ತೆಲಂಗಾಣದಿಂದ ವಲಸೆ ಕಾರ್ಮಿಕರನ್ನು ಹೊತ್ತು ಜಾರ್ಖಂಡ್ ಗೆ ಹೊರಟ ರೈಲು

ಹಲವು ರಾಜ್ಯಗಳಲ್ಲಿ ಲಾಕ್‌ಡೌನ್‌ನಿಂದಾಗಿ ಸಿಲುಕಿರುವರುವ ವಲಸೆ ಕಾರ್ಮಿಕರನ್ನು ಮರಳಿ ಊರಿಗೆ ಕಳುಹಿಸಲು ಭಾರತೀಯ ರೈಲ್ವೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.

Last Updated : May 1, 2020, 04:06 PM IST
ತೆಲಂಗಾಣದಿಂದ ವಲಸೆ ಕಾರ್ಮಿಕರನ್ನು ಹೊತ್ತು ಜಾರ್ಖಂಡ್ ಗೆ ಹೊರಟ ರೈಲು  title=
ಸಾಂದರ್ಭಿಕ ಚಿತ್ರ

ನವದೆಹಲಿ: ಹಲವು ರಾಜ್ಯಗಳಲ್ಲಿ ಲಾಕ್‌ಡೌನ್‌ನಿಂದಾಗಿ ಸಿಲುಕಿರುವರುವ ವಲಸೆ ಕಾರ್ಮಿಕರನ್ನು ಮರಳಿ ಊರಿಗೆ ಕಳುಹಿಸಲು ಭಾರತೀಯ ರೈಲ್ವೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.

ತೆಲಂಗಾಣದಲ್ಲಿ ಸಿಲುಕಿದ್ದ ಜಾರ್ಖಂಡ್‌ನ 1200 ವಲಸೆ ಕಾರ್ಮಿಕರಿಗಾಗಿ ತೆಲಂಗಾಣದ ಲಿಂಗಂಪಲ್ಲಿಯಿಂದ ಶುಕ್ರವಾರ ಬೆಳಿಗ್ಗೆ 5.30ಕ್ಕೆ ಬಿಡಲಾಗಿದೆ. ಪ್ರತಿ ಬೋಗಿಯಲ್ಲಿ  54 ಪ್ರಯಾಣಿಕರಿಗಂತೆ ಆಸವನ್ನು ಕಲ್ಪಿಸಲಾಗಿದ,ಹತಿಯಾಗೆ ರಾತ್ರಿ 11ಕ್ಕೆ ತಲುಪಲಿದೆ ಎಂದು ಎನ್ನಲಾಗಿದೆ.ಈ ರೈಲು ನಿಲುಗಡೆ ರಹಿತ ಎನ್ನಲಾಗಿದ್ದು, ನೀರು ಆಹಾರವನ್ನು ತುಂಬಿಕೊಳ್ಳಲು ಒಂದು ಕಡೆ ಮಾತ್ರ ನಿಲ್ಲಲಿದೆ ಎನ್ನಲಾಗಿದೆ .ರೈಲಿನಲ್ಲಿರುವ ಎಲ್ಲರಿಗೂ ಮಾಸ್ಕ್ ಮತ್ತು ಗ್ಲೌಸ್ ಗಳನ್ನೂ ಧರಿಸುವುದು ಕಡ್ಡಾಯವಾಗಿದೆ.

ಈಗ ಈ ರೈಲು ಸಂಚಾರದ ವಿಚಾರವಾಗಿ ಪ್ರತಿಕ್ರಿಯಿಸಿರುವ ಭಾರತೀಯ ರೈಲ್ವೆಯ ವಕ್ತಾರ ಆರ್‌.ಡಿ. ಬಾಜಪೇಯಿ' ತೆಲಂಗಾಣ ಸರ್ಕಾರದ ಮನವಿ ಹಾಗೂ ರೈಲ್ವೆ ಸಚಿವಾಲಯದ ನಿರ್ದೇಶನದ ಮೇರೆಗೆ ವಿಶೇಷ ರೈಲನ್ನು ಬಿಡಲಾಗಿದೆ. ನಿಲ್ದಾಣದಲ್ಲೇ ಪ್ರಯಾಣಿಕರ ತಪಾಸಣೆ ಹಾಗೂ ಪ್ರಯಾಣದ ವೇಳೆ ಅಂತರ ಕಾಯ್ದುಕೊಳ್ಳುವಿಕೆಗೆ ಆದ್ಯತೆ ನೀಡಲಾಗಿದೆ. ತೆಲಂಗಾಣ ಸರ್ಕಾರ ಗೃಹ ಹಾಗೂ ಆರೋಗ್ಯ ಸಚಿವಾಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ರೈಲು ಸಂಚಾರ ಆರಂಭವಾಗಿದೆ ಎಂದು ತಿಳಿಸಿದರು.

ಈಗ ತೆಲಂಗಾಣ ರಾಜ್ಯದ ಮನವಿ ಮೇರೆಗೆ ಈ ರೈಲ್ವೆ ವ್ಯವಸ್ಥೆ ಮಾಡಲಾಗಿದ್ದು ಮುಂಬರುವ ದಿನಗಳಲ್ಲಿ ಇತರ ರಾಜ್ಯಗಳ ಮನವಿಗೂ ಕೂಡ ರೈಲ್ವೆ ಸ್ಪಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Trending News