ನವದೆಹಲಿ: ಮಾರುಕಟ್ಟೆಯಲ್ಲಿ ಹಲವು ಬಗೆಯ ಫೋನ್ ಗಳು ಲಭ್ಯವಿದೆ. ಆದರೆ iPhone ಮಾತ್ರವೇ ಐಫೋನ್ ಆಗಿರಲು ಸಾಧ್ಯ. ಒಂದು ಸಾಮಾನ್ಯ ಸ್ಮಾರ್ಟ್ ಫೋನ್ ಗೆ ಹೋಲಿಸಿದರೆ ಐಫೋನ್ ಮಾರುಕಟ್ಟೆಯಲ್ಲಿ ದುಬಾರಿ. ಇದು ಎಷ್ಟು ದುಬಾರಿ ಎಂದರೆ ಎಲ್ಲರೂ ಇದನ್ನು ಖರೀದಿಸಲು ಸಾಧ್ಯವಿಲ್ಲ.
ಭಾರತದಲ್ಲಿ ಐಫೋನ್ ಬಗ್ಗೆ ಹಲವು ತಪ್ಪುಗ್ರಹಿಕೆಗಳು ಇವೆ. ಐಫೋನ್ನನ್ನು ಒಂದು ಸ್ಟೇಟಸ್ ಎಂದು ಪರಿಗಣಿಸಲಾಗಿದೆ. ನಿಮ್ಮ ಕೈಯಲ್ಲಿ ರೂ .50,000 ಮೌಲ್ಯದ ಸ್ಮಾರ್ಟ್ಫೋನ್ ಹೊಂದಿದ್ದರೂ, ನಿಮ್ಮ ಪಕ್ಕದಲ್ಲಿ ಯಾರ ಬಳಿಯಾದರೂ ಐಫೋನ್ ಇದ್ದರೆ ಆವರನ್ನು ಜನ ಮಾತನಾಡಿಸುವ ರೀತಿಯೇ ಬೇರೆ. ಇದರಿಂದಾಗಿ ಐಫೋನ್ ಬೆಲೆ ಹೆಚ್ಚಿರಬಹುದು.
ಹಾಗಾಗಿ, ನೀವು ಸ್ಮಾರ್ಟ್ಫೋನ್ ಅನ್ನು ಐಫೋನ್ ಆಗಿ ಪರಿವರ್ತಿಸಬೇಕಾದರೆ, ನೀವು ಕೇವಲ ಐಫೋನ್ಗೆ ನಕಲಿ ಸ್ಟಿಕ್ಕರ್ ಅನ್ನು 100 ರಿಂದ 400 ರೂಪಾಯಿಗೆ ಖರೀದಿಸಬೇಕು, ಅದನ್ನು ನಿಮ್ಮ ಫೋನ್ನ ಹಿಂಭಾಗದಲ್ಲಿ ಎಚ್ಚರಿಕೆಯಿಂದ ಅಂಟಿಸಬೇಕು. ನಂತರ ನಿಮ್ಮ Redmi 6A ಐಫೋನ್ XS ರೀತಿ ಕಾಣಿಸುತ್ತದೆ.