Survey Report: ಮತ್ತೆ ಮೋದಿಯೇ ಪ್ರಧಾನಿಯಾಗಲಿ ಎಂದ ಶೇ.61ರಷ್ಟು ಮತದಾರರು..!

LokSabha Elections 2024: ಶೇ.52ರಷ್ಟು ಮುಸ್ಲಿಂ ಮತದಾರರು ರಾಹುಲ್‌ ಗಾಂಧಿ ಪ್ರಧಾನಿ ಆಗಬೇಕು ಎಂದು ಬಯಸಿದ್ದಾರೆ. ಶೇ.14ರಷ್ಟು ಮತದಾರರು ಕೇಜ್ರಿವಾಲ್‌ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Written by - Puttaraj K Alur | Last Updated : Oct 4, 2023, 04:13 PM IST
  • 2024ರಲ್ಲಿ ಮತ್ತೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕೆಂದ ದೇಶದ ಜನರು
  • ಇಂಡಿಯಾ ಟಿವಿ- ಸಿಎನ್‌ಎಕ್ಸ್‌ ಜನಮತ ಗಣನೆ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಪರ ಶೇ.70ರಷ್ಟು ಜನರ ಒಲವು
  • ಮುಸ್ಲಿಂ ಸಮುದಾಯಗಳಿಗೆ ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ರಾಹುಲ್‌ ಗಾಂಧಿ ಮೊದಲ ಆಯ್ಕೆ
Survey Report: ಮತ್ತೆ ಮೋದಿಯೇ ಪ್ರಧಾನಿಯಾಗಲಿ ಎಂದ ಶೇ.61ರಷ್ಟು ಮತದಾರರು..! title=
ಪ್ರಧಾನಿ ಮೋದಿ ಪರ ಶೇ.70ರಷ್ಟು ಜನರ ಒಲವು

LokSabha Elections 2024: 2024ರಲ್ಲಿ ಮತ್ತೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕು ಎಂದು ದೇಶದ ಮುಂದುವರಿದ ಸಮುದಾಯಗಳ ಜನರು ಬಯಸಿದ್ದಾರೆ. ಮುಸ್ಲಿಂ ಸಮುದಾಯಗಳಿಗೆ ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ರಾಹುಲ್‌ ಗಾಂಧಿ ಮೊದಲ ಆಯ್ಕೆಯಾಗಿದ್ದಾರೆ.

2024ರ ಲೋಕಸಭಾ ಚುನಾವಣೆ ಹಿನ್ನೆಲೆ ಇಂಡಿಯಾ ಟಿವಿ- ಸಿಎನ್‌ಎಕ್ಸ್‌ ನಡೆಸಿದ ಜನಮತ ಗಣನೆ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆಯಲ್ಲಿ ಶೇ.70ರಷ್ಟು ಮತದಾರರು ಮೋದಿ ಪ್ರಧಾನಿ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಶೇ.12ರಷ್ಟು ಮತದಾರರು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿಯವರ ಪರವಾಗಿ ಒಲವು ತೋರಿದ್ದಾರೆ. ಶೇ.6ರಷ್ಟು ಜನರು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಶೇ.4ರಷ್ಟು ಜನರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಶೇ.1ರಷ್ಟು ಜನ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರನ್ನು ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸರ್ಕಾರದ ಭರ್ಜರಿ ಗಿಫ್ಟ್ ! ವೇತನ ಹೆಚ್ಚಳ, ಡಿಎ ಅರಿಯರ್ಸ್ ಸೇರಿ ಮೂರು ಗುಡ್ ನ್ಯೂಸ್

ಶೇ.52ರಷ್ಟು ಮುಸ್ಲಿಂ ಮತದಾರರು ರಾಹುಲ್‌ ಗಾಂಧಿ ಪ್ರಧಾನಿ ಆಗಬೇಕು ಎಂದು ಬಯಸಿದ್ದಾರೆ. ಶೇ.14ರಷ್ಟು ಮತದಾರರು ಕೇಜ್ರಿವಾಲ್‌ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.58ರಷ್ಟು ದಲಿತ ಮತದಾರರು ಪಿಎಂ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ. ಆದರೆ ಶೇ.20ರಷ್ಟು ದಲಿತ ಮತದಾರರು ಮಾತ್ರ ರಾಹುಲ್ ಅವರನ್ನು ಪ್ರಧಾನಿ ಸ್ಥಾನದಲ್ಲಿ ನೋಡಲು ಬಯಸಿದ್ದಾರೆ.

ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಪ್ರಧಾನಿಯಾಗಬೇಕು ಎಂದು ಶೇ.10ರಷ್ಟು ದಲಿತ ಮತದಾರರು ಬಯಸಿದ್ದಾರೆ. ದಲಿತ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರ ಶೇ.2ರಷ್ಟು ಮತದಾರರು ಒಲವು ಹೊಂದಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ ಸಿಗುವುದು 50 ಸಾವಿರ ರೂ. ಪಿಂಚಣಿ ! ಭದ್ರವಾಗಿರುವುದು ವೃದ್ದಾಪ್ಯ ಜೀವನ

ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಶೇ.64ರಷ್ಟು ಮತದಾರರಿಗೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಬಯಕೆ ಇದೆ. ರಾಹುಲ್ ಗಾಂಧಿ ಪರ ಶೇ.15, ಅಖಿಲೇಶ್ ಯಾದವ್ ಪರ ಶೇ.5ರಷ್ಟು, ನಿತೀಶ್ ಕುಮಾರ್ ಪರ ಶೇ.3ರಷ್ಟು ಒಬಿಸಿ ಮತದಾರರು ಒಲವು ಪ್ರದರ್ಶಿಸಿದ್ದಾರೆ.

ಸಮೀಕ್ಷೆಯ ಒಟ್ಟಾರೆ ಫಲಿತಾಂಶದಲ್ಲಿ ಶೇ.61ರಷ್ಟು ಜನರು ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಹೇಳಿದ್ದರೆ, ಶೇ.21ರಷ್ಟು ಜನ ರಾಹುಲ್‌ ಗಾಂಧಿ ಪ್ರಧಾನಿಯಾಗಲಿ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News