.
-ಲಡಾಖ್ನಲ್ಲಿ ಹುತಾತ್ಮರಾದ ನಮ್ಮ ಕೆಚ್ಚೆದೆಯ ಸೈನಿಕರ ಶೌರ್ಯಕ್ಕೆ ಇಡೀ ರಾಷ್ಟ್ರವೇ ನಮಸ್ಕರಿಸುತ್ತಿದೆ. ಇಡೀ ದೇಶ ಅವರಿಗೆ ಕೃತಜ್ಞವಾಗಿದೆ. ಈ ಬಂಧುಗಳ ಕುಟುಂಬ ಸದಸ್ಯರ ಜೊತೆಗೆ ಪ್ರತಿಯೊಬ್ಬ ಭಾರತೀಯರೂ ಅವರನ್ನು ಕಳೆದುಕೊಂಡ ನೋವನ್ನು ಅನುಭವಿಸುತ್ತಿದ್ದಾರೆ: ಪಿಎಂ ಮೋದಿ.
- ಲಡಾಕ್‌ನಲ್ಲಿ ಭಾರತದತ್ತ ಕಣ್ಣೆತ್ತಿ ನೋಡಿದವರಿಗೆ ಸೂಕ್ತ ಉತ್ತರ ನೀಡಲಾಗುತ್ತಿದೆ. ಭಾರತಕ್ಕೆ ಸ್ನೇಹಪರತೆ ಕಾಪಾಡುವುದು ತಿಳಿದಿದೆ. ಆದರೆ, ಇನ್ನೊಂದೆಡೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ತಕ್ಕ ಉತ್ತರ ನೀಡುವುದು ಸಹ ಸಹ ತಿಳಿದಿದೆ
- ಭಾರತದ ವಿಶ್ವ ಭ್ರಾತೃತ್ವದ ಮನೋಭಾವ ಅನುಭವಿಸಿದೆ. ನಮ್ಮ ಸಾರ್ವಭೌಮತ್ವ ಮತ್ತು ಗಡಿಗಳನ್ನು ರಕ್ಷಿಸಲು, ಭಾರತದ ಶಕ್ತಿ ಮತ್ತು ಭಾರತದ ಬದ್ಧತೆಯನ್ನು ನಾವು ನೋಡಿದ್ದೇವೆ.
- ಈ ವರ್ಷ, ನಮ್ಮ ದೇಶ ಹೊಸ ಗುರಿಗಳನ್ನು ಸಾಧಿಸಲಿದೆ. ಹೊಸ ಸಾಧನೆಗಳನ್ನು ಮಾಡಿ, ಹೊಸ ಗುರಿಗಳನ್ನು ತಲುಪಲಿದೆ. 130 ಕೋಟಿ ದೇಶವಾಸಿಗಳ ಶಕ್ತಿಯ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- ನೂರಾರು ವರ್ಷಗಳಿಂದ ವಿವಿಧ ಆಕ್ರಮಣಕಾರರು ಭಾರತದ ಮೇಲೆ ದಾಳಿ ನಡೆಸಿದ್ದಾರೆ, ಭಾರತದ ಸಂರಚನೆ ಸಪೂರ್ಣ ನಾಶವಾಗಲಿದೆ ಎಂದು ಹಲವರು ನಂಬಿದ್ದರು. ಆದರೆ, ಭಾರತ ಅವೆಲ್ಲವುಗಳನ್ನು ಮೆಟ್ಟಿ ಇನ್ನಷ್ಟು ಭವ್ಯವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
- ಒಂದು ವರ್ಷದಲ್ಲಿ ಒಂದೇ ಸವಾಲು ಬರಲಿ ಅಥವಾ ಐವತ್ತು ಸವಾಲುಗಳೇ ಬರಲಿ, ಅಂಕಿ-ಸಂಖ್ಯೆಗಳಿಂದ ವರ್ಷ ಹಾಳಾಗುವುದಿಲ್ಲ. ನೈಸರ್ಗಿಕ ವಿಪತ್ತುಗಳನ್ನು ಹಾಗೂ ಸವಾಲುಗಳನ್ನು ಮೆಟ್ಟಿ ನಿಂತು ವಿಜಯ ಪತಾಕೆ ಹಾರಿಸಿ, ಮತ್ತಷ್ಟು ತೀಕ್ಷ್ಣಗಾಗಿ ಹೊರಹೊಮ್ಮುವುದು ಭಾರತದ ಇತಿಹಾಸದಲ್ಲಿದೆ.
- ನಮ್ಮ ನೆರೆರಾಷ್ಟ್ರಗಳಿಂದ ಓಡ್ದಲಾಗುತ್ತಿರುವ ಸವಾಲುಗಳನ್ನು ಕೂಡ ಭಾರತೆ ಎದುರಿಸಲಿದೆ. ಏಕಕಾಲಕ್ಕೆ ಇಷ್ಟೊಂದು ನೈಸರ್ಗಿಕ ವಿಪತ್ತುಗಳು, ಸವಾಲುಗಳು ತುಂಬಾ ಕಡಿಮೆ ನೋಡಲು ಸಿಗುತ್ತವೆ.
- ಹಲವು ರಾಜ್ಯಗಳಲ್ಲಿ ನಮ್ಮ ರೈತ ಬಾಂಧವರು ಮಿಡತೆಗಳ ದಾಳಿಗೆ ತತ್ತರಿಸಿ ಹೋಗಿದ್ದಾರೆ ಹಾಗೂ ದೇಶದ ಹಲವು ಭಾಗಗಳಲ್ಲಿ ಉಂಟಾಗುತ್ತಿರುವ ಭೂಕಂಪಗಳು ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳ ಕೊನೆಯ ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಕಳೆದ ನಾಲ್ಕು ತಿಂಗಳಿನಿಂದ ಅವರು ದೇಶದ ನಾಗರಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಮಾಸ್ಕ್ ಧರಿಸಲು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ವೈರಸ್ ಆದ ಕಾರಣ ಪ್ರಧಾನಿ ಮೋದಿ ಜನರಿಗೆ ಆದಷ್ಟು ತಮ್ಮ ಮನೆಯಲ್ಲಿಯೇ ಇರಲು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದಕ್ಕೂ ಮೊದಲು ಮಾರ್ಚ್ 31 ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕೊರೊನಾ ಕಾಲದಲ್ಲಿ ಯೋಗ ಒಂದು ಉತ್ತಮ ಆಯಾಮವಾಗಿದೆ ಎಂದಿದ್ದರು, ಈ ಕುರಿತು ಹೇಳಿಕೆ ನೀಡಿದ್ದ ಪ್ರಧಾನಿ, ಕೊರೊನಾ ವೈರಸ್ ನಮ್ಮ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಾದ ಕಾರಣ ಯೋಗ ಒಂದು ತುಂಬಾ ಉತ್ತಮ ಪರ್ಯಾಯವಾಗಿದೆ ಎಂದಿದ್ದರು. ಶ್ವಾಸಕೋಶದ ತಂತ್ರವನ್ನು ಬಲಿಷ್ಠಗೊಳಿಸಲು ಯೋಗಾದಲ್ಲಿ ಹಲವು ರೀತಿಯ ಪ್ರಾಣಾಯಾಮಗಳಿದ್ದು, ಅವು ದೀರ್ಘಾವಧಿಯಲ್ಲಿ ನಮಗೆ ಉತ್ತಮ ಲಾಭ ನೀಡಲಿವೆ ಎಂದು ಹೇಳಿದ್ದರು.

Trending News