76 ಭಾರತೀಯರು, 41 ಪಾಕಿಸ್ತಾನಿ ಪ್ರಯಾಣಿಕರನ್ನು ಹೊತ್ತು ದೆಹಲಿ ತಲುಪಿದ ಸಂಜೌತಾ ಎಕ್ಸ್‌ಪ್ರೆಸ್

ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಚರಿಸುತ್ತಿರುವ ಸಂಜೌತಾ ಎಕ್ಸ್‌ಪ್ರೆಸ್ ಅತ್ತಾರಿಯಿಂದ ಸುಮಾರು ನಾಲ್ಕೂವರೆ ಗಂಟೆ ವಿಳಂಬವಾಗಿ ಹೊರಟಿತು.

Last Updated : Aug 9, 2019, 10:22 AM IST
76 ಭಾರತೀಯರು, 41 ಪಾಕಿಸ್ತಾನಿ ಪ್ರಯಾಣಿಕರನ್ನು ಹೊತ್ತು ದೆಹಲಿ ತಲುಪಿದ ಸಂಜೌತಾ ಎಕ್ಸ್‌ಪ್ರೆಸ್  title=

ನವದೆಹಲಿ: ಕಾಶ್ಮೀರದಲ್ಲಿ ಆರ್ಟಿಕಲ್ 370 ಮತ್ತು 35 ಎ ಕುರಿತು ಭಾರತದ ನಿರ್ಧಾರದ ನಂತರ ಸಂಜೌತಾ ಎಕ್ಸ್‌ಪ್ರೆಸ್ ಮತ್ತೆ ಚರ್ಚೆಯ ವಿಷಯವಾಗಿದೆ. ಸಂಜೌತಾ ಎಕ್ಸ್‌ಪ್ರೆಸ್ ಅನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಪಾಕಿಸ್ತಾನ ರೈಲ್ವೆ ಸಚಿವ ಪರಶಿದ್ ಅಹ್ಮದ್ ಖಾನ್ ಗುರುವಾರ ಟ್ವೀಟ್ ಮಾಡಿದ್ದರು. ಇದಕ್ಕಾಗಿ ಈಗಾಗಲೇ ಟಿಕೆಟ್ ಖರೀದಿಸಿದವರು, ಯಾವುದೇ ಶುಲ್ಕವನ್ನು ಕಡಿತಗೊಳಿಸದೆ ಮರುಪಾವತಿ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.

ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಚರಿಸುತ್ತಿರುವ ಸಂಜೌತಾ ಎಕ್ಸ್‌ಪ್ರೆಸ್ ಅತ್ತಾರಿಯಿಂದ ಸುಮಾರು ನಾಲ್ಕೂವರೆ ಗಂಟೆಗಳ ವಿಳಂಬವಾಗಿ ಹೊರಟಿದ್ದು, ಇಂದು ಬೆಳಿಗ್ಗೆ 8 ಗಂಟೆಗೆ ದೆಹಲಿಯನ್ನು ತಲುಪಿತು. ಇದು ಅತ್ತಾರಿಯಿಂದ ದೆಹಲಿಗೆ ಒಂದೂವರೆ ಗಂಟೆಗೆ ಹೊರಟಿತ್ತು.

ಸಂಜೌತಾ ಎಕ್ಸ್‌ಪ್ರೆಸ್ ಮೂಲಕ ಒಟ್ಟು 117 ಪ್ರಯಾಣಿಕರು ದೆಹಲಿಯನ್ನು ತಲುಪಿದ್ದಾರೆ. ಇವರಲ್ಲಿ 76 ಭಾರತೀಯರು ಮತ್ತು 41 ಪಾಕಿಸ್ತಾನಿ ಪ್ರಜೆಗಳು ಸೇರಿದ್ದಾರೆ. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಸಂಜೌತಾ ಎಕ್ಸ್‌ಪ್ರೆಸ್ ಅನ್ನು ವಾಗಾ ಗಡಿಯಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಮುಂದೆ ಸಾಗಲು ಅವಕಾಶ ಮಾಡಿಕೊಡಲಾಯಿತು.

ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕೆಳಮಟ್ಟಕ್ಕಿಳಿಸುವ ನಿರ್ಧಾರವನ್ನು ಪಾಕಿಸ್ತಾನ ಬುಧವಾರ ಪ್ರಕಟಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ರದ್ದುಗೊಳಿಸುವ ಭಾರತದ ಕ್ರಮವನ್ನು ಉಲ್ಲೇಖಿಸಿ ಪಾಕಿಸ್ತಾನವು ಭಾರತೀಯ ಹೈಕಮಿಷನರ್ ಅವರನ್ನು ವಾಪಸ್ ಕಳುಹಿಸಲಾಗುವುದು ಮತ್ತು ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

ದೆಹಲಿ ಮತ್ತು ಲಾಹೋರ್‌ಗೆ ಸಂಪರ್ಕ ಕಲ್ಪಿಸುವ ರೈಲು ಸೇವೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗಡಿಯ ಎರಡೂ ಬದಿಗಳಲ್ಲಿ ನೂರಾರು ಪ್ರಯಾಣಿಕರು ಭದ್ರತಾ ಅನುಮತಿಗಾಗಿ ಹಲವು ಗಂಟೆಗಳ ಕಾಲ ಕಾಯುತ್ತಿದ್ದರು. ಹಲವಾರು ಗಂಟೆಗಳ ನಂತರ, ಲಾಹೋರ್‌ಗೆ ಸಂಜೌತಾ ಎಕ್ಸ್‌ಪ್ರೆಸ್ ಸಂಜೆ 6.41 ಕ್ಕೆ ಅತ್ತಾರಿಯಿಂದ ಹೊರಟಿತು.
 

Trending News