ನವದೆಹಲಿ: ಚುನಾವಣಾ ನೀತಿ ಸಂಹಿತೆ ಜಾರಿ ಇದ್ದ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಪ್ರಕಟಿಸಲು ಚುನಾವಣಾ ಆಯೋಗದ ಅನುಮತಿ ಪಡೆಯಬೇಕಾಗಿಲ್ಲ ಎಂದು ಚುನಾವಣಾಧಿಕಾರಿಗಳು ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಭೂಸ್ಥರದ ಕೆಳ ಕಕ್ಷೆಯಲ್ಲಿ ಭಾರತವು ಲೈವ್ ಉಪಗ್ರಹವನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಈಗ ಚುನಾವಣಾ ಅಧಿಕಾರಿಗಳ ಹೇಳಿಕೆ ಬಂದಿದೆ ಎನ್ನಲಾಗಿದೆ.
Today @narendramodi got himself an hour of free TV & divert nation's attention away from issues on ground — #Unemployment #RuralCrisis & #WomensSecurity — by pointing at the sky.
Congratulations @drdo_india & @isro — this success belongs to you. Thank you for making India safer.
— Akhilesh Yadav (@yadavakhilesh) March 27, 2019
"ಭಾರತಕ್ಕೆ ಇಂದೊಂದು ದೊಡ್ಡ ಕ್ಷಣ, ನಮ್ಮಲ್ಲಿರುವ ಪ್ರತಿಯೊಬ್ಬರೂ ಕೂಡ ಇದಕ್ಕೆ ಹೆಮ್ಮೆ ಪಡಬೇಕು ಈಗ ನಾವು ಭೂಮಿ, ಜಲ, ವಾಯು,ಪ್ರದೇಶವನ್ನಷ್ಟೇ ರಕ್ಷಿಸುವುದಷ್ಟೇ ಅಲ್ಲದೆ ಅಂತರಿಕ್ಷವನ್ನು ಸಹಿತ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಆದ್ದರಿಂದ ಈ ಪ್ರಯತ್ನವನ್ನು ಸಾಧ್ಯಗೊಳಿಸಿದ ಎಲ್ಲ ನಮ್ಮ ವಿಜ್ಞಾನಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನೊಂದೆಡೆ ಪ್ರಧಾನಿ ಮೋದಿ ಘೋಷಣೆಗೆ ಕಿಡಿಕಾರಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ "ಇಂದು ನರೇಂದ್ರ ಮೋದಿ ಅವರು ಒಂದು ಗಂಟೆಗಳ ಕಾಲ ಉಚಿತ ಟಿವಿ ಪಡೆಯುತ್ತಿದ್ದಾರೆ.ದೇಶದ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಗ್ರಾಮೀಣ ಬಿಕ್ಕಟ್ಟು ಮತ್ತು ಮಹಿಳಾ ಭದ್ರತೆಯ ಕುರಿತು ರಾಷ್ಟ್ರದ ಗಮನವನ್ನು ಆಕಾಶದೆಡೆಗೆ ತಿರುಗಿಸಿದ್ದಾರೆ ಎಂದು ಅಖಿಲೇಶ್ ಯಾದವ್ ದೂರಿಸಿದರು. ಇದೇ ವೇಳೆ ಅವರು ಈ ಸಾಧನೆಗೆ ಕಾರಣವಾದ ಡಿಆರ್ಡಿಒ ಮತ್ತು ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ.