ಹೈದರಾಬಾದ್: ದಲಿತ ಭಕ್ತನನ್ನು ಬ್ರಾಹ್ಮಣ ಅರ್ಚಕರೊಬ್ಬರು ತಮ್ಮ ಹೆಗಲ ಮೇಲೆ ಹೊತ್ತು ದೇವಾಲಯದ ಗರ್ಭಗುಡಿ ಪ್ರವೇಶ ಮಾಡುವ ಮಾನರೆಲ್ಲರೂ ಒಂದೇ ಜಾತಿ ಎಂಬುದನ್ನು ಸಾರಿದ್ದಾರೆ.
ಇಲ್ಲಿನ ಜಿಯಾಗುಡದಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯ 2000 ವರ್ಷಗಳ ನಂತರ ಇಂತಹ ಘಟನೆಗೆ ಸಾಕ್ಷಿಯಾಯಿತು. ಚಿಲ್ಕೂರಿನ ಬಾಲಾಜಿ ದೇವಾಲಯದ ಪ್ರಧಾನ ಅರ್ಚಕರಗಿರುವ 60 ವರ್ಷ ವಯಸ್ಸಿನ ಸಿ.ಎಸ್.ರಂಗರಾಜನ್ ಅವರು ರಂಗನಾಥ ಸ್ವಾಮಿ ದೇವಾಲಯದಲ್ಲಿ ಅಲ್ಪ ಸಂಖ್ಯಾತರು ಮತ್ತು ಶೋಷಿತ ವರ್ಗದವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸೋಮವಾರ ಏರ್ಪಡಿಸಿದ್ದ 'ಮುನಿವಾಹನ ಸೇವಾ' ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ದಲಿತ ಭಕ್ತ ಆದಿತ್ಯ ಪರಶ್ರೀ ಕೊರಳಿಗೆ ಹಾರ ಹಾಕಿ ತಮ್ಮ ಭುಜದ ಮೇಲೆ ಕೂರಿಸಿಕೊಂಡು ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಅರ್ಚಕರು, ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ, ದಲಿತ ಭಕ್ತನಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಶ್ಲೋಕಗಳು, ಮಂತ್ರಗಳೊಂದಿಗೆ ನಾದಸ್ವರವು ಮೊಳಗಿತು. ಈ ಘಟನೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.