ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಎರಡು ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್ಗಳು ಭವಿಷ್ಯ ನುಡಿದಿವೆ. ಹಲವಾರು ಸಮೀಕ್ಷೆಗಳು ಆಡಳಿತಾರೂಢ ಬಿಜೆಪಿ-ಸೇನಾ-ಎನ್ಸಿಪಿ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿವೆ.
Jharkhand assembly election 2024: ಜಾರ್ಖಂಡ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 2,100 ರೂ., ವರ್ಷಕ್ಕೆ 2 ಉಚಿತ LPG ಸಿಲಿಂಡರ್ ನೀಡುವುದು ಸೇರಿದಂತೆ ಹಲವಾರು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದಾರೆ.
Viral News: ವ್ಯಕ್ತಿ ಸಾವನ್ನಪ್ಪುತ್ತಿದ್ದಂತೆಯೇ ಹಾವು ಬಿಗಿಯನ್ನು ಸಡಿಲಗೊಳಿಸಿತು ಅಂತಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸೋಮವಾರ ಬೆಳಗ್ಗೆ ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಮಹಿಳೆ ಸೇರಿದಂತೆ ಕನಿಷ್ಠ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೊಂಟೊ ಮತ್ತು ಗೋಯಿಲ್ಕೆರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
IT Raid in Uttar Pradesh: ಕೆಲವು ದಿನಗಳ ಹಿಂದಷ್ಟೇ ಜಾರ್ಖಂಡ್ನ ಗ್ರಾಮೀಣಾಭಿವೃದ್ಧಿ ಸಚಿವ, ಕಾಂಗ್ರೆಸ್ ಮುಖಂಡ ಅಲಂಗೀರ್ ಆಲಂ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮನೆಯ ಮೇಲೆ ದಾಳಿ ನಡೆಸಿದ್ದು, ದಾಖಲೆ ಇಲ್ಲದ 25 ಕೋಟಿ ರೂ.ಗಿಂತ ಅಧಿಕ ಹಣವನ್ನು ವಶಕ್ಕೆ ಪಡೆಯಲಾಗಿತ್ತು.
Road Accident in Dhanbad: ವರದಿಗಳ ಪ್ರಕಾರ, ಪಂಕಜ್ ತ್ರಿಪಾಠಿ ಅವರ ಸಹೋದರಿ ಮತ್ತು ಅವರ ಪತಿ ಗೋಪಾಲ್ಗಂಜ್ನಿಂದ ಕೋಲ್ಕತ್ತಾಗೆ ಕಾರಿನಲ್ಲಿ ಹೋಗುತ್ತಿದ್ದರು, ಜಾರ್ಖಂಡ್ನ ಧನ್ಬಾದ್ನ ನಿರ್ಸಾದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪಂಕಜ್ ಅವರ ಸೋದರ ಮಾವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಸಹೋದರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Jharkhand : ಜಾರ್ಖಂಡ್ನ ಸಿಂದ್ರಿಯಲ್ಲಿ ಸುಮಾರು 36 ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮಾರ್ಚ್ 1) ಮಾಡಿದರು.
Odisha and Jharkhand IT Raid: ಒಡಿಶಾದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ನಲ್ಲಿ ತೆರಿಗೆ ವಂಚನೆ ನಡೆದಿದೆ ಎಂಬ ಶಂಕೆ ಮೇರೆಗೆ ಡಿ.6ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ದಾಖಲೆಯಿಲ್ಲದ ಬರೋಬ್ಬರಿ 300 ಕೋಟಿ ರೂ.ಗೂ ಹೆಚ್ಚು ಹಣ ಪತ್ತೆಯಾಗಿದೆ.
IT raids in Odisha and Jharkhand: ಬುಧವಾರ ಬೆಳಗ್ಗೆಯಿಂದ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಐಟಿ ದಾಳಿ ನಡೆಯುತ್ತಿದೆ. ಒಡಿಶಾದ 4 ಮತ್ತು ಜಾರ್ಖಂಡ್ನ 2 ಪ್ರದೇಶಗಳಲ್ಲಿ ಶೋಧಕಾರ್ಯ ನಡೆಯುತ್ತಿದೆ. ಒಡಿಶಾದ ರೈದಿಹ್, ಸಂಬಲ್ಪುರ್ ಮತ್ತು ಬಲಂಗಿರ್ ಜಿಲ್ಲೆಗಳಲ್ಲಿ BDPL ನಿರ್ದೇಶಕರು ಮತ್ತು ಕಂಪನಿಗೆ ಸೇರಿದ ಸ್ಥಳಗಳಿವೆ.
Love Case In Jharkhand: ಕೂಲಿ ಮಾಡುತ್ತಿದ್ದ ನಾನು ಸಾಲ ಮಾಡಿ ನರ್ಸಿಂಗ್ ಕಾಲೇಜಿಗೆ ಕಳುಹಿಸಿ ಓದಿಸಿದರೂ ಪತ್ನಿ ತನಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ ಅಂತಾ ಟಿಂಕು ಕುಮಾರ್ ಅಳಲು ತೋಡಿಕೊಂಡಿದ್ದಾನೆ.
Jharkhand Football Tragedy: ವರದಿಗಳ ಪ್ರಕಾರ, ಶನಿವಾರ ಸಂಜೆ ಭಾರೀ ಮಳೆ, ಗುಡುಗು ಸಹಿತವಾದ ಬಿರುಗಾಳಿ ಬೀಸಿದ್ದು, ಆ ಸಂದರ್ಭದಲ್ಲಿ ಹಲವಾರು ಪ್ರೇಕ್ಷಕರು ಹಂಸ್ದಿಹಾ ಪ್ರದೇಶದ ಆಟದ ಮೈದಾನದ ಪಕ್ಕದ ಟೆಂಟ್ ಅಡಿಯಲ್ಲಿ ಆಶ್ರಯ ಪಡೆಯುತ್ತಿದರು.
Jharkhand ACB Nabs assistant registrar: ಜಾರ್ಖಂಡ್ ದಲ್ಲಿ JPSC ಪರೀಕ್ಷೆಯಲ್ಲಿ 108ನೇ ರ್ಯಾಂಕ್ ಪಡೆದು 1 ವಾರದ ಹಿಂದೆಯಷ್ಟೇ ಮೊದಲ ಪೋಸ್ಟಿಂಗ್ ಪಡೆದುಕೊಂಡಿದ್ದ ಮಿಥಾಲಿ ಶರ್ಮಾ ಅವರು ಮೊದಲ ದಿನವೇ ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಯುವತಿಯರ ಜಗಳವಾಡುತ್ತಿದ್ದ ವೇಳೆ ಕಾಲೇಜಿನ ಹುಡುಗ-ಹುಡುಗಿಯರು ನಿಂತು ನೋಡುತ್ತಿದ್ದರು. ಆದರೆ ಯಾರೂ ಜಗಳ ಬಿಡಿಸಲು ಪ್ರಯತ್ನಿಸಿಲ್ಲ. ಸಾಲದ್ದಕ್ಕೆ ಯುವತಿಯರು ಮತ್ತಷ್ಟು ಜಗಳವಾಡಲಿ ಎಂದು ಕೇಕೆ, ಸಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ.
ಜಾರ್ಖಂಡ್ ಪೊಲೀಸರು ಛತ್ರದಲ್ಲಿ ನಡೆಸಿದ ಎನ್ಕೌಂಟರ್ನಲ್ಲಿ ಐವರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.ಹತ್ಯೆಗೀಡಾದ ಐವರ ಪೈಕಿ ಇಬ್ಬರ ತಲೆಗೆ ತಲಾ 25 ಲಕ್ಷ ರೂ.ಬಹುಮಾನ ನೀಡಲಾಗಿದ್ದು, ಇನ್ನಿಬ್ಬರಿಗೆ ತಲಾ 5 ಲಕ್ಷ ರೂ.ಬಹುಮಾನ ಘೋಷಿಸಿದ್ದರು.
Jharkhand Crime: ದಿಲ್ದಾರ್ ಅನ್ಸಾರಿ ತನ್ನ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿ ನಂತರ ಮೃತದೇಹವನ್ನು 12 ತುಂಡುಗಳಾಗಿ ಕತ್ತರಿಸಿ ಎಸೆದಿದ್ದಾನೆ. ಆರೋಪಿ ಪತಿ ದಿಲ್ದಾರ್ ಅನ್ಸಾರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದಿಲ್ದಾರ್ ಅನ್ಸಾರಿಗೆ ಈಕೆ ಎರಡನೇ ಪತ್ನಿಯಾಗಿದ್ದಾಳೆ
ಜಾರ್ಖಂಡ್ ಹೈಕೋರ್ಟ್ ನ್ಯಾಯಾಧೀಶ ಡಾ.ಎಸ್.ಎನ್.ಪಾಠಕ್ ಅವರ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ನೀಡಿದೆ. ಪೊಲೀಸ್ ಇಲಾಖೆಯ ಇತ್ತೀಚಿನ ನಿರ್ಧಾರದಿಂದ ಸಾಮಾನ್ಯ ವರ್ಗದ ನೌಕರರ ಬಡ್ತಿ ಪಡೆಯುವ ಅವಕಾಶಕ್ಕೆ ಅಡ್ಡಿಯಾಗಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಅರ್ಜಿದಾರರ ಪರವಾಗಿ ವಕೀಲ ದಿವಾಕರ್ ಉಪಾಧ್ಯಾಯ ವಾದ ಮಂಡಿಸಿದರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.