ನವದೆಹಲಿ: ನಿಮಗೆ ನಿಯಮಗಳು ಗೊತ್ತಿಲ್ಲವೆಂದರೆ ಏಕೆ ಆಟವನ್ನು ಆಡುತ್ತೀರಿ ? ಎಂದು ಕಡಕ್ ಆಗಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅತೀಶಿ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಅವರಿಗೆ ಪ್ರಶ್ನಿಸಿದ್ದಾರೆ.
ಚುನಾವಣಾ ಆಯೋಗದ ಅನುಮತಿ ಪಡೆಯದೆ ರ್ಯಾಲಿ ನಡೆಸದಿರುವುದಕ್ಕೆ ಆಯೋಗವು ರಿಟರ್ನಿಂಗ್ ಅಧಿಕಾರಿಗೆ ದೂರು ದಾಖಲಿಸಲು ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಪೂರ್ವ ದೆಹಲಿ ರಿಟರ್ನಿಂಗ್ ಅಧಿಕಾರಿಯಾಗಿರುವ ಕೆ.ಅಶೋಕ್ ಅವರು ದೆಹಲಿ ಪೊಲೀಸರಿಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ.
First, Discrepancies in nomination papers.
Then, Criminal offence of having 2 voter IDs.
Now, FIR for illegal rally.
My question to @GautamGambhir: When you don't know the rules, why play the game? https://t.co/gv303X4nyQ
— Atishi (@AtishiAAP) April 27, 2019
ಇತ್ತೀಚಿಗೆ ಬಿಜೆಪಿ ಸೇರಿದ್ದ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅವರಿಗೆ ಬಿಜೆಪಿ ಪೂರ್ವ ದೆಹಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತ್ತು. ಚುನಾವಣಾ ಪ್ರಚಾರದ ನಿಮಿತ್ತ ಚುನಾವಣಾ ಆಯೋಗದ ಅನುಮತಿ ಪಡೆಯದೆ ದೆಹಲಿಯ ಜಾಂಗಪುರ್ದಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಂಡಿದ್ದರು.
Two voter lists.
Two Assembly Constituencies.
One common name: Gautam Gambhir
One conclusion: @GautamGambhir’s imminent disqualification from the Lok Sabha election pic.twitter.com/GUYuYbJU7r— Atishi (@AtishiAAP) April 27, 2019
ಈಗ ಗಂಭೀರ್ ಅವರಿಗೆ ಪ್ರಶ್ನಿಸಿ ಟ್ವೀಟ್ ಮಾಡಿರುವ ದೆಹಲಿ ಪೂರ್ವ ಕ್ಷೇತ್ರ ಆಮ್ ಆದ್ಮಿ ಅಭ್ಯರ್ಥಿ ಅತೀಶಿ "ಇದಕ್ಕೂ ಮೊದಲು ನಾಮಪತ್ರದಲ್ಲಿ ವ್ಯತ್ಯಾಸವನ್ನು ಹೊಂದಿರುವುದು ಅನಂತರ ಎರಡು ಗುರುತಿನ ಮತ ಚೀಟಿಯನ್ನು ಹೊಂದಿರುವುದು, ಈಗ ಅಕ್ರಮವಾಗಿ ರ್ಯಾಲಿಯನ್ನು ಹಮ್ಮಿಕೊಂಡಿರುವುದು, ಗೌತಮ್ ಗಂಭೀರ್ ಗೆ ನನ್ನ ಪ್ರಶ್ನೆ ಇಷ್ಟೇ :ನಿಮಗೆ ನಿಯಮ ಗೊತ್ತಿಲ್ಲವೆಂದರೆ ಏಕೆ ಆಟವನ್ನು ಆಡುತ್ತೀರಿ?" ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ದೆಹಲಿ ಪೂರ್ವ ಕ್ಷೇತ್ರ ಆಮ್ ಆದ್ಮಿ ಅಭ್ಯರ್ಥಿ ಅತೀಶಿ ಈ ಮೊದಲು ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಅವರು ಎರಡು ಮತದಾರದ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದಾರೆ ಎಂದು ದೂರು ನೀಡಿದ್ದರು.