ಭಕ್ತಾಧಿಗಳ ಗಮನಕ್ಕೆ : 300 ವಿಶೇಷ ದರ್ಶನ ಟಿಕೆಟ್‌ ಬುಕ್ಕಿಂಗ್‌ ಪ್ರಾರಂಭ

Tirupati online tickets booking : ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಬೇಕೆಂದು ಕಾಯುತ್ತಿದ್ದ ಭಕ್ತಾಧಿಗಳಿಗೆ ಖುಷಿ ಸುದ್ದಿಯೊಂದಿದೆ. ಟಿಟಿಡಿ ಆಡಳಿತ ಮಂಡಳಿ ಏಪ್ರಿಲ್‌ ತಿಂಗಳ 300 ರೂಪಾಯಿಗಳ ವಿಶೇಷ ದರ್ಶನ ಟಿಕೆಟ್‌ ಬಿಡುಗಡೆಗೆ ದಿನಾಂಕವನ್ನು ಪ್ರಕಟಿಸಿದೆ. ಭಕ್ತರು ಮುಂಗಡವಾಗಿ ಈ ಕೆಳಗೆ ನೀಡಿರುವ ದಿನಾಂಕದಂದು ಟಿಕೆಟ್‌ ಬುಕ್‌ ಮಾಡಿ ದರ್ಶನ್‌ ಪಡೆಯಬಹುದಾಗಿದೆ.

Written by - Krishna N K | Last Updated : Mar 25, 2023, 04:14 PM IST
  • ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಬೇಕೆಂದು ಕಾಯುತ್ತಿದ್ದ ಭಕ್ತಾಧಿಗಳಿಗೆ ಖುಷಿ ಸುದ್ದಿ.
  • ಟಿಟಿಡಿ 300 ರೂಪಾಯಿಗಳ ವಿಶೇಷ ದರ್ಶನ ಟಿಕೆಟ್‌ ಬಿಡುಗಡೆಗೆ ದಿನಾಂಕವನ್ನು ಪ್ರಕಟಿಸಿದೆ.
  • ಈ ಕೆಳಗೆ ನೀಡಿರುವ ದಿನಾಂಕದಂದು ಟಿಕೆಟ್‌ ಬುಕ್‌ ಮಾಡಿ ದರ್ಶನ್‌ ಪಡೆಯಬಹುದಾಗಿದೆ.
ಭಕ್ತಾಧಿಗಳ ಗಮನಕ್ಕೆ : 300 ವಿಶೇಷ ದರ್ಶನ ಟಿಕೆಟ್‌ ಬುಕ್ಕಿಂಗ್‌ ಪ್ರಾರಂಭ title=

Tirupati ticket booking online : ತಿರುಪತಿ ಶ್ರೀವೆಂಕಟೇಶ್ವರ ದೇವಾಲಯ ವಿಶ್ವವಿಖ್ಯಾತ ದೇವಾಲಯಗಳಲ್ಲಿ ಒಂದು. ಭಾರತ ಮಾತ್ರವಲ್ಲದೆ ಹೊರ ದೇಶಗಳಿಂದಲೂ ಈ ಪವಿತ್ರ ದೇಗುಲಕ್ಕೆ ಲಕ್ಷಾಂತರ ಭಕ್ತರು ಬಂದು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಅದರಂತೆ ಏಳು ಪರ್ವತದ ಒಡೆಯನ ದರ್ಶನಕ್ಕೆ ಬರುವ ಭಕ್ತರಿಗೆ ಆಗುವ ತೊಂದರೆಗಳನ್ನು ನಿವಾರಿಸಲು ದೇವಸ್ಥಾನವು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅವುಗಳಲ್ಲಿ ಒಂದಾದ ವಿಶೇಷ ದರ್ಶನದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ 300 ರೂ ಶುಲ್ಕದಲ್ಲಿ ಬುಕ್ ಮಾಡಬಹುದು.

ಈ ಹಿನ್ನೆಲೆಯಲ್ಲಿ ತಿರುಪತಿ ದೇಗುಲದಲ್ಲಿ ದರ್ಶನಕ್ಕೆ ಬರುವ ಭಕ್ತರು ಯಾವುದೇ ತೊಂದರೆಯಿಲ್ಲದೆ ನಿಗದಿತ ಸಮಯಕ್ಕೆ ದರ್ಶನ ಪಡೆಯಲು ದೇವಸ್ಥಾನವು ಪ್ರತಿ ತಿಂಗಳು ಆನ್‌ಲೈನ್ ಟಿಕೆಟ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಅದರಂತೆ, ಟಿಟಿಡಿ ಆಡಳಿತ ಮಂಡಳಿ ಏಪ್ರಿಲ್‌ ತಿಂಗಳ 300 ರೂಪಾಯಿಗಳ ದರ್ಶನ ಟಿಕೆಟ್‌ ಬಿಡುಗಡೆಗೆ ದಿನಾಂಕವನ್ನು ಪ್ರಕಟಿಸಿದೆ. ಮಾರ್ಚ್ 27 ರಂದು ಬೆಳಗ್ಗೆ 11 ಗಂಟೆಯಿಂದ 300 ರೂಪಾಯಿಯ ದರ್ಶನ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಪ್ರಕಟನೆ ಮೂಲಕ ತಿಳಿಸಿದೆ.

ಇದನ್ನೂ ಓದಿ: ಎಲ್ಲಿಗೆ ಹೋದ್ರು KGF ಸುಂದರಿ ನಟಿ ಶ್ರೀನಿಧಿ ಶೆಟ್ಟಿ...! ಪ್ಯಾನ್ಸ್‌ ಹುಡುಕಾಟ

ರೂ.300 ದರ್ಶನ ಟಿಕೆಟ್‌ಗಳನ್ನು ಪಡೆಯಬಯಸುವ ಭಕ್ತರು ದೇವಸ್ಥಾನದ ವೆಬ್‌ಸೈಟ್ https://tirupatibalaji.ap.gov.in/#/login ಗೆ ಲಾಗಿನ್ ಆಗಿ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ಟಿಟಿಡಿ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News