ನವದೆಹಲಿ: ಗಾಂಧಿ ಕುಟುಂಬದ ಬೆಂಬಲಿಗರು ಮತ್ತು ಬಂಡಾಯ ನಾಯಕರ ನಡುವೆ ಸುದೀರ್ಘ ಕಿತ್ತಾಟದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಸಲು ನಿರ್ಧರಿಸಲಾಯಿತು. ಪಕ್ಷದಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೂ ಅವರು ಈ ಹುದ್ದೆಯನ್ನು ಅಲಂಕರಿಸಲು ಒಪ್ಪಿಕೊಂಡರು.
ಆದರೆ ಸೋಮವಾರ ಬೆಳಿಗ್ಗೆ ಸಿಡಬ್ಲ್ಯೂಸಿ ಸಭೆ ಪ್ರಾರಂಭವಾದಾಗ ಸೋನಿಯಾ ಗಾಂಧಿ (Sonia Gandhi) ಅವರು ತಮ್ಮ ಅಧ್ಯಕ್ಷ ಹುದ್ದೆಯನ್ನು ತೊರೆಯುವುದಾಗಿ ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಅದರ ನಂತರ ಕೇರಳದ ವಯನಾಡ್ ಸಂಸದ ರಾಹುಲ್ ಗಾಂಧಿ(Rahul Gandhi) ಮತ್ತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದವು. ಆದರೆ ಸಂಜೆಯ ಹೊತ್ತಿಗೆ ಬೇರೆಯೇ ನಿರ್ಧಾರ ಹೊರಬಿದ್ದಿತು.
ಏತನ್ಮಧ್ಯೆ ಟ್ವಿಟ್ಟರ್ನಲ್ಲಿ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗದಿದ್ದಾಗ ಜನರು #ReimburseMyKajuKatli ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿದ್ದು ಇದು ಶೀಘ್ರದಲ್ಲಿಯೇ ಟ್ರೆಂಡ್ ಆಗ ತೊಡಗಿತು.
ಟ್ವಿಟ್ಟರ್ ಬಳಕೆದಾರರೊಬ್ಬರು, ಇದು ತುಂಬಾ ಅನ್ಯಾಯ... ರಾಹುಲ್ ಗಾಂಧಿ ಅಧ್ಯಕ್ಷರಾಗುತ್ತಾರೆ ಎಂದು ನಾನೂ ಬೆಳಿಗ್ಗೆಯಿಂದ "ಕಾಜು ಕಟ್ಲಿ" ಖರೀದಿಸಿ ಹಂಚಲು ಕಾದು ಕುಳಿತಿದ್ದೇನೆ. ಈಗ ಕಾಂಗ್ರೆಸ್ ನನ್ನ ಸ್ವೀಟ್ ಬಾಕ್ಸ್ ಗೆ Reimbursement ಮಾಡಬೇಕು ಎಂದು ಬರೆದಿದ್ದಾರೆ.
ये बहुत नाइंसाफ़ी है ..बहुत नाइंसाफ़ी ..
सुबह से मैं “काजु कतली” का डब्बा ख़रीद के बैठा हूँ की राहुल गांधी अध्यक्ष बनेंगे और मैं मिठाई बटूँगा..
अब कोंग्रेस को मेरे इस मिठाई के डब्बे की Reimbursement करनी होगी!!#ReimburseMyKajuKatli— Ghanshyam Maurya (@IGhanshyammaury) August 24, 2020
#ReimburseMyKajuKatli
सोनिया गांधी जी ने अपना इस्तीफा स्वीकार नहीं किया। वह कांग्रेस की अध्यक्षा फ़िलहाल बनी रहेंगी।#CongressLeadership pic.twitter.com/E3WGFhtoK8— रंजीत कुमार सिंह ☕☕ #IndiaSupportsCAA (@ranjeet1710) August 24, 2020
#Toon- Modi ji main aa raha.....
..................................................#ReimburseMyKajuKatli pic.twitter.com/CUUBRj9JQs— Dr. Shuchita Vatsal (@SJVatsal) August 24, 2020
ಮೂಲಗಳ ಪ್ರಕಾರ, ಪಕ್ಷದ ಆಂತರಿಕ ಸುಧಾರಣೆಗಳು ಮತ್ತು ಹೆಚ್ಚು ಸಮರ್ಥ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಕೋರಿ 23 ಹಿರಿಯ ಕಾಂಗ್ರೆಸ್ ಮುಖಂಡರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು. ಅದರ ನಂತರ ಸೋಮವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ಕರೆಯಲಾಯಿತು.
ರಾಹುಲ್ ಗಾಂಧಿ ಸಿಡಬ್ಲ್ಯುಸಿ ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದ್ದು ಸೋನಿಯಾ ಗಾಂಧಿ ಆಸ್ಪತ್ರೆಯಲ್ಲಿದ್ದಾಗ ಮತ್ತು ರಾಜಸ್ಥಾನದಲ್ಲಿ ಸರ್ಕಾರ ಬಿಕ್ಕಟ್ಟಿನಲ್ಲಿದ್ದಾಗ 23 ಹಿರಿಯ ಕಾಂಗ್ರೆಸ್ ಮುಖಂಡರು ಪತ್ರಗಳನ್ನು ಬರೆದಿದ್ದಾರೆ. ಅಂತಹ ಸಮಯದಲ್ಲಿ ನಾಯಕತ್ವದ ಬದಲಾವಣೆಯ ಬಗ್ಗೆ ಈ ಪತ್ರವನ್ನು ಬರೆಯುವುದರ ಅರ್ಥವೇನು? ಎಂದಿದ್ದಾರೆ. ಅಷ್ಟೇ ಅಲ್ಲದೆ ಇಂತಹ ವಿಚಾರಗಳನ್ನು ಚರ್ಚಿಸಲು ಸೂಕ್ತ ಸಮಯ ಮತ್ತು ವೇದಿಕೆ ಎಂದರೆ ಸಿಡಬ್ಲ್ಯುಸಿ ಸಭೆಯೇ ಹೊರತು ಮಾಧ್ಯಮವಲ್ಲ ಎಂದು ಕಿಡಿಕಾರಿದ್ದಾರೆ.
ರಾಹುಲ್ ಆರೋಪಕ್ಕೆ ಆಜಾದ್, ಸಿಬಲ್ ಸಿಟ್ಟು: CWC ಸಭೆಯಲ್ಲಿ ರಾಜೀನಾಮೆ ಬೆದರಿಕೆ
ಈ ಎಲ್ಲಾ ವಿಷಯಗಳ ಚರ್ಚೆಯ ಬಳಿಕವೂ ಗಾಂಧಿ ಕುಟುಂಬವು ಕಾಂಗ್ರೆಸ್ನಲ್ಲಿ ಮತ್ತೊಮ್ಮೆ ತಮ್ಮ ಸರ್ವೋಚ್ಚ ನಾಯಕತ್ವವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದರೂ, ಪಕ್ಷದಲ್ಲಿ ಅವರ ವಿರುದ್ಧ ಧ್ವನಿ ಎದ್ದಿರುವುದು ಬಹಿರಂಗಗೊಂಡಿವೆ.