ನವದೆಹಲಿ: ಒಂದೆಡೆ ಕರೋನಾ ವೈರಸ್ ಪ್ರಕೋಪ ತಡೆಗಟ್ಟಲು ಎಲ್ಲರೂ ವಿಧಾನಗಳನ್ನು ಅನುಸರಿಸುತ್ತಿರುವ ಇಂತಹ ಕತಿನ ಪರಿಸ್ಥಿತಿಯಲ್ಲಿ . ನಿಮಗಾಗಿ ಒಂದು ಅನನ್ಯ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ. ಇದರ ಅಡಿಯಲ್ಲಿ, ಯಾರೊಬ್ಬರು ಕರೋನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದರೆ, ವಿಮಾ ಕಂಪನಿಯು ನಿಮಗೆ ಹಣವನ್ನು ನೀಡಲಿದೆ. ಶೀಘ್ರದಲ್ಲೇ ಹೊಸ ವಿಮಾ ಯೋಜನೆ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.
ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಕೊವಿಡ್ ಇನ್ಸೂರೆನ್ಸ್
ವಿಮಾ ನಿಯಂತ್ರಣ ಪ್ರಾಧಿಕಾರ IRDAI ಎಲ್ಲ ವಿಮಾ ಕಂಪನಿಗಳಿಗೆ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಫಿಕ್ಸಡ್ ಬೆನಿಫಿಟ್ ಕೊವಿಡ್ ಇನ್ಶುರೆನ್ಸ್ ಸ್ಕೀಮ್ ಅನ್ನು ಬಿಡುಗಡೆ ಮಾಡಲು ಸೂಚಿಸಿದೆ. ಜೂನ್ 30ರವರೆಗೆ ಈ ವಿಮಾ ಯೋಜನೆಯನ್ನು ಆರಂಭಿಸಲು ನಿರ್ದೇಶನಗಳನ್ನೂ ನೀಡಲಾಗಿದೆ. ಈ ನೂತನ ಸ್ಕೀಮ್ ಅಡಿ ಯಾವುದೇ ಓರ್ವ ವ್ಯಕ್ತಿ ಕೊವಿಡ್ ಪಾಸಿಟಿವ್ ಕಂಡು ಬಂದರೆ ಅವರಿಗೆ ಒಂದು ನಿಶ್ಚಿತ ಧನರಾಶಿಯನ್ನು ವಿಮಾ ಕಂಪನಿಗಳ ವತಿಯಿಂದ ನೀಡಲಾಗುವುದು ಎನ್ನಲಾಗಿದೆ.
ವಿಮಾ ಕಂಪನಿಗಳ ಪ್ರಿಮಿಯಂ ಧನರಾಶಿ ಎಷ್ಟು ಇರಲಿದೆ
ಈ ಕುರಿತು ಹೇಳಿಕೆ ನೀಡಿರುವ ಮಾರುಕಟ್ಟೆಯ ತಜ್ಞರು, IRDAI ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಈ ಯೋಜನೆಯನ್ನು ಜಾರಿಗೆ ತರಲು ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಿದ್ದರೂ ಕೂಡ, ಈ ಯೋಜನೆಯ ಪ್ರಿಮಿಯಂ ಅನ್ನು ನಿಗದಿಪಡಿಸುವ ನಿರ್ಣಯವನ್ನು ವಿಮಾ ಕಂಪನಿಗಳಿಗೆ ಬಿಟ್ಟುಕೊಟ್ಟಿದೆ. ತಜ್ಞರು ಹೇಳುವ ಪ್ರಕಾರ ಗ್ರಾಹಕರಿಗೆ 50 ಸಾವಿರದಿಂದ ಹಿಡಿದು 5 ಲಕ್ಷ ರೂ.ವರೆಗೆ ಸಮ್ ಅಷ್ಯೋರ್ಡ್ ಸಿಗುವ ನಿರೀಕ್ಷೆ ಇದೆ. ಕೊರೊನಾ ಸೋಂಕಿನ ಹಿನ್ನೆಲೆ ಈ ಸ್ಕೀಮ್ ಗೆ 15 ದಿನಗಳ ವೇಟಿಂಗ್ ಪಿರಿಯಡ್ ನಿಯಮ ಕೂಡ ಅನ್ವಯಿಸುವ ಸಾಧ್ಯತೆ ಇದೆ.
ಕರೋನಾ ವೈರಸ್ ಪ್ರಕೋಪದ ನಡುವೆ, ವಿಮಾ ಕಂಪನಿಗಳು ಈಗಾಗಲೇ ಅಸ್ತಿತ್ವದಲ್ಲಿರುವ ಆರೋಗ್ಯ ವಿಮೆಯ ಮೇಲೆ ಪ್ರೀಮಿಯಂ ಮೊತ್ತವನ್ನು ಶೇಕಡಾ 20 ರಷ್ಟು ಹೆಚ್ಚಿಸಿರುವುದು ಇಲ್ಲಿ ಉಲ್ಲೇಖನೀಯ. ಟರ್ಮ್ ಇನ್ಶೂರೆನ್ಸ್ನಲ್ಲಿಯೂ ಕೂಡ ಕಂಪನಿಗಳು ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಿವೆ. ವಾರ್ಷಿಕವಾಗಿ 10, 000 ಜನರು ವಿಮಾ ಪಡೆದರೆ ಅದರಲ್ಲಿ ಕೇವಲ 3000 ಜನರು ಮಾತ್ರ ವಿವಿಧ ಕಾರಣಗಳಿಂದ ಮರಣ ಹೊಂದುತ್ತಾರೆ ಎಂಬ ಲೆಕ್ಕಾಚಾರದಲ್ಲಿ ವಿಮಾ ಕಂಪನಿಗಳು ಕಾರ್ಯನಿರ್ವಹಿಸುತ್ತವೆ. ಆದರೆ, ಕಳೆದ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ಈ ಸರಾಸರಿ ಲೆಕ್ಕಾಚಾರದಲ್ಲಿ ಏರುಪೇರಾಗಿದೆ. ಅಷ್ಟೇ ಅಲ್ಲ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾದ ಕಾರಣ ವಿಮಾ ಕಂಪನಿಗಳು ಸಾಕಷ್ಟು ಒತ್ತಡ ಎದುರಿಸುತ್ತಿವೆ.