Karnataka Assembly Election Resulta 2023: ಮುಳುಗಡೆ ಜಿಲ್ಲೆ ಎಂದೇ ಖ್ಯಾತವಾಗಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿವೆ. ಬಾಗಲಕೋಟೆ, ಹುಣಗುಂದ, ಜಮಖಂಡಿ, ಮುಧೋಳ, ತೆರದಾಳ, ಬಾದಾಮಿ ಹಾಗೂ ಬೀಳಗಿ ವಿಧಾನಸಭೆ ಕ್ಷೇತ್ರಗಳು ಈ ಜಿಲ್ಲೆಯಲ್ಲಿ ಬರುತ್ತವೆ. ಒಟ್ಟು 15, 60,828 ಪುರುಷ, ಮಹಿಳಾ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಮತದಾರರನ್ನು ಹೊಂದಿರುವ ಈ ಈ ಜಿಲ್ಲೆಯಲ್ಲಿ ಕಳೆದ ಬಾರಿ ಅಂದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 7 ಸ್ಥಾನಗಳ ಪೈಕಿ ಬಿಜೆಪಿ 5 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದರೆ, ಕಾಂಗ್ರೆಸ್ 2 ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಂಡಿತ್ತು. ಕಳೆದ ಚುನಾವಣೆಯಲ್ಲಿ ಬಾಗಲಕೋಟೆ, ಹುನಗುಂದ, ಮುಧೋಳ, ತೆರದಾಳ ಹಾಗೂ ಬೀಳಗಿ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿಗೆ ಈ ಬಾರಿ ಸ್ವಪಕ್ಷೀಯರ ಒಳ ಏಟು ಮುಳುವಾಗಿದ್ದು ರಿಸಲ್ಟ್ ರಿವರ್ ಆಗಿದೆ. ಅಂದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 5 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ 2 ಸ್ಥಾನಗಳಿಗೆ ತೃಪ್ತಿಪಡಬೇಕಾದ ಸ್ಥಿತಿ ಎದುರಾಗಿದೆ. ಬನ್ನಿ ಈ ಬಾರಿ ಬಾಗಲಕೋಟೆ ಜಿಲ್ಲೆಯ ಎಲ್ಲಾ 7 ವಿಧಾನಸಭೆ ಕ್ಷೇತ್ರಗಳಲ್ಲಿ ಯಾರು ತೇಲಿದರು ಮತ್ತು ಯಾರು ಮುಳುಗಿದರು ಎಂಬುದನ್ನೂ ತಿಳಿದುಕೊಳ್ಳೋಣ,
ಬಾಗಲಕೋಟೆ ಜಿಲ್ಲೆ
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳ ಸಂಖ್ಯೆ-70
ಒಟ್ಟು ಮತದಾರರ ಸಂಖ್ಯೆ- 15,10,828
ಪುರುಷ ಮತದಾರರ ಸಂಖ್ಯೆ- 7,78,376
ಮಹಿಳಾ ಮತದಾರರ ಸಂಖ್ಯೆ- 7,82,368
ಲೈಂಗಿಕ ಅಲ್ಪಸಂಖ್ಯಾತರು - 84
1. ಮುಧೋಳ್
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,91,946
ಪುರುಷ ಮತದಾರರ ಸಂಖ್ಯೆ-95,216
ಮಹಿಳಾ ಮತದಾರರ ಸಂಖ್ಯೆ-96,727
ಮುಧೋಳ್ ವಿಧಾನಸಭೆ ಕ್ಷೇತ್ರದ ಕುರಿತು ಹೇಳುವುದಾದರೆ, ಈ ಬಾರಿ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ರಾಮಪ್ಪ ಬಾಳಪ್ಪಾ ತಿಮ್ಮಾಪುರ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಭಾರತೀಯ ಜನತಾಪಕ್ಷದ ಗೋವಿಂದ್ ಮಕ್ತಪ್ಪಾ ಕಾರಜೋಳ ಅವರನ್ನು 17335 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ 77298 (48.69%) ಮತಗಳು ಬಂದರೆ ಗೋವಿಂದ ಕಾರಜೋಳ ಅವರಿಗೆ 59963 (37.77%) ಮತಗಳು ದೊರೆತಿವೆ.
2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಗೋವಿಂದ ಮಕ್ತಪ್ಪ ಕಾರಜೋಳ್- 76,431 ಅಂತರ: 15482 (51.63%)
INC- ಬಂಡಿವಡ್ಡರ್ ಸತೀಶ್ ಚಿನ್ನಪ್ಪ- 60,949 (41.17%)
JDS- ಶಂಕರ್ ಎನ್ ನಾಯಕ್- 4,431 (2.99%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಗೋವಿಂಡ್ ಮುಕ್ತಪ್ಪ ಕಾರಜೋಳ
ಕಾಂಗ್ರೆಸ್-ತಿಮ್ಮಾಪುರ್ ರಾಮಪ್ಪ ಬಾಳಪ್ಪಾ
ಜೆಡಿಎಸ್-ಧರ್ಮರಾಜ್ ವಿದ್ಧಲ್ ದೊಡಮನಿ
ತೆರದಾಳ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,16,384
ಪುರುಷ ಮತದಾರರ ಸಂಖ್ಯೆ-1,08,618
ಮಹಿಳಾ ಮತದಾರರ ಸಂಖ್ಯೆ-1,07,757
ತೆರದಾಳ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷದ ಅಭ್ಯರ್ಥಿಯಾಗಿರುವ ಸಿದ್ದು ಸವದಿ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ರಾಮಪ್ಪ ಕೊಣ್ಣೂರ್ ಅವರನ್ನು 10745 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಅವರಿಗೆ 77265 (43.01%) ಮತಗಳು ಬಂದರೆ, ಸಿದ್ದು ಕೊಣ್ಣೂರ್ ಅವರಿಗೆ 66520 (37.03%) ಮತಗಳು ಬಂದಿವೆ.
2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ಸಿದ್ದು ಸವದಿ - 87,583 ಅಂತರ: 21113(50.45%)
INC- ಉಮಾಶ್ರೀ -66,470 (38.29%)
JDS- ಬಸಪ್ಪ ಕೆ ಕೊಣ್ಣೂರ- 12,462(7.18%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ಸಿದ್ದು ಸವದಿ
ಕಾಂಗ್ರೆಸ್- ಸಿದ್ದು ರಾಮಪ್ಪ ಕೊಣ್ಣೂರ್
ಜೆಡಿಎಸ್- ಸುರೇಶ್ ಅರ್ಜುನ್ ಮಡಿವಾಳರ್
3 ಜಮಖಂಡಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-1,98,957
ಪುರುಷ ಮತದಾರರ ಸಂಖ್ಯೆ-1,00,023
ಮಹಿಳಾ ಮತದಾರರ ಸಂಖ್ಯೆ-98,929
ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಜಗದೀಶ್ ಶಿವಯ್ಯ ಗುರಗುಂಟಿ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಆನಂದ್ ಸಿದ್ದು ನ್ಯಾಮಗೌಡ ಅವರನ್ನು 4716 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿ ಬಿಜೆಪಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಒಟ್ಟು 81937(48.86%) ದೊರೆತರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ 77221(46.05%) ಮತಗಳು ಬಂದಿವೆ.
2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಸಿದ್ದು ಭೀಮಪ್ಪ ನ್ಯಾಮಗೌಡ 49,245-ಅಂತರ: 2795(32.06%)
BJP- ಕುಲಕರ್ಣಿ ಶ್ರೀಕಾಂತ್ ಸುಬ್ರಾವ್-46,450 (30.24%)
IND- ನಿರಾಣಿ ಸಂಗ್ಮೇಶ್ ರುದ್ರಪ್ಪ- 24,461(15.92%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಜಗದೀಶ್ ಶಿವಯ್ಯ ಗುಡಗುಂಟಿ
ಕಾಂಗ್ರೆಸ್ - ಆನಂದ್ ಸಿದ್ದು ನ್ಯಾಮಗೌಡ
ಜೆಡಿಎಸ್-ಯಾಕೂಬ್ ಕಪಡೆವಾಲೆ
4. ಬೀಳಗಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,14,327
ಪುರುಷ ಮತದಾರರ ಸಂಖ್ಯೆ-1,06,581
ಮಹಿಳಾ ಮತದಾರರ ಸಂಖ್ಯೆ-1,07,719
ಬೀಳಗಿ ವಿಧಾನಸಭೆ ಕ್ಷೇತ್ರದ ಕುರಿತು ಹೇಳುವುದಾದರೆ, ಇಲ್ಲಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಜೆ. ಟಿ ಪಾಟೀಲ್ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮುರುಗೇಶ್ ರುದ್ರಪ್ಪಾ ನಿರಾಣಿ ಅವರನ್ನು 11129 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮುರುಗೇಶ್ ನಿರಾಣಿ ಅವರಿಗೆ 84523 (45.73%) ಮತಗಳು ಬಂದಿದ್ದರೆ, 95652 (51.75%) ಮತಗಳನ್ನು ತನ್ನದಾಗಿಸುವ ಮೂಲಕ ಜೆ.ಟಿ ಪಾಟೀಲ್ ಜಯಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡಿದ್ದಾರೆ.
2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP-ಮುರುಗೇಶ್ ರುದ್ರಪ್ಪ ನಿರಾಣಿ- 85,135-ಅಂತರ: 4811 (49.12)%
INC- ಜಗದೀಶ ತಿಮ್ಮನಗೌಡ ಪಾಟೀಲ- 80,324 (46.34%)
JDS- ಸಂಗಪ್ಪ ತಿಪ್ಪಣ್ಣ ಕಂದಗಲ್- 1,773 (1.02%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ-ನಿರಾಣಿ ಮುರುಗೇಶ್ ರುದ್ರಪ್ಪ
ಕಾಂಗ್ರೆಸ್ -ಜೆಟಿ ಪಾಟೀಲ್
ಜೆಡಿಎಸ್-ರುಕಮುದ್ದೀನ್ ಸೌದಾಗರ್
5. ಬಾದಾಮಿ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,14,834
ಪುರುಷ ಮತದಾರರ ಸಂಖ್ಯೆ-1,08,524
ಮಹಿಳಾ ಮತದಾರರ ಸಂಖ್ಯೆ-1,06,294
ಬಾದಾಮಿ ವಿಧಾನ ಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಿ ಬಿ ಚಿಮ್ಮನಕಟ್ಟಿ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಭಾರತೀಯ ಜನತಾಪಕ್ಷದ ಅಭ್ಯರ್ಥಿಯಾಗಿದ್ದ ಶಾಂತಗೌಡ ತೀರ್ಥಗೌಡಾ ಪಾಟೀಲ್ ಅವರನ್ನು 9725 ಮತಗಳ ಅಂತರದಿಂದ ಸೋಲಿಸಿ ಜಯಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಚಿಮ್ಮನಕಟ್ಟಿ ಅವರಿಗೆ ಒಟ್ಟು 65845 (38.95%) ಮತಗಳು ದೊರೆತರೆ, ಶಾಂತಗೌಡಾ ಪಾಟೀಲ್ ಅವರಿಗೆ 56120 (33.2%) ಮತಗಳು ದೊರೆತಿವೆ.
2018ರ ವಿಧಾನಸಭೆ ಚುನಾವಣಾ ಫಲಿತಾಂಶ
INC- ಸಿದ್ದರಾಮಯ್ಯ- 67,599-ಅಂತರ: 1696(41.24%)
BJP- ಬಿ. ಶ್ರೀರಾಮುಲು -65,903 (40.20%)
JDS- ಹನಮಂತ ಮಾವಿನಮರದ- 24,484 (14.94%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ಶಾಂತನಗೌಡಾ ತೀರ್ಥಗೌಡಾ ಪಾಟೀಲ್
ಕಾಂಗ್ರೆಸ್- ಬಿ ಬಿ ಚಿಮ್ಮನಕಟ್ಟಿ
ಜೆಡಿಎಸ್-ಹಣಮಂತ್ ಬಿ ಮಾವಿನಮರದ
6. ಬಾಗಲಕೋಟೆ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ- 2,26,012
ಪುರುಷ ಮತದಾರರ ಸಂಖ್ಯೆ-1,13,131
ಮಹಿಳಾ ಮತದಾರರ ಸಂಖ್ಯೆ-1,12,866
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕುರಿತು ಹೇಳುವುದಾದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಯಲಕ್ಷ್ಮಿ ಒಳಿದಿದ್ದಾಳೆ. ಹೌದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೆಟ್ಟಿ ಹುಲ್ಲಪ್ಪ ಯಮನಪ್ಪ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ವೀರಣ್ಣ ಚರಂತಿಮಠ ಅವರನ್ನು ಒಟ್ಟು 5878 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವೀರಣ್ಣ ಚರಂತಿಮಠ ಅವರಿಗೆ 73458 (43.12) ಮತಗಳು ಬಂದಿದ್ದರೆ, ಅವರ ಎದುರಾಳಿ ಬಿಜೆಪಿಯ ಮೆಟ್ಟಿ ಹುಲ್ಲಪ್ಪ ಯಮನಪ್ಪ ಅವರಿಗೆ 79336 (46.57%) ಮತಗಳು ದೊರೆತಿವೆ.
2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ವೀರಭದ್ರಯ್ಯ (ವೀರಣ್ಣ) ಚರಂತಿಮಠ - 85,653 - ಅಂತರ: 15934(53.03%)
INC- ಮೇಟಿ ಹುಲ್ಲಪ್ಪ ಯಮನಪ್ಪ - 69,719 (43.17%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ವೀರಣ್ಣ ಚರಂತಿಮಠ
ಕಾಂಗ್ರೆಸ್- ಮೇಟಿ ಹುಲ್ಲಪ್ಪ ಯಮನಪ್ಪ
ಜೆಡಿಎಸ್-ದೇವರಾಜ್ ಪಾಟೀಲ್
7. ಹುನಗುಂದ
ಕ್ಷೇತ್ರದ ಮಾಹಿತಿ
ಮತದಾರರ ಸಂಖ್ಯೆ-2,11,724
ಪುರುಷ ಮತದಾರರ ಸಂಖ್ಯೆ- 1,06,186
ಮಹಿಳಾ ಮತದಾರರ ಸಂಖ್ಯೆ- 1,05,526
ಬಾಗಲಕೋಟೆ ಜಿಲ್ಲೆಯ ಹುನಗುಂದ ವಿಧಾನ ಸಭೆ ಕ್ಷೇತ್ರದ ಕುರಿತು ಹೇಳುವುದಾದರೆ, ಈ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜನರು ವಿಜಯಾನಂದ್ ಶಿವಶಂಕ್ರಪ್ಪ ಕಾಶಪ್ಪನವರ ಅವರಿಗೆ ಮಣೆಹಾಕಿದ್ದಾರೆ. ಕಾಶಪ್ಪನವರ್ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ದೊಡ್ಡಣಗೌಡಾ ಪಾಟೀಲ್ ಅವರನ್ನು 30007 ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವಿಜಯಾನಂದ್ ಕಾಶಪ್ಪನವರ್ ಅವರಿಗೆ. 78434 (47.43%) ಮತಗಳು ಬಂದರೆ, ಬಿಜೆಪಿ ಅಭ್ಯರ್ಥಿಗೆ 48427 (29.29%) ಮತಗಳು ಬಂದಿವೆ.
ಇದನ್ನೂ ಓದಿ-Koppal Assembly Election Result 2023: ಕೊಪ್ಪಳದಲ್ಲಿ 3 ‘ಕೈ’ವಶ, 1 ‘ಕಮಲ’ ತೆಕ್ಕೆಗೆ!
2018ರ ವಿಧಾನಸಭೆ ಚುನಾವಣಾ ಫಲಿತಾಂಶ
BJP- ದೊಡ್ಡನಗೌಡ ಜಿ ಪಾಟೀಲ್- 65,012 - ಅಂತರ: 5227(41.53)%
INC- ಕಾಶಪ್ಪನವರ್ ವಿಜಯಾನಂದ್ ಶಿವಶಂಕ್ರಪ್ಪ- 59,785 (38.19%)
IND- ಎಸ್.ಆರ್.ನವಲಿಹಿರೇಮಠ- 25,850 (16.51%)
2023ರ ವಿಧಾನಸಭೆ ಚುನಾವಣೆಯ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ- ದೊಡ್ಡಣಗೌಡ ಜಿ ಪಾಟೀಲ್
ಕಾಂಗ್ರೆಸ್-ವಿಜಯಾನಂದ್ ಕಾಶಪ್ಪನವರ್
ಜೆಡಿಎಸ್-ಬೊಲಿ ಶಿವಪ್ಪಾ ಮಹಾದೇವಪ್ಪ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ