ಇಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಮನ್ ಕಿ ಬಾತ್

ಇಂದು ಬೆಳಿಗ್ಗೆ 11 ಗಂಟೆಗೆ ತಾವು ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶ ಉದ್ದೇಶಿಸಿ ಭಾಷಣ ಮಾಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Last Updated : Jul 26, 2020, 08:45 AM IST
ಇಂದು ಬೆಳಿಗ್ಗೆ 11 ಗಂಟೆಗೆ  ಪ್ರಧಾನಿ ಮೋದಿ ಮನ್ ಕಿ ಬಾತ್ title=

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ (Mann Ki Baat) ಮೂಲಕ ಇಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಅವರ ಮಾಸಿಕ ರೇಡಿಯೋ ಕಾರ್ಯಕ್ರಮದ 67ನೇ ಆವೃತ್ತಿಯಾಗಿದೆ.

ಇಂದು ಬೆಳಿಗ್ಗೆ 11 ಗಂಟೆಗೆ ತಾವು ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶ ಉದ್ದೇಶಿಸಿ ಭಾಷಣ ಮಾಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಜುಲೈ 11ರಂದು ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶ ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ದೇಶದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಜನರು ಮಾಡಿದ ಕೆಲವು ಪ್ರಯತ್ನಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದರು. ಸಾಮೂಹಿಕ ಪ್ರಯತ್ನಗಳು ಹೇಗೆ ಸಕಾರಾತ್ಮಕ ಬದಲಾವಣೆಗಳನ್ನು ತಂದಿವೆ ಎಂಬುದರ ಕುರಿತು ನಿಮಗೆ ಸ್ಪೂರ್ತಿದಾಯಕ ಉಪಾಖ್ಯಾನಗಳು ತಿಳಿದಿರುತ್ತವೆ, ಜೀವಗಳನ್ನು ಪರಿವರ್ತಿಸಿದ ಉಪಕ್ರಮಗಳ ಬಗ್ಗೆ ನಿಮಗೆ ಖಂಡಿತವಾಗಿ ತಿಳಿದಿರುತ್ತದೆ. ದಯವಿಟ್ಟು ಅಂಥ ಸಂಗತಿಗಳನ್ನು ಈ ತಿಂಗಳ # ಮನ್ ಕಿ ಬಾತ್ ಗಾಗಿ ಹಂಚಿಕೊಳ್ಳಿ ಎಂದು ವಿನಂತಿಸಿಕೊಂಡಿದ್ದರು. ಇಂದಿನ ಮನ್ ಕಿ ಬಾತ್ ನಲ್ಲಿ ಈ ಬಗ್ಗೆ ಮಾತನಾಡುವ ಸಾಧ್ಯತೆ ಇದೆ.

ಭಗವಾನ್ ಬುದ್ಧನು ಬದುಕುವ ಮಾರ್ಗವನ್ನು ತೋರಿಸಿದನು - ಪ್ರಧಾನಿ ಮೋದಿ

ಜೂನ್ 28ರಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ಎಂಥದೇ ಸವಾಲುಗಳು ಎದುರಾದರೂ ಪರಿಹರಿಸಬಹುದೆಂದು ನಮ್ಮ ದೇಶದ ಇತಿಹಾಸವು ಸಾಬೀತುಪಡಿಸಿದೆ.  ಭಾರತವು ಯಾವಾಗ ಸವಾಲು ಬಂದರೂ ಜಯಿಸಿದೆ. ಸವಾಲುಗಳ ನಂತರ ನಾವು ಬಲಶಾಲಿಯಾಗಿದ್ದೇವೆ ಎಂದು ಹೇಳಿದ್ದರು. 

ಭಾರತ-ಚೀನಾ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಲಡಾಖ್‌ಗೆ ಹಠಾತ್ ಭೇಟಿ ನೀಡಿದ ಪ್ರಧಾನಿ ಮೋದಿ

ದೇಶದಲ್ಲಿ ಸದ್ಯ COVID-19 ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಪ್ರತಿ ಬಾರಿಯೂ ಇದರ ಬಗ್ಗೆ ಮಾತನಾಡುತ್ತಿದ್ದಾರೆ. COVID-19 ವೈರಸ್ ವಿರುದ್ಧ ಹೋರಾಡಲು ಜನರ ಪ್ರಯತ್ನ ಮತ್ತು ಕೊಡುಗೆಗಳನ್ನು ಶ್ಲಾಘಿಸುತ್ತಿದ್ದಾರೆ. 67ನೇ ಆವೃತ್ತಿಯ ಮನ್ ಕಿ‌ ಬಾತ್ ಕಾರ್ಯಕ್ರಮದಲ್ಲೂ COVID-19 ವೈರಸ್ ಹರಡುತ್ತಿರುವ ಬಗ್ಗೆ ಮಾತನಾಡುವ ಸಾಧ್ಯತೆ ಇದೆ.

Trending News