ನವದೆಹಲಿ: ವಿಜಯ್ ಮಲ್ಯನ ಕಿಂಗ್ ಫಿಷರ್ ಕಂಪನಿ ಗಾಂಧಿ ಕುಟುಂಬ ಮಾಲಿಕತ್ವದಲ್ಲಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಪಾತ್ರಾ" ಗಾಂಧಿ ಕುಟುಂಬವು ಕಿಂಗ್ ಫಿಷರ್ ಏರ್ಲೈನ್ಸ್ ಬುಸಿನೆಸ್ ಕ್ಲಾಸ್ ನ್ನು ಮೇಲ್ದರ್ಜೆಗೆರಿಸುವುದು ಮತ್ತು ಫ್ರೀ ಟಿಕೆಟ್ ಗಳ ಮೂಲಕ ಲಾಭವನ್ನು ಪಡೆದಿದೆ. ಕಿಂಗ್ ಫಿಷರ್ ವಾಸ್ತವವಾಗಿ ಮಲ್ಯ ಮಾಲಿಕತ್ವದ ಏರ್ಲೈನ್ಸ್ ಅನಿಸುವುದಿಲ್ಲ, ಬದಲಾಗಿ ಅದು ಗಾಂಧಿ ಕುಟುಂಬದ್ದು ಎಂದರು. ರಾಹುಲ್ ಗಾಂಧಿ ಕೊಲ್ಕತ್ತಾ ಮೂಲದ ಶೆಲ್ ಕಂಪನಿ ಒಂದು ಕೋಟಿ ಸಾಲವನ್ನು ತೆಗೆದುಕೊಂಡಿದೆ ಎಂದು ಸಂಬಿತ್ ಪಾತ್ರಾ ಆರೋಪಿಸಿದರು.
ವಿಜಯ್ ಮಲ್ಯ ಭಾರತ ಬಿಡುವ ಮೊದಲು ಇಲ್ಲಿನ ಕೇಸ್ ಗಳನ್ನು ಮುಚ್ಚುವ ವಿಚಾರವಾಗಿ ಅರುಣ್ ಜೈಟ್ಲಿ ಅವರನ್ನು ಭೇಟಿ ಮಾಡಿ ಆಫರ್ ಕುರಿತಾಗಿ ಮಾತುಕತೆ ನಡೆಸಿರುವ ಬಗ್ಗೆ ಲಂಡನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಈಗ ಸಂಬಿತ್ ಪಾತ್ರಾ ಪತ್ರಿಕಾಗೋಷ್ಠಿ ನಡೆಸಿ ಗಾಂಧಿ ಕುಟುಂಬದ ಮೇಲೆ ಆರೋಪ ಮಾಡಿದರು.