ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ: ಪ್ರಿಯಾಂಕಾ ಗಾಂಧಿ ಹೇಳಿದ ಆ ಸೂತ್ರ ಯಾವುದು ಗೊತ್ತೇ?

ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಈಗ ಬಿಜೆಪಿಯನ್ನು ಕಟ್ಟಿಹಾಕಲು ಸೂತ್ರವೊಂದನ್ನು ಹೆಣೆದಿದ್ದಾರೆ.ಈಗ ಈ ಸೂತ್ರದ ಪ್ರಕಾರ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇಂತಹ ಮಹತ್ವದ ಸಂಗತಿಯೊಂದನ್ನು ಈಗ ಸ್ವತ ಪ್ರಿಯಾಂಕಾ ಗಾಂಧಿಯವರೇ ಬಹಿರಂಗಪಡಿಸಿದ್ದಾರೆ. 

Last Updated : May 1, 2019, 04:12 PM IST
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ: ಪ್ರಿಯಾಂಕಾ ಗಾಂಧಿ ಹೇಳಿದ ಆ ಸೂತ್ರ ಯಾವುದು ಗೊತ್ತೇ?   title=

ನವದೆಹಲಿ: ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಈಗ ಬಿಜೆಪಿಯನ್ನು ಕಟ್ಟಿಹಾಕಲು ಸೂತ್ರವೊಂದನ್ನು ಹೆಣೆದಿದ್ದಾರೆ.ಈಗ ಈ ಸೂತ್ರದ ಪ್ರಕಾರ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇಂತಹ ಮಹತ್ವದ ಸಂಗತಿಯೊಂದನ್ನು ಈಗ ಸ್ವತ ಪ್ರಿಯಾಂಕಾ ಗಾಂಧಿಯವರೇ ಬಹಿರಂಗಪಡಿಸಿದ್ದಾರೆ. 

ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ನ ಉಸ್ತುವಾರಿ ವಹಿಸಿರುವ ಪ್ರಿಯಾಂಕಾ ಗಾಂಧಿ ಈಗ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಮತಗಳನ್ನು ವಿಭಜಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎಂದು ಹೇಳಿದ್ದಾರೆ. 

"ನನ್ನ ಕಾರ್ಯತಂತ್ರ ಬಹಳ ಸ್ಪಷ್ಟವಾಗಿದೆ.ನಮ್ಮ ಅಭ್ಯರ್ಥಿಗಳು ಪ್ರಬಲವಾಗಿರುವ ಕಡೆ ಕಾಂಗ್ರೆಸ್ ಪಕ್ಷವು ಗೆಲ್ಲಲಿದೆ. ನಮ್ಮ ಅಭ್ಯರ್ಥಿಗಳು ಎಲ್ಲಿ ಪ್ರಬಲವಿಲ್ಲವೋ ಅಲ್ಲಿ ಬಿಜೆಪಿ ಮತಗಳ ಮೇಲೆ ಖನ್ನಾ ಹಾಕಲಿದ್ದಾರೆ. ಈ ಬಾರಿ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದ್ದು, ಅದು ಚುನಾವಣೆಯಲ್ಲಿ ಹಿನಾಯವಾಗಿ ಸೋಲನ್ನು ಅನುಭವಿಸುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿಕೂಟಕ್ಕೆ ಕಾಂಗ್ರೆಸ್ ನಿಂದ ಸಮಸ್ಯೆಯಾಗಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು  ಹಾಗೆ ಆಗಲು ಸಾಧ್ಯವಿಲ್ಲವೆಂದರು."ನಾವು ಕೇವಲ ಜನರ ಕಲ್ಯಾಣ ಮತ್ತು ನಮ್ಮ ಸಿದ್ಧಾಂತಕ್ಕಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದೇವೆ. ಆದರೆ ಮೋದಿ ಮಾತ್ರ ಮುಂದಿನ ಪ್ರಧಾನಿ ಯಾರು? ಎಂದು ಚಿಂತಿಸುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ವ್ಯಂಗ್ಯವಾಡಿದರು.

Trending News