ಭಿಂದ್: ಪೊಲೀಸ್ ಅಧಿಕಾರಿಯ ಮನೆಗೆ ಕನ್ನ ಹಾಕಿರುವ ಖತರ್ನಾಕ್ ಖದೀಮನೊಬ್ಬ ‘ಸ್ವಾರಿ ಫ್ರೆಂಡ್’ ಎಂದು ಕ್ಷಮಾಪನ ಪತ್ರ ಬರೆದಿರುವ ವಿಚಿತ್ರ ಘಟನೆ ಮಧ್ಯಪ್ರದೇಶ(Madhya Pradesh)ದಲ್ಲಿ ನಡೆದಿದೆ.
ಭಿಂದ್ ನಗರದಲ್ಲಿರುವ ಪೊಲೀಸ್ ಅಧಿಕಾರಿ(Police)ಯ ಮನೆಗೆ ನುಗ್ಗಿದ ಕಳ್ಳ ನಗದು ಸೇರಿದಂತೆ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಮನೆಯಿಂದ ತೆರಳುವಾಗ ಕ್ಷಮಾಪನ ಪತ್ರ ಬರೆದಿಟ್ಟಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿರುವ ಕೊಟ್ವಾಲಿ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್ ಪೆಕ್ಟರ್ ಕಮಲೇಶ್ ಕಟಾರೆ, ‘ಮನೆಯ ಮಾಲೀಕ ಛತ್ತೀಸ್‌ಘಡ್ದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ಮತ್ತು ಮಕ್ಕಳು ಸಂಬಂಧಿಗಳ ಮನೆಗೆ ತೆರಳಿದ್ದರು. ವಾಪಸ್ ಮನೆಗೆ ಮರಳಿದ್ದ ಅವರಿಗೆ ಶಾಕ್ ಆಗಿತ್ತು. ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಯಾರೋ ಕಳ್ಳತನ ಮಾಡಿರುವುದು ಅರಿವಿಗೆ ಬರುತ್ತಿದ್ದಂತೆಯೇ ದೂರು ನೀಡಿದ್ದಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Shocking News: ಮಾಜಿ ಕೇಂದ್ರ ಸಚಿವ ಪಿ.ಆರ್.ಕುಮಾರಮಂಗಲಂ ಪತ್ನಿಯ ಹತ್ಯೆ..!
ಯಾರೂ ಇಲ್ಲದ ಸಮಯ ನೋಡಿ ಮನೆಗೆ ನುಗ್ಗಿದ ಕಳ್ಳ(Crime) ಮೊದಲು ನಗದು ಸೇರಿದಂತೆ ಚಿನ್ನಾಭರಣ ದೋಚಿದ್ದಾನೆ. ‘ಸ್ವಾರಿ ಫ್ರೆಂಡ್, ನಾನು ಈ ಕಳ್ಳತನ ಮಾಡುವ ಅನಿವಾರ್ಯತೆಯಿತ್ತು. ಹೀಗೆ ಮಾಡದಿದ್ದರೆ ನನ್ನ ಸ್ನೇಹಿತನ ಪ್ರಾಣ ಹೋಗುತ್ತಿತ್ತು. ನನ್ನ ಸ್ನೇಹಿತನ ಜೀವ ಉಳಿಸುವುದಕ್ಕಾಗಿ ನಾನು ಈ ಕಳುವು ಮಾಡಿದ್ದೇನೆ. ಚಿಂತಿಸಬೇಡಿ ಶೀಘ್ರವೇ ನಿಮ್ಮ ಹಣವನ್ನು ಮರಳಿಸುತ್ತೇನೆ’ ಎಂದು ಪತ್ರದಲ್ಲಿ ಕಳ್ಳ ತಿಳಿಸಿದ್ದಾನೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕೆಲವು ಬೆಳ್ಳಿ, ಚಿನ್ನದ ಆಭರಣ ಮತ್ತು ನಗದು ಕಳ್ಳತನವಾಗಿದೆ. ಕುಟುಂಬದ ಪರಿಚಯಸ್ಥರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪೊಲೀಸರ(Police) ಮನೆಯನ್ನೇ ದೋಚಿ ‘ಸ್ವಾರಿ ಫ್ರೆಂಡ್’ ಎಂದು ಕ್ಷಮಾಪನ ಪತ್ರ ಬರೆದಿರುವ ಕಳ್ಳನ ನಡೆ ಖಾಕಿಪಡೆಗೆ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: Gujarat: 17 ವರ್ಷದ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಯುವತಿ ಮಾಡಿದ್ದೇನು ಗೊತ್ತಾ?
ಮತ್ತೊಂದು ಘಟನೆಯಲ್ಲಿ ರಾಂಚಿಯಲ್ಲಿರುವ ಮನೆಯೊಂದರ ಮಾಲೀಕರು ಕಳ್ಳರಿಗಾಗಿ ತಮ್ಮ ಮನೆಯ ಮುಂದೆ ವಿಚಿತ್ರ ಸಂದೇಶವನ್ನು ನೇತುಹಾಕಿದ್ದಾರೆ. ‘ಈ ಮನೆಯನ್ನು ಈಗಾಗಲೇ ಕೆಲವು ಕಳ್ಳರು ಟಾರ್ಗೆಟ್ ಮಾಡಿದ್ದಾರೆ. ದಯವಿಟ್ಟು ನೀವು ವ್ಯರ್ಥ ಪ್ರಯತ್ನ ಮಾಡಬೇಡಿ’ ಎಂದು ಸಂದೇಶ ಬರೆಯುವ ಮೂಲಕ ಕಳ್ಳತನದಿಂದ ಪಾರಾಗಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಆದರೆ ರಾಂಚಿ, ಜಾರ್ಖಂಡ್ ಸೇರಿದಂತೆ ಮಧ್ಯಪ್ರದೇಶದ ವಿವಿಧೆಡೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.