ಉಗ್ರರು ಗುಂಡು ಹಾರಿಸಿ ಹೂಗುಚ್ಛ ನಿರೀಕ್ಷಿಸಬಾರದು- ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್

ಭಯೋತ್ಪಾದಕರ ಕೃತ್ಯದ ಬಗ್ಗೆ ಕಠಿಣ ನಿಲುವು ತಾಳಿರುವ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಆಗಸ್ಟ್ ತಿಂಗಳಿಂದ 40 ಕ್ಕೂ ಅಧಿಕ ಜನರು ಸಾವನನಪ್ಪಿದ್ದಾರೆ ಒಂದು ವೇಳೆ ಉಗ್ರರು ಗುಂಡು ಹಾರಿಸಿದ್ದಲ್ಲಿ ಅವರಿಗೆ ವಾಪಸ್ ಗುಂಡೇ ಬರುವುದೇ ಹೊರತು ಹೂಗುಚ್ಚವಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Last Updated : Oct 17, 2018, 07:40 PM IST
ಉಗ್ರರು ಗುಂಡು ಹಾರಿಸಿ ಹೂಗುಚ್ಛ ನಿರೀಕ್ಷಿಸಬಾರದು- ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ title=

ಶ್ರೀನಗರ: ಭಯೋತ್ಪಾದಕರ ಕೃತ್ಯದ ಬಗ್ಗೆ ಕಠಿಣ ನಿಲುವು ತಾಳಿರುವ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಆಗಸ್ಟ್ ತಿಂಗಳಿಂದ 40 ಕ್ಕೂ ಅಧಿಕ ಜನರು ಸಾವನನಪ್ಪಿದ್ದಾರೆ ಒಂದು ವೇಳೆ ಉಗ್ರರು ಗುಂಡು ಹಾರಿಸಿದ್ದಲ್ಲಿ ಅವರಿಗೆ ವಾಪಸ್ ಗುಂಡೇ ಬರುವುದೇ ಹೊರತು ಹೂಗುಚ್ಚವಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯಪಾಲ ಸತ್ಯಪಾಲ್ ಮಲಿಕ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಾವು ಅಧಿಕಾರ ಸ್ವೀಕರಿಸಿದ ದಿನದಿಂದ ಕೇವಲ 40 ಜನರು ಮೃತಪಟ್ಟಿದ್ದಾರೆ. ಕಲ್ಲು ತೂರಾಟ ಕಡಿಮೆಯಾಗಿದೆ. ಸ್ಥಳೀಯರು ಭಯೋತ್ಪಾಧನೆ ಸೇರಿವುದು ಸಹಿತ ಕಡಿಮೆಯಾಗಿದೆ. ನನಗೆ ಇಲ್ಲಿನ ಪರಿಸ್ಥಿತಿ ಬಗ್ಗೆ ತೃಪ್ತಿ ಇದೆ ಎಂದು ತಿಳಿಸಿದರು.

ಇನ್ನು ಭಯೋತ್ಪಾದಕರ ಕೃತ್ಯಗಳಿಗೆ ಉತ್ತರಿಸಿದ ಅವರು " ಉಗ್ರರು ಗುಂಡು ಹಾರಿಸಿದರೆ ಅದಕ್ಕೆ ಉತ್ತರವಾಗಿ ಅವರು ಗುಂಡನ್ನೇ ಪಡೆಯುವುದು ಹೊರತು ಹೂಗುಚ್ಚವಲ್ಲ" ಎಂದು ತಿಳಿಸಿದರು.ಇದೇ ವೇಳೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ತಮ್ಮ ಅಭಿಪ್ರಾಯವು ಕೇವಲ ಸರ್ಕಾರಿ ಅಂಕಿ ಅಂಶಗಳ ಮೂಲಕ ಹೇಳುತ್ತಿರುವುದಲ್ಲ ಬದಲಾಗಿ ಸಾಮಾನ್ಯ ಜನರು ಹೇಳಿದ ಅನುಭವದ ಮೇಲೆಯೂ ಸಹ ಎಂದು  ತಿಳಿಸಿದರು.

ಸ್ಥಳೀಯ ಯುವಕರ ಸ್ಥಿತಿಗತಿ ಬಗ್ಗೆ ತಿಳಿಸಿದ ಅವರು "13 ರಿಂದ 20 ವರ್ಷದ ವಯಸ್ಸಿನ ಯುವಕರು ಹತಾಶರಾಗಿದ್ದಾರೆ ಆದ್ದರಿಂದ ಅವರನ್ನು ಪರಿಗಣಿಸುವುದು ಪ್ರಮುಖವಾದದ್ದು .ಅವರು ಕೇವಲ ದೆಹಲಿಯಿಂದ ಮಾತ್ರ ಅಸಮಧಾನಗೊಂಡಿಲ್ಲ ಬದಲಾಗಿ ಪಾಕಿಸ್ತಾನದಿಂದಲೂ ಕೂಡ ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ಅವರ ಮಧ್ಯ ಸಂವಾದ ಏರ್ಪಡಿಸಬೇಕಾಗಿದೆ ಮತ್ತು ಅವರ ಆಸೆಗೆ ತಕ್ಕಂತೆ ಕಾರ್ಯನಿರ್ವಹಿಸಬೇಕಾಗಿದೆ. ಆ ಮೂಲಕ ಕೇಂದ್ರ ಸರ್ಕಾರವು ಯುವಕರ ವಿರುದ್ದವಲ್ಲ ಎನ್ನುವುದನ್ನು ಮನಗಾನಿಸಬೇಕಾಗಿದೆ ಎಂದು ತಿಳಿಸಿದರು.

 

Trending News