ವೈಕುಂಟ ಏಕಾದಶಿ : ತಿರುಪತಿ ಸ್ವರ್ಗ ದ್ವಾರ ದರ್ಶನಕ್ಕೆ ಆನ್‌ಲೈನ್ ಟಿಕೆಟ್‌ ಮಾರಾಟ ಪ್ರಾರಂಭ..!

ವೈಕುಂಟ ಏಕಾದಶಿಯ ಸಂದರ್ಭದಲ್ಲಿ, ತಿರುಪತಿ ತಿರುಮಲ ದೇವಸ್ಥಾನದಲ್ಲಿ ಜನವರಿ 2 ರಂದು ಸ್ವರ್ಗದ ಬಾಗಿಲು ತೆರೆಯಲಾಗುತ್ತದೆ. 10 ದಿನಗಳ ಕಾಲ ಭಕ್ತರಿಗೆ ಸ್ವರ್ಗದ ದ್ವಾರದ ಮೂಲಕ ಗೋವಿಂದನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಸುಮಾರು 2.50 ಲಕ್ಷ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರತಿದಿನ 25 ಸಾವಿರ ಭಕ್ತರು ಈ ವಿಶೇಷ ದರ್ಶನದಲ್ಲಿ ಭಾಗವಹಿಸಬಹುದು. ಈ ದರ್ಶನ ಲಭ್ಯ ಪಡೆಯಲು 300 ರೂ. ಶುಲ್ಕದಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್‌ ಮಾಡಬಹುದಾಗಿದೆ.

Written by - Krishna N K | Last Updated : Dec 24, 2022, 01:31 PM IST
  • ವೈಕುಂಟ ಏಕಾದಶಿಯ ಪ್ರಯುಕ್ತ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಜನವರಿ 2 ರಂದು ಸ್ವರ್ಗದ ಬಾಗಿಲು ತೆರೆಯಲಾಗುತ್ತದೆ.
  • 10 ದಿನಗಳ ಕಾಲ ಭಕ್ತರಿಗೆ ಸ್ವರ್ಗದ ದ್ವಾರದ ಮೂಲಕ ಗೋವಿಂದನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
  • ಈ ದರ್ಶನ ಲಭ್ಯ ಪಡೆಯಲು 300 ರೂ. ಶುಲ್ಕದಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್‌ ಮಾಡಬಹುದಾಗಿದೆ.
ವೈಕುಂಟ ಏಕಾದಶಿ : ತಿರುಪತಿ ಸ್ವರ್ಗ ದ್ವಾರ ದರ್ಶನಕ್ಕೆ ಆನ್‌ಲೈನ್ ಟಿಕೆಟ್‌ ಮಾರಾಟ ಪ್ರಾರಂಭ..! title=

Tirupati Vaikunta Ekadasi : ವೈಕುಂಟ ಏಕಾದಶಿಯ ಸಂದರ್ಭದಲ್ಲಿ, ತಿರುಪತಿ ತಿರುಮಲ ದೇವಸ್ಥಾನದಲ್ಲಿ ಜನವರಿ 2 ರಂದು ಸ್ವರ್ಗದ ಬಾಗಿಲು ತೆರೆಯಲಾಗುತ್ತದೆ. 10 ದಿನಗಳ ಕಾಲ ಭಕ್ತರಿಗೆ ಸ್ವರ್ಗದ ದ್ವಾರದ ಮೂಲಕ ಗೋವಿಂದನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಸುಮಾರು 2.50 ಲಕ್ಷ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರತಿದಿನ 25 ಸಾವಿರ ಭಕ್ತರು ಈ ವಿಶೇಷ ದರ್ಶನದಲ್ಲಿ ಭಾಗವಹಿಸಬಹುದು. ಈ ದರ್ಶನ ಲಭ್ಯ ಪಡೆಯಲು 300 ರೂ. ಶುಲ್ಕದಲ್ಲಿ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್‌ ಮಾಡಬಹುದಾಗಿದೆ.

ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಬರುವ ವೈಕುಂಟ ಏಕಾದಶಿಯನ್ನು ವಿಶೇಷ ದಿನವಾಗಿ ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ 20 ದಿನಗಳ ಕಾಲ ಶ್ರೀನಿವಾಸನ ದೇವಾಲಯಗಳಲ್ಲಿ ವೈಕುಂಡ ಏಕಾದಶಿ ಪೂಜೆ ನಡೆಯತ್ತವೆ. ಎರಡು ದಿನಗಳ ಹಿಂದೆ ಎಲ್ಲಾ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಈ ಪೂಜೆ ಪ್ರಾರಂಭವಾಗುತ್ತದೆ. ವೈಕುಂಟ ಏಕಾದಶಿಯನ್ನು ವಿಶೇಷವಾಗಿ ತಿರುಪತಿಯಲ್ಲಿ ಆಚರಿಸಲಾಗುವುದು. ಈ ಪೂಜೆಯಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಭಕ್ತರು ಪ್ರಪಂಚದಾದ್ಯಂತ ಬರುತ್ತಾರೆ.

ಇದನ್ನೂ ಓದಿ: Shaniwar Upay: ಸೂರ್ಯಾಸ್ತದ ನಂತರ ಈ ಕೆಲಸ ಮಾಡಿ, ಶನಿ ಕೃಪೆಯಿಂದ ಧನ ಪ್ರಾಪ್ತಿಯಾಗುತ್ತದೆ

ಇನ್ನು ಉಚಿತ ದರ್ಶನಕ್ಕೆ ಮಾತ್ರ 5 ಲಕ್ಷ ದರ್ಶನ ಟೋಕನ್ ನೀಡಲು ನಿರ್ಧರಿಸಲಾಗಿದೆ. ದಿನಕ್ಕೆ 50,000 ಟೋಕನ್‌ಗಳ ಆಧಾರದ ಮೇಲೆ ಭಕ್ತರಿಗೆ ಅವಕಾಶ ನೀಡಲಾಗುವುದು. 300 ಶುಲ್ಕದಲ್ಲಿ 2.50 ಲಕ್ಷ ಭಕ್ತರಿಗೆ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ತಿರುಪತಿಯಲ್ಲಿ ಮಾತ್ರ ಸರ್ವ ದರ್ಶನದ ಟೋಕನ್ ಪಡೆಯಬಹುದು ಎಂದು ಘೋಷಿಸಲಾಗಿದೆ. ಅನಗತ್ಯ ಜನಸಂದಣಿ ತಪ್ಪಿಸಲು ದೇವಸ್ಥಾನದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ದರ್ಶನ ಟೋಕನ್ ಹೊಂದಿರುವವರಿಗೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶ. ಭಕ್ತರಿಗೆ ಅನ್ನ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News