ನವದೆಹಲಿ: ಪಶ್ಚಿಮ ಬಂಗಾಳದ ಮಮತಾ ನೇತೃತ್ವದ ಸರ್ಕಾರ ಭಾನುವಾರದಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲು ನಿರಾಕರಿಸಿದೆ.
ಸಿಎಂ ಯೋಗಿ ಇಂದು ಉತ್ತರ ಬಂಗಾಳದ ರಾಯಗಂಜ್ ಮತ್ತು ಬಾಳುರ್ ಘಾಟ್ ನಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಭಾಗವಹಿಸಬೇಕಾಗಿತ್ತು ,ಆದರೆ ಸಿಎಂ ಯೋಗಿ ರ್ಯಾಲಿಗೆ ಯಾವುದೇ ಮುನ್ಸೂಚನೆ ಕೊಡದೆ ಮಮತಾ ಬ್ಯಾನರ್ಜೀ ಸರ್ಕಾರ ರ್ಯಾಲಿಗೆ ಅವಕಾಶವನ್ನು ನಿರಾಕರಿಸಿದೆ.
Uttar Pradesh Chief Minister Office: The permission for the CM Yogi Adityanath's rally in West Bengal today has been declined by the West Bengal government without any prior notice. (File pic) pic.twitter.com/FQmTbsG1fV
— ANI UP (@ANINewsUP) February 3, 2019
ಸಿಎಂ ಯೋಗಿ ಮಾಹಿತಿ ಸಲಹೆಗಾರ ಮೃತ್ಯುಂಜಯ ಕುಮಾರ್ ಈಗ ಪ.ಬಂಗಾಳದ ಮುಖ್ಯಮಂತ್ರಿ ಇದಕ್ಕೆ ಕಾರಣ ಎಂದು ಆರೋಪ ಮಾಡಿದ್ದಾರೆ. "ಉತ್ತರ ಪ್ರದೇಶದ ಮುಖ್ಯಮಂತ್ರಿ ಜನಪ್ರಿಯತೆ ಕಾರಣದಿಂದಾಗಿ ಮಮತಾ ಬ್ಯಾನರ್ಜೀಯವರು ಸಿಎಂ ಯೋಗಿ ಹೆಲಿಕ್ಯಾಪ್ಟರ್ ಇಳಿಯಲಿಕ್ಕೆ ಅವಕಾಶ ನೀಡಿಲ್ಲ" ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಅಮಿತ್ ಷಾ ಅವರ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಗೆ ಅವಕಾಶವನ್ನು ನಿರಾಕರಿಸಲಾಗಿದ್ದನ್ನು ನಾವು ಕಾಣಬಹುದು.