ಬೆಂಗಳೂರು : ಭ್ರಷ್ಟರ ವಿರುದ್ಧ ಸಮರ ಸಾರುವ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ACB) ಸಿಬ್ಬಂದಿ ಕೊರತೆ ಎದುರಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಕೋರಿ ಪ್ರಸ್ತಾವನೆ ಸಲ್ಲಿಸಿ 9 ತಿಂಗಳಾಗಿದೆ.ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಒಲವು ತೋರಿಸಿಲ್ಲ. ಈ ಹಿನ್ನೆಲೆ ಪ್ರಕರಣಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಇತ್ತೀಚಿನ ದಿನಗಳಲ್ಲಿ ಬಿಡಿಎ, ಬಿಬಿಎಂಪಿ ಹಾಗೂ ವಿವಿಧ ಸರ್ಕಾರಿ ಇಲಾಖೆಯ ಅಧಿಕಾರಿಗಳ ಮೇಲೆ ಎಸಿಬಿ(Anti Corruption Bureau) ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದ ಅಧಿಕಾರಿಗಳಿಗೆ ಕಾರ್ಯದೊತ್ತಡ ಹೆಚ್ಚಾಗಿದೆ. ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಪರಿಣಾಮ ತ್ವರಿತಗತಿಯಲ್ಲಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ವಿಳಂಬವಾಗುತ್ತಿದೆ. ಸಮಸ್ಯೆಗೆ ಇತಿಶ್ರೀ ಹಾಡಲು ಹೆಚ್ಚಿನ ಸಂಖ್ಯೆಯಲ್ಲಿ 140 ಅಧಿಕಾರಿ/ ಸಿಬ್ಬಂದಿ ನೇಮಕಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದರೂ ರಾಜ್ಯ ಸರ್ಕಾರ ಕ್ಯಾರೆ ಅಂದಿಲ್ಲ. ಇದರಿಂದ ಅಧಿಕಾರಿ ವರ್ಗ ಒತ್ತಡದಲ್ಲಿಯೇ ಕಾರ್ಯನಿರ್ವಹಿಸಬೇಕಾಗಿದೆ.
ಇದನ್ನೂ ಓದಿ : ಡಿ.ಕೆ.ಶಿವಕುಮಾರ್ಗೆ ಸಿದ್ದರಾಮಯ್ಯ ವಿಲನ್ ಆಗಿದ್ದಾರೆ: ಬಿಜೆಪಿ
ಲೋಕಾಯುಕ್ತದಲ್ಲಿ 747, ಎಸಿಬಿಯಲ್ಲಿ 447 ಸಿಬ್ಬಂದಿ ಮಾತ್ರ
2016ರಲ್ಲಿ ಉದಯವಾದ ಎಸಿಬಿಯು ಬೆಂಗಳೂರು ಹಾಗೂ ಸೇರಿದಂತೆ ರಾಜ್ಯದಲ್ಲಿ ಎಂಟು ವಲಯಗಳ ವಿಭಾಗಗಳಿವೆ. ದಲಾಯತ್, ಲಿಪಿಕ ಸಿಬ್ಬಂದಿ ಹುದ್ದೆಗಳು ಹೊರತುಪಡಿಸಿದರೆ ಒಟ್ಟು 447 ಕಾರ್ಯಕಾರಿ ಅಧಿಕಾರಿ ಹಾಗೂ ಸಿಬ್ಬಂದಿಯಿದ್ದಾರೆ. ಪೊಲೀಸ್ ಸ್ಟೇಷನ್(Police Station) ಬಲ ಇಲ್ಲದಿರುವ ಲೋಕಾಯುಕ್ತದಲ್ಲಿ 747 ಕಾರ್ಯಕಾರಿ ಸಿಬ್ಬಂದಿಯಿದ್ದಾರೆ. ಎಸಿಬಿಗೆ ಹೋಲಿಸಿದರೆ ಲೋಕಾಯುಕ್ತದಲ್ಲಿ 300 ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
140 ಹುದ್ದೆಗಳು ಹೊಸ ಹುದ್ದೆ ಸೃಷ್ಟಿಸಲು ಕೋರಿ ಪ್ರಸ್ತಾವನೆ
ಪ್ರಕರಣ ದಾಖಲಿಸಿ ಬಂಧನ ಅಧಿಕಾರ ಹೊಂದಿರುವ ಇದು ಎಸಿಬಿಯಲ್ಲಿ 447 ಅಧಿಕಾರಿ ಹಾಗೂ ಸಿಬ್ಬಂದಿಯಿದ್ದಾರೆ. ಎಸಿಬಿ ರಚನೆಯಾದಾಗಿನಿಂದ ಈವರೆಗೂ ಸಿಬ್ಬಂದಿ ನೇಮಕಾತಿ ವಿಚಾರವಾಗಿ ಪರಿಷ್ಕೃತ ಆದೇಶವಾಗಿಲ್ಲ.ಇದರಿಂದ ಅಧಿಕಾರಿಗಳ ಕಾರ್ಯದೊತ್ತಡ ಹೆಚ್ಚಾಗಿದೆ. ಅಲ್ಲದೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಎಸಿಬಿಯಲ್ಲಿ ಅಂದುಕೊಂಡಂತೆ ದೂರುಗಳು ದಾಖಲಾಗದಿದ್ದರೂ, ಬಲ ಹೆಚ್ಚಾಗಿದೆ.
ಈಗಿರುವ 447 ಕಾರ್ಯಕಾರಿ ಸಿಬ್ಬಂದಿ(Staff) ಜೊತೆ ಹೆಚ್ಚುವರಿಯಾಗಿ ಇನ್ನಷ್ಟು ಸಂಖ್ಯೆಯಲ್ಲಿ ಹೊಸ ಹುದ್ದೆಗಳು ಸೃಷ್ಟಿಸಬೇಕಿದೆ. ಡಿವೈಎಸ್ಪಿ 1, ಪಿಐ 2, ಎಸ್ಐಐ 51, ಸಿಎಚ್ ಸಿ 79, ಸಿಪಿಸಿ 7 ಸೇರಿದಂತೆ ಒಟ್ಟು 140 ಹುದ್ದೆಗಳನ್ನು ಹೊಸದಾಗಿ ಸೃಷ್ಟಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಎಸಿಬಿಗೆ ಪ್ರತಿವರ್ಷ 1500 ರಿಂದ 2 ಸಾವಿರ ದೂರುಗಳು
ಬೆಂಗಳೂರು ನಗರ ಎಸಿಬಿ ವಿಭಾಗ(Bangalore City ACB Division)ದಲ್ಲಿ 35 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆ ಯಾವುದಕ್ಕೂ ಸಾಲದಾಗಿದೆ. ನಗರದ ಯಾವುದೇ ಲಾಂಡ್ ಆರ್ಡರ್ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ 60 ರಿಂದ 100 ಮಂದಿ ಪೊಲೀಸರು ಇರುತ್ತಾರೆ. ಆದರೆ ಇಡೀ ಬೆಂಗಳೂರಿನಲ್ಲಿ ಭ್ರಷ್ಟಾಚಾರ ತಡೆಯುವ ಜವಾಬ್ದಾರಿ ಹೊತ್ತಿರುವ ಎಸಿಬಿಯಲ್ಲಿ 35 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿವರ್ಷ ನೂರಾರು ಕೇಸ್ ಗಳು ಬೆಂಗಳೂರು ಎಸಿಬಿಯಲ್ಲಿ ಪ್ರಕರಣ ದಾಖಲಾಗುತ್ತಿವೆ. ಅಲ್ಲದೆ 1500 ರಿಂದ 2000 ಸಾವಿರ ದೂರುಗಳು ಬರುತ್ತವೆ. ಬರುವ ದೂರುಗಳನ್ನು ಪರಿಶೀಲಿಸಬೇಕಾದರೆ ಅಗತ್ಯಕ್ಕನುಗುಣವಾಗಿ ಸಿಬ್ಬಂದಿ ಇರಬೇಕಾಗುತ್ತದೆ. ಆದರೆ ಸಿಬ್ಬಂದಿ ಇಲ್ಲದಿರುವುದೇ ಅಧಿಕಾರಿಗಳಿಗೆ ಕಾರ್ಯದೊತ್ತಡ ಹೆಚ್ಚಾಗುವಂತಾಗಿದೆ.
ಇದನ್ನೂ ಓದಿ : HD Kumaraswamy : 'ಕರ್ನಾಟಕದ ದುಃಸ್ಥಿತಿಗೆ ಸಿದ್ದರಾಮಯ್ಯ ಮೂಲ ಕಾರಣ'
ಎಸಿಬಿ ಹಾಗೂ ಲೋಕಾಯುಕ್ತದಲ್ಲಿರುವ ಸಿಬ್ಬಂದಿ ವಿವರ
ಅಧಿಕಾರಿಗಳು | ಎಸಿಬಿ | ಲೋಕಾಯುಕ್ತ |
ಎಡಿಜಿಪಿ | 1 | 1 |
ಐಜಿಪಿ | 1 | 1 |
ಎಸ್ಪಿ | 10 | 23 |
ಡಿವೈಎಸ್ಪಿ | 35 | 43 |
ಪಿಐ | 75 | 90 |
ಪಿಎಸ್ಐ | 0 | 13 |
ಎಸ್ಐಐ | 0 | 04 |
ಸಿಎಚ್ ಸಿ | 50 | 145 |
ಸಿಪಿಸಿ | 150 | 234 |
ವಾಹನ ಚಾಲಕರು | 81 | 148 |
ಒಟ್ಟು | 447 | 747 |
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.