ನವದೆಹಲಿ: ಯುವಕರು ಮತ್ತು ಮಕ್ಕಳನ್ನು ಸೆಳೆಯಲು ಭಾರತೀಯ ವಾಯುಪಡೆ ಹೊಸ ಮೊಬೈಲ್ ಗೇಮ್ ಅನ್ನು ಲಾಂಚ್ ಮಾಡಿದೆ. ವಾಯುಪಡೆಯ ಮುಖ್ಯಸ್ಥರಾದ ಬಿರಿಂದರ್ ಸಿಂಗ್ ಧನೋವಾ ಈ ಗೇಮ್ ಅನ್ನು ಲಾಂಚ್ ಮಾಡಿದ್ದು, ಆನ್‌ಲೈನ್‌ನಲ್ಲಿ ಸಿಂಗಲ್ ಪ್ಲೇಯರ್ ಮತ್ತು ಮಲ್ಟಿ ಪ್ಲೇಯರ್ ಆಗಿ ಆಡಬಹುದಾದ 3D ಏರ್ ಕಾಂಬ್ಯಾಟ್ ಗೇಮ್ ಆಗಿದೆ.
ಮೊದಲ ಹಂತದಲ್ಲಿ ಸಿಂಗಲ್ ಪ್ಲೇಯರ್ ಗೇಮ್ ಪರಿಚಯಿಸಿರುವ ವಾಯು ಸೇನೆ, ಎರಡನೇ ಹಂತದಲ್ಲಿ ಮಲ್ಟಿಪ್ಲೇಯರ್ ಗೇಮ್ ಅನ್ನು ವಾಯುಪಡೆ ದಿನಾಚರಣೆಯಂದು ಲಾಂಚ್ ಮಾಡುವುದಾಗಿ ಹೇಳಿದೆ. ಈ ಗೇಮ್ ಆಂಡ್ರಾಯ್ಡ್ ಮತ್ತು ಐಓಎಸ್'ಗಳಲ್ಲಿ ಲಭ್ಯವಿದೆ.
#MobileGame : Chairman Chiefs of Staff Committee & the Chief of the Air Staff Air Chief Marshal BS Dhanoa launched IAF’s latest 3D Mobile gaming application ‘Indian Air Force: A Cut Above’ on Air Combat at National Bal Bhawan, New Delhi, today.@SpokespersonMoD @PIB_India pic.twitter.com/9JlsGFxybv
— Indian Air Force (@IAF_MCC) July 31, 2019
ಈ ಗೇಮ್ ಗೆ 'Indian Air Force: A Cut Above' ಎಂದು ಹೆಸರಿಡಲಾಗಿದ್ದು, ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಪಬ್ ಜಿ ಮತ್ತು ಬ್ಲೂ ವೇಲ್ ನಂತಹ ಆಟಗಳು ಪೋಷಕರನ್ನು ಸಾಕಷ್ಟು ಚಿಂತೆಗೀಡುಮಾಡಿದ್ದವು. ಆದರೆ ಈ ಏರ್ ಫೋರ್ಸ್ ಗೇಮ್ ಆಡುವುದರಿಂದ ಯಾವುದೇ ತೊಂದರೆಯಿಲ್ಲ. ಈ ಆಟದಲ್ಲಿ ಹತ್ತು ಮಿಷನ್(mission) ಗಳಿದ್ದು, ಪ್ರತಿ ಮಿಷನ್ ನಲ್ಲಿ 3 ಮಿಷನ್ ಗಳಿವೆ. ಕಾರ್ಯಾಚರಣೆಯಲ್ಲಿ 3 ಕಾರ್ಯಾಚರಣೆಗಳಿವೆ. ಅಂದರೆ, ಇದರಲ್ಲಿ ಒಟ್ಟು 30 ಮಿಷನ್ ಗೇಮ್ ಗಳಿವೆ.
ಈ ಆಟದಲ್ಲಿ ವಾಯುಪಡೆಯಲ್ಲಿರುವ ಫೈಟರ್, ಹೆಲಿಕಾಪ್ಟರ್, ಏರ್ ಡಿಫೆನ್ಸ್ ಮತ್ತು ಟ್ರಾನ್ಸ್ಪೋರ್ಟ್ ಏರ್ ಕ್ರಾಫ್ಟ್‌ಗಳೊಂದಿಗೆ, ಭವಿಷ್ಯದಲ್ಲಿ ವಾಯುಪಡೆಯನ್ನು ಸೇರಲಿರುವ ಫೈಟ್ ಮತ್ತು ಕಾಂಬಾಟ್ ಏರ್ ಕ್ರಾಫ್ಟ್ ಗಳನ್ನೂ ಸಹ ಕಾಣಬಹುದು. ಅಂದರೆ, ಮಕ್ಕಳು ಆಟದ ಮೂಲಕ ರಾಫಲ್ ಫೈಟರ್ ಜೆಟ್‌ಗಳನ್ನು ಹಾರಿಸಲು ಸಾಧ್ಯವಾಗುತ್ತದೆ. 2014 ರಲ್ಲಿ ಮೊಟ್ಟ ಮೊದಲ ಬಾರಿಗೆ ವಾಯುಪಡೆಯು ಮೊಬೈಲ್ ಗೇಮ್ ಅನ್ನು ಪ್ರಾರಂಭಿಸಿತ್ತು. ಆದರೆ ಈ ಗೇಮ್ ಹಳೆಯದಕ್ಕಿಂತ ವಿಭಿನ್ನ ಹಾಗೂ ವಿಶೇಷವಾಗಿದೆ.