Work From Home Culture : ಐಟಿ ಕಂಪನಿಗಳಲ್ಲಿ ಭರ್ಜರಿ ಅವಕಾಶ; ಯಾವ ಕಂಪನಿಗಳಲ್ಲಿದೆ ಉದ್ಯೋಗಾವಕಾಶ ತಿಳಿಯಿರಿ

ಐಟಿ ಕ್ಷೇತ್ರದಲ್ಲಿ ಉತ್ತಮ ಪ್ರತಿಭೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸುಮಾರು 40, 000 ಯುವಕರನ್ನು ಕ್ಯಾಂಪಸ್ ರಿಕ್ರೂಟ್ ಮಾಡಿಕೊಳ್ಳಲಿದೆ.   ಇನ್ಫೋಸಿಸ್ 25, 000 ಯುವಕರ ಕ್ಯಾಂಪಸ್ ರಿಕ್ರೂಟ್ ಮೆಂಟಿಗೆ ತಯಾರಿ ನಡೆಸುತ್ತಿದೆ.

Written by - Ranjitha R K | Last Updated : Apr 20, 2021, 01:27 PM IST
  • ಐಟಿ ಕ್ಷೇತ್ರದಲ್ಲಿ ಒಂದು ಖುಷಿಯ ಸುದ್ದಿ ಬಂದಿದೆ
  • ಲಾಕ್ ಡೌನ್ ನಡುವೆಯೂ ಐಟಿ ಕಂಪನಿಗಳಲ್ಲಿ ಭರ್ಜರಿ ಉದ್ಯೋಗವಕಾಶ
  • ಅತಿರಥ ಐಟಿ ಕಂಪನಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಯುವಕರನ್ನು ರಿಕ್ರೂಟ್ ಮಾಡಲಿವೆ
Work From Home Culture : ಐಟಿ ಕಂಪನಿಗಳಲ್ಲಿ ಭರ್ಜರಿ ಅವಕಾಶ; ಯಾವ ಕಂಪನಿಗಳಲ್ಲಿದೆ ಉದ್ಯೋಗಾವಕಾಶ ತಿಳಿಯಿರಿ title=
ಐಟಿ ಕ್ಷೇತ್ರದಲ್ಲಿ ಒಂದು ಖುಷಿಯ ಸುದ್ದಿ ಬಂದಿದೆ (photo india.com)

ನವದೆಹಲಿ : ಕರೋನಾ (Coronavirus) ಅರ್ಥ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದ್ದರೂ,  ಐಟಿ ಕ್ಷೇತ್ರದಲ್ಲಿ ಒಂದು ಖುಷಿಯ ಸುದ್ದಿ ಬಂದಿದೆ. ಈ ಸಲ ಐಟಿ ಕಂಪನಿಗಳಲ್ಲಿ (IT Company) ಬಂಪರ್ ವೇಕೆನ್ಸಿ ಸೃಷ್ಟಿಯಾಗಿದ್ದು, ಅತಿರಥ  ಐಟಿ ಕಂಪನಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಯುವಕರನ್ನು ರಿಕ್ರೂಟ್ ಮಾಡಲಿವೆ.. ಹೆಚ್ಚಿನ ಕಂಪನಿಗಳು ತಮ್ಮ ಕೆಲಸವನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ (Digital Platform) ತರಲು ಬಯಸುತ್ತವೆ, ಇದರಿಂದಾಗಿ ಐಟಿ ಕ್ಷೇತ್ರದಲ್ಲಿ ಉತ್ತಮ ಪ್ರತಿಭೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸುಮಾರು 40, 000 ಯುವಕರನ್ನು ಕ್ಯಾಂಪಸ್ ರಿಕ್ರೂಟ್ ಮಾಡಿಕೊಳ್ಳಲಿದೆ.   ಇನ್ಫೋಸಿಸ್ 25, 000 ಯುವಕರ ಕ್ಯಾಂಪಸ್ ರಿಕ್ರೂಟ್ ಮೆಂಟಿಗೆ ತಯಾರಿ ನಡೆಸುತ್ತಿದೆ.

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ವಿಪ್ರೊ ಎಷ್ಟು ಸಂಖ್ಯೆಯಲ್ಲಿ ನೇಮಕಾತಿ ಮಾಡಲಿದೆ ಎಂಬುದನ್ನು ಬಹಿರಂಗ ಪಡಿಸಿಲ್ಲ. ಆದರೆ ವಿಪ್ರೊ (Wipro) ಕಳೆದ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ  ನೇಮಕಾತಿಗಳನ್ನು ಮಾಡಲಿದೆ ಎಂದು ವರದಿ ಮಾಡಿದೆ. 

ಇದನ್ನೂ ಓದಿ : EPFO ಖಾತೆದಾರರು UAN ನಂಬರ್ ಇಲ್ಲದೆಯೇ ನಿಮ್ಮ PF/EPF ಬ್ಯಾಲೆನ್ಸ್ ತಿಳಿಯಬಹುದು

ದೇಶದಲ್ಲಿ ಕರೋನಾ (Coronavirus) ಪ್ರಕರಣ ಹೆಚ್ಚುತ್ತಿದೆ. ಲಾಕ್ ಡೌನ್ ಗಳು ನಿತ್ಯದ ಸುದ್ದಿಗಳಾಗಿವೆ. ಈ ನಡುವೆ ಕಂಪನಿಗಳು ವರ್ಕ್ ಕಲ್ಚರ್ ಬದಲಾಯಿಸಲು ಗಮನ ಹರಿಸುತ್ತಿವೆ. ಕಂಪನಿಗಳು ಮತ್ತು ಗ್ರಾಹಕರು ತಮ್ಮ ವ್ಯವಹಾರಗಳನ್ನು ಆನ್ ಲೈನ್ ಮತ್ತು ಡಿಜಿಟಲ್ ಪ್ಲಾಟ್ ಫಾರ್ಮಿಗೆ ವರ್ಗಾಯಿಸುತ್ತಿದ್ದಾರೆ. ಹಾಗಾಗಿ ಐಟಿ ಕ್ಷೇತ್ರದಲ್ಲಿ ಕೆಲಸದ ಬೇಡಿಕೆ ಹೆಚ್ಚಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. 

ಭಾರತದ ಉನ್ನತ ಐಟಿ ಕಂಪನಿಗಳಾದ ಟಿಸಿಎಸ್, ವಿಪ್ರೋ, ಇನ್ಫೋಸಿಸ್ (Infosys), ಎಚ್‌ಸಿಎಲ್ ಮತ್ತು ಟೆಕ್ ಮಹೀಂದ್ರಾ ಈ ವರ್ಷ 1,10,000 ಕ್ಕೂ ಹೆಚ್ಚು ನೇಮಕಾತಿಗಳನ್ನು ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ಇದು ಕಳೆದ ವರ್ಷ ಈ ಕಂಪನಿಗಳು ಸುಮಾರು 90,000 ಕ್ಕೂ ಹೆಚ್ಚು ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದವು. 

ಇದನ್ನೂ ಓದಿ : PM Kisan- ಯಾವಾಗ ಖಾತೆ ಸೇರಲಿದೆ 2000 ರೂ., ನಿಮ್ಮ ಹಣ ಎಲ್ಲಿ ಸಿಲುಕಿಕೊಂಡಿದೆ ಎಂದು ತಿಳಿಯಿರಿ

ಈ ವರ್ಷ ನೇಮಕಾತಿಯಲ್ಲಿ ಶೇ 20 ರಷ್ಟು ಏರಿಕೆಯಾಗಿದೆ. ಔಟ್ ಸೋರ್ಸಿಂಗ್ ವ್ಯವಹಾರದಲ್ಲಿ 2.10 ಲಕ್ಷ ನೇಮಕಾತಿ ನಡೆದಿದೆ. ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಟಿಸಿಎಸ್ (TCS) ದಾಖಲೆಯ  ಪ್ರಮಾಣದ ಅಂದರೆ, ಶೇಕಡಾ 7.2 ರಷ್ಟನ್ನು ಕೆಲಸದ ಆಕರ್ಷಣೆಯ ದರ ದಾಖಲಿಸಿದೆ.  ಇನ್ಫೋಸಿಸ್ ಮತ್ತು ವಿಪ್ರೊ ಕಂಪನಿಯ ಕೆಲಸದ ಆಕರ್ಷಣೆಯ ದರಗಳು ಕೂಡಾ ಏರಿಕೆಯಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News