20 ಆಮ್ ಆದ್ಮಿ ಪಕ್ಷದ ಶಾಸಕರ ಅನರ್ಹತೆಯನ್ನು ಅನುಮೋದಿಸಿದ ರಾಷ್ಟ್ರಪತಿ

    

Last Updated : Jan 21, 2018, 05:28 PM IST
20 ಆಮ್ ಆದ್ಮಿ ಪಕ್ಷದ ಶಾಸಕರ ಅನರ್ಹತೆಯನ್ನು ಅನುಮೋದಿಸಿದ ರಾಷ್ಟ್ರಪತಿ title=

ನವದೆಹಲಿ: ಆಮ್ ಆದ್ಮಿ ಪಕ್ಷದ 20 ವಿಧಾನಸಭಾ ಸದಸ್ಯರನ್ನು ಲಾಭದಾಯಕ ಹುದ್ದೆ ಹೊಂದಿದ್ದಾರೆಂದು ಪರಿಗಣಿಸಿ ಶುಕ್ರವಾರದಂದು  ಅವರ ಹೆಸರನ್ನು ಕೇಂದ್ರ ಚುನಾವಣಾ ಆಯೋಗ ರಾಷ್ಟ್ರಪತಿಯವರಿಗೆ ಶಿಫಾರಸ್ಸು ಮಾಡಿತ್ತು.ಈಗ  ರಾಷ್ಟ್ರಪತಿ ಕೊವಿಂದರವರು ಚುನಾವಣಾ ಆಯೋಗದ ಶಿಫಾರಸ್ಸನ್ನು ಅನುಮೋದಿಸಿದ್ದಾರೆ.ಇದರಿಂದಾಗಿ 20 ಎಎಪಿಯ 20 ವಿಧಾನಸಭಾ ಸದಸ್ಯರ  ಸದಸ್ಯತ್ವ ಈಗ ರದ್ದುಗೊಂಡಿದೆ.

ಕಾನೂನು ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ರಾಷ್ಟ್ರಪತಿಗಳು " ಚುನಾವಣಾ ಆಯೋಗದ ಅಭಿಪ್ರಾಯದಲ್ಲಿ ಕಂಡು ಬಂದ ಈ ಸಂಗತಿಯನ್ನು ನಾನು ಪರಿಗಣಿಸಿ  ರಾಷ್ಟ್ರಪತಿಯಾದ ನಾನು ರಾಮನಾಥ ಕೊವಿಂದ ನನ್ನ ಅಧಿಕಾರವನ್ನು ಚಲಾಯಿಸುತ್ತಿದ್ದೇನೆ. ಪ್ರಸ್ತುತ ದೆಹಲಿ ವಿಧಾನ ಸಭಾ ಸದಸ್ಯರಾಗಿರುವ 20 ಸದಸ್ಯರು ತಮ್ಮ ಸದಸ್ಯತ್ವದದಿಂದ ಅನರ್ಹರಾಗುತ್ತಿದ್ದಾರೆ" ಎಂದು ತಮ್ಮ ಹೇಳಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರ ಹಿಂದಿನ ದಿನ ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆಮ್ ಆದ್ಮಿ ಪಕ್ಷಕ್ಕೆ  ತನ್ನ ನಿಲುವನ್ನು ವಿವರಿಸಲು ಚುನಾವಣಾ ಆಯೋಗವು  ಅವಕಾಶ ನೀಡಲಿಲ್ಲ ಎಂದು ಆರೋಪಿಸಿದರು.

 

with ANI inputs

Trending News