ತ್ರಿವಳಿ ತಲಾಕ್ ಪ್ರಕರಣದ ಇಷ್ರತ್ ಜಹಾನ್ ಬಿಜೆಪಿ ಸೇರ್ಪಡೆ

ತ್ರಿವಳಿ ತಲಾಕ್ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಇಷ್ರತ್ ಜಹಾನ್ ಬಿಜೆಪಿ ಗೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಯಾನ್ಥನ್ ಬಸು ಇಂದು ಹೇಳಿದ್ದಾರೆ. 

Last Updated : Jan 1, 2018, 03:40 PM IST
ತ್ರಿವಳಿ ತಲಾಕ್ ಪ್ರಕರಣದ ಇಷ್ರತ್ ಜಹಾನ್ ಬಿಜೆಪಿ ಸೇರ್ಪಡೆ title=

ಕೋಲ್ಕತ್ತಾ : ತ್ರಿವಳಿ ತಲಾಕ್ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಇಷ್ರತ್ ಜಹಾನ್ ಬಿಜೆಪಿ ಗೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಯಾನ್ಥನ್ ಬಸು ಇಂದು ಹೇಳಿದ್ದಾರೆ. 

"ಇಷ್ರತ್ ಜಹಾನ್ ನಮ್ಮ ಹೌರಾ ಕಚೇರಿಯಲ್ಲಿ ನಿನ್ನೆ ಬಿಜೆಪಿಗೆ ಸೇರ್ಪಡೆಯಾದರು'' ಎಂದು ಅವರು ಪಿಟಿಐ ಗೆ ಹೇಳಿದ್ದಾರೆ. 

ಇಷ್ರತ್ ಅವರ ಸನ್ಮಾನ ಸಮರಮಭವನ್ನು ಸದ್ಯದಲ್ಲೇ ಹಮ್ಮಿಕೊಳ್ಳಲಿದ್ದು, ದಿನಾಂಕ ನಿಗದಿಯಾಗಿಲ್ಲ ಎಂದು ಬಸು ತಿಳಿಸಿದ್ದಾರೆ. 

ತ್ರಿವಳಿ ತಲಾಕ್ ಪ್ರಕರಣದ ಐವರು ಅರ್ಜಿದಾರರಲ್ಲಿ ಇಷ್ರತ್ ಕೂಡ ಒಬ್ಬರು. ಆಕೆಯ ಪತಿ 2014 ರಲ್ಲಿ ದುಬೈನಿಂದ ಕರೆ ಮಾಡಿ ಫೋನ್ ಮೂಲಕ ತಲಾಖ್ ಎಂದು ಮುಉರು ಬಾರಿ ಹೇಳುವ ಮೂಲಕ ಆಕೆಗೆ ವಿಚ್ಚೇದನ ನೀಡಿದ್ದ. 

ಈ ರೀತಿ ತ್ರಿವಳಿ ತಲಾಕ್ ನೀಡುವ ಮೂಲಕ ವಿಚ್ಚೆದನ ಪಡೆಯುವ ಮುಸ್ಲಿಂ ಸಂಪ್ರದಾಯವನ್ನು ಪ್ರಶ್ನಿಸಿ ಇವರು ಆಗಸ್ಟ್ 22 ರಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. 

Trending News