“ಜಾತಿಗಣತಿಯಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಂರ ಜನಸಂಖ್ಯೆಯನ್ನು ಹೆಚ್ಚು ತೋರಿಸಲಾಗಿದೆ”- ಅಮಿತ್ ಶಾ ಗಂಭೀರ ಆರೋಪ

Amit Shah: ನಿತೀಶ್ ಕುಮಾರ್ ಎನ್‌ ಡಿ ಎ ಭಾಗವಾಗಿದ್ದಾಗ ಬಿಹಾರದಲ್ಲಿ ಜಾತಿ ಸಮೀಕ್ಷೆ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮುಜಾಫರ್‌ ಪುರದ ಪತಾಹಿಯಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದರು.

Written by - Bhavishya Shetty | Last Updated : Nov 5, 2023, 05:55 PM IST
    • ಬಿಹಾರದ ಜಾತಿಗಣತಿಯ ಫಲಿತಾಂಶಗಳ ಬಗ್ಗೆ ಅಸಮಾಧಾನ
    • ನಿತೀಶ್ ಸರ್ಕಾರದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ
    • ಮುಸ್ಲಿಮರು ಮತ್ತು ಯಾದವರ ಜನಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಆರೋಪ
“ಜಾತಿಗಣತಿಯಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಂರ ಜನಸಂಖ್ಯೆಯನ್ನು ಹೆಚ್ಚು ತೋರಿಸಲಾಗಿದೆ”- ಅಮಿತ್ ಶಾ ಗಂಭೀರ ಆರೋಪ title=
Amit Shah

Amit Shah: ಬಿಹಾರದ ಜಾತಿಗಣತಿಯ ಫಲಿತಾಂಶಗಳ ಬಗ್ಗೆ ಅಸಮಾಧಾನ ಹೊರಹಾಕಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿತೀಶ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಮೀಕ್ಷೆಯನ್ನು ನೆಪ ಎಂದು ಬಣ್ಣಿಸಿದ ಅಮಿತ್ ಶಾ, ಇದರಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಮರು ಮತ್ತು ಯಾದವರ ಜನಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಫೈನಲ್’ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿಯಾದ್ರೆ ರಚಿನ್ ಅವರ ತಾತಾ ಸಪೋರ್ಟ್ ಮಾಡೋದು ಈ ತಂಡಕ್ಕೆ! ಯಾವುದದು?

ನಿತೀಶ್ ಕುಮಾರ್ ಎನ್‌ ಡಿ ಎ ಭಾಗವಾಗಿದ್ದಾಗ ಬಿಹಾರದಲ್ಲಿ ಜಾತಿ ಸಮೀಕ್ಷೆ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮುಜಾಫರ್‌ ಪುರದ ಪತಾಹಿಯಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದರು. ಅಂದಹಾಗೆ ಕಳೆದ ವರ್ಷ, ಜೆಡಿಯು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದು ಕಾಂಗ್ರೆಸ್, ಆರ್‌ ಜೆ ಡಿ ಮತ್ತು ಎಡಪಕ್ಷಗಳ ಮಹಾಮೈತ್ರಿಕೂಟವನ್ನು ಸೇರಿತು.

ಇನ್ನು ವಿರೋಧ ಪಕ್ಷಗಳ I.N.D.I.A ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ ಶಾ, “ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವುದು ಮೈತ್ರಿಕೂಟದ ಏಕೈಕ ಅಜೆಂಡಾ” ಎಂದು ಆರೋಪಿಸಿದರು. “ನಿತೀಶ್ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಅವರನ್ನು (ನಿತೀಶ್) I.N.D.I.A ಮೈತ್ರಿಕೂಟದ ಸಂಯೋಜಕರನ್ನಾಗಿಯೂ ಮಾಡಿಲ್ಲ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಎಲ್ಲಾ 40 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ” ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.

“ಬಿಹಾರದ ಜನರು ಮೋದಿಜಿಗೆ 2014ರಲ್ಲಿ 31 ಸ್ಥಾನಗಳನ್ನು ಮತ್ತು 2019ರಲ್ಲಿ 39 ಸ್ಥಾನಗಳನ್ನು ನೀಡಿದ್ದಾರೆ. ಹಾಗಾಗಿ ಈ ಬಾರಿ 40 ರಲ್ಲಿ 40 ಸ್ಥಾನಗಳನ್ನು ಮೋದಿಯವರ ಕೈಗೆ ನೀಡಿ ಎಂದರು.

ಇದನ್ನೂ ಓದಿ: ಈ ರಾಶಿಯ ಜನರ ಬಾಳಲ್ಲಿ ದೀಪಾವಳಿ ಬೆಳಗಲಿದೆ ಅದೃಷ್ಟವೆಂಬ ನಂದಾದೀಪ: ಸಿರಿಸಂಪತ್ತಿನ ಸುಧೆಯನ್ನೇ ಧಾರೆ ಎರೆಯುವಳು ಸಾಕ್ಷಾತ್ ಮಹಾಲಕ್ಷ್ಮೀ

“ಕಾಂಗ್ರೆಸ್ ಯಾವಾಗಲೂ ಹಿಂದುಳಿದ ಸಮಾಜವನ್ನು ಬಹಿಷ್ಕರಿಸುತ್ತದೆ ಮತ್ತು ವಿರೋಧಿಸುತ್ತದೆ. ಆದರೆ ಪ್ರಧಾನಿ ಮೋದಿ ಯಾವಾಗಲೂ ಹಿಂದುಳಿದ ಸಮಾಜವನ್ನು ಗೌರವಿಸುತ್ತಾರೆ. ಮೋದಿ ಸಂಪುಟದಲ್ಲಿ 27 ಸಚಿವರು ಒಬಿಸಿ ಸಮುದಾಯದವರು, ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲಾಗಿದೆ. ಇದರೊಂದಿಗೆ ನವೋದಯ ವಿದ್ಯಾಲಯ, ಕೇಂದ್ರೀಯ ವಿದ್ಯಾಲಯ ಮತ್ತು ಸೈನಿಕ ವಿದ್ಯಾಲಯಗಳಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಶೇ.27ರಷ್ಟು ಮೀಸಲಾತಿ ನೀಡಲಾಗಿದೆ” ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News