ನವದೆಹಲಿ: Punjab New CM - ಪಂಜಾಬ್ನಲ್ಲಿ ಚರಣಜಿತ್ ಸಿಂಗ್ ಚನ್ನಿ (CM Charanjit Singh Channi) ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಅವರು ಅಧಿಕಾರ ವಹಿಸಿಕೊಂಡ ತಕ್ಷಣ ಅವರ ಕಷ್ಟಗಳೂ ಹೆಚ್ಚಾಗತೊಡಗಿವೆ. ಒಂದೆಡೆ, ಕಾಂಗ್ರೆಸ್ (Congress) ನೊಳಗಿನ ಆಂತರಿಕ ಕಲಹ ಉತ್ತುಂಗದಲ್ಲಿದ್ದರೆ, ಮತ್ತೊಂದೆಡೆ, ಚರಣಜಿತ್ ಅವರ ಹಳೆಯ ವಿವಾದಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ. ಮಹಿಳಾ ಆಯೋಗದ ಅಧ್ಯಕ್ಷೆ (NCW Charirperson) ಅವರನ್ನು ಸಿಎಂ ಮಾಡಿರುವುದಕ್ಕೆ ಕಾಂಗ್ರೆಸ್ ಅನ್ನು ಗುರಿಯಾಗಿಸಿದ್ದಾರೆ.
2018 ರ MeToo ಚಳುವಳಿಯ (Me Too Movement) ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಗಂಭೀರ ಆರೋಪಗಳನ್ನು ಎದುರಿಸಿದ್ದರು ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ. ರಾಜ್ಯ ಮಹಿಳಾ ಆಯೋಗವು ಅವರಿಗೆ ನೋಟಿಸ್ ನೀಡಿತ್ತು, ಮತ್ತು ಅವರನ್ನು ವಜಾಗೊಳಿಸಲು ಧರಣಿ ಕೂಡ ನಡೆಸಿತ್ತು. ಆದರೆ ಪಂಜಾಬ್ ಸರ್ಕಾರ ಈ ವಿಷಯದಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ದಲಿತ ಸಿಎಂ ವಿಚಾರ: ಸಿದ್ದರಾಮಯ್ಯ ಮತ್ತು ಡಿಕೆಶಿ ನಿಲುವು ಪ್ರಶ್ನಿಸಿದ ಬಿಜೆಪಿ
Allegations were levelled against him (Punjab CM Charanjit Singh Channi) during Me Too movement in 2018. The State Women Commission had taken a suo moto cognizance of the matter & the chairperson sat on a dharna demanding his removal but nothing happened: Rekha Sharma, NCW (1/2) pic.twitter.com/7bdF8P6XW8
— ANI (@ANI) September 20, 2021
ಇದನ್ನೂ ಓದಿ-ಪಂಜಾಬ್ CM ಆಫರ್ ತಿರಸ್ಕರಿಸಿದ Ambika Soni, ಶಾಸಕಾಂಗ ಪಕ್ಷದ ಸಭೆಯೂ ರದ್ದು
ಈ ಕುರಿತು ಹೇಳಿಕೆ ನೀಡಿರುವ ರೇಖಾ ಶರ್ಮಾ(Rekha Sharma), ಮಹಿಳೆ ನೇತೃತ್ವದವಹಿಸಿರುವ ಪಕ್ಷ (Congress) ಇಂದು ಚರಣಜಿತ್ ಸಿಂಗ್ ಅವರನ್ನು ಪಂಜಾಬ್ ಮುಖ್ಯಮಂತ್ರಿಯನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ. ಮಹಿಳೆಯರ ಸುರಕ್ಷತೆಗೆ ಇದು ಅತ್ಯಂತ ಅಪಾಯಕಾರಿ ಸಂಗತಿಯಾಗಿದ್ದು, ಅವರು ಮುಖ್ಯಮಂತ್ರಿಯಾಗಲು ಯೋಗ್ಯರಲ್ಲದ ಕಾರಣ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ. ಚರಣಜಿತ್ ಅವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕುವಂತೆ ರೇಖಾ ಶರ್ಮಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ (Sonia Gandhi) ಒತ್ತಾಯಿಸಿದ್ದಾರೆ.
ಇದನ್ನೂ ಓದಿ-ಗಾಂಧೀಜಿ, ರಾಖಿ ಸಾವಂತ್ ಬಗ್ಗೆ ಉತ್ತರ ಪ್ರದೇಶದ ಸ್ಪೀಕರ್ ಹೇಳಿದ್ದೇನು ಗೊತ್ತೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.